ಪ್ರೇಮ ಖಡ್ಗ

Author : ಎಂ. ಕುಮಾರ್‌

Pages 142

₹ 150.00




Year of Publication: 2019
Published by: ಅಕ್ಷಯ ಯೋಧ ಪಬ್ಲಿಕೇಶನ್ಸ್
Address: 2 /236, ಉಪ್ಪಾರ ಬೀದಿ, ಕೊಳ್ಳೆಗಾಲ, ಚಾಮರಾಜಪೇಟೆ-571440
Phone: 7619409491

Synopsys

ಅಪ್ಯಾಯಮಾನವಾದ ಎರಡು ಅಕ್ಷರಗಳ 'ಪ್ರೀತಿ' ಸುತ್ತ ಗಿರಿಕಿ ಹೊಡೆಯುವ ಕಥಾವಸ್ತು 'ಪ್ರೇಮ ಖಡ್ಗ'. ಇಲ್ಲಿ ಪ್ರೇಮ ಮತ್ತು ಖಡ್ಗ ಎಂಬ ಎರಡು 'ಝಲಕ್'ಗಳು ಸಮ್ಮೋಹನಗೊಳಿಸಿ ಬಿಡುತ್ತವೆ. ಹಸಿರು ಮುಖದ ಮಲೆ ಮೇಲೆ ಸುಖಾಸುಮ್ಮನೆ ಅಡರಿ ಕೂರುವ ತಣ್ಣನೆಯ ಇಬ್ಬನಿ ಹಾಗೆ! 'ಪ್ರೇಮ ಖಡ್ಗ' ಎಣಿಕೆಗೆ ನಿಲುಕದ ಪ್ರೀತಿಗಳು ಅಗಣಿತ ಆಕಾಶವಸ್ತ್ರದಂತೆ ಬಿಚ್ಚಿಕೊಳ್ಳುತ್ತವೆ. ಇಡೀ ಕಥಾಹಂದರ ಪ್ರೀತಿ ಪಕಳೆಯೊಳಗೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ನಾಯಕ ಯುವನಾಶ್ವ, ನಾಯಕಿ ನಾಗಶ್ರೀ -ಇವು ಪ್ರೀತಿಯ ನದಿಯಲ್ಲಿ ಮಿಂದೆದ್ದು ಏಳುವ ಪಾತ್ರಗಳು. ಯುವನಾಶ್ವ ಒಬ್ಬ ಯೋಧ, ಅಷ್ಟೇ ಅಲ್ಲ ಯೋಧನ ಮಗ ಕೂಡ. ಅಸಾಮಾನ್ಯನೆನಿಸುವ ರೂಪ, ದೇಹಧಾರ್ಡ್ಯಗಳಿದ್ದರೂ 'ಆಸರೆ' ಬೇಡುವ ಯುವಕ. ಆತ ಅರಸಿ ಬಂದಿದ್ದೇ ಅರಸನ ಅರಮನೆಯನ್ನು.  ಆದರೆ ಅರಸನ ಮಗಳು 'ಚಿಕ್ಕರಸಿಯನ್ನೇ ತನ್ನ ಪ್ರೀತಿಯಲ್ಲಿ ಹೇಗೆ ಸಮ್ಮೋಹನಗೊಳಿಸುವ ಪ್ರಸಂಗ ಓದುಗರನ್ನು ಅಚ್ಚರಿಗೊಳಿಸುತ್ತದೆ.

About the Author

ಎಂ. ಕುಮಾರ್‌
(12 January 1997)

ಕಾದಂಬರಿಗಾರ, ಕತೆಗಾರ ಕುಮಾರ್‌ ಮೂಲತಃ ಚಾಮರಾಜಪೇಟೆಯವರು. ಹುಟ್ಟಿದ್ದು 1997 ಜನವರಿ 2ರಂದು. ’ಈ ಗ್ಯಾಲಕ್ಸಿ ಬಿಟ್ಟು ಆಚೆ ಹೋಗಿ ಬದುಕುವಷ್ಟು ದೊಡ್ಡವು’ ಎಂದು ತಮ್ಮ ಕನಸುಗಳ ಬಗ್ಗೆ ಹೇಳಿಕೊಂಡಿದ್ದಾರೆ. ’ಪ್ರೇಮ ಖಡ್ಗ’ ಅವರ ಮೊದಲ ಕಾದಂಬರಿ. ’ನಾಗಕೇಸರಿ’ ಅವರ ಮತ್ತೊಂದು ಕಾದಂಬರಿ ಪ್ರಕಟಣೆಗೆ ಸಿದ್ದವಾಗುತ್ತಿದೆ. ...

READ MORE

Related Books