`ಆಯ್ದ ಅನುವಾದಿತ ಕಥೆಗಳು’ ವಿ.ಗಣೇಶ್ ಅವರ ಕಥಾಸಂಕಲನವಾಗಿದೆ. “ಕಲಾವಿದರ ಹೃದಯವಿರುವುದು ಅವರ ಮೆದುಳಿನಲ್ಲಿ ನಾವು ಪ್ರಪಂಚವನ್ನು ಚಿತ್ರಿಸುವುದು ಅದರ ಮೂಲ ರೂಪದಲ್ಲಿಯೇ ವಿನಾ ಊಹಿಸಿ ಕೊಂಡಂತಲ್ಲ.” “ನೀನು ತಿಳಿದುಕೊಂಡಂತೆ ಆ ವ್ಯಕ್ತಿ ಒಬ್ಬ ಬಡ ಭಿಕ್ಷುಕನಲ್ಲ. ಅವನೊಬ್ಬ ಭಾರೀ ಶ್ರೀಮಂತ, ಅವನು ಮನಸ್ಸು ಮಾಡಿದರೆ ಇಡೀ ಬೆಂಗಳೂರು ನಗರವನ್ನೇ ಕೊಳ್ಳಬಲ್ಲ. ಪ್ರತಿಯೊಂದು ದೊಡ್ಡ ನಗರಗಳಲ್ಲೂ ಅವನ ಒಂದೊಂದು ಮನೆಗಳಿವೆ. ಅವನು ಪ್ರತಿದಿನ ಬಂಗಾರದ ತಟ್ಟೆಯಲ್ಲಿ ಊಟ ಮಾಡುತ್ತಾನೆ. ಮನಸ್ಸು ಮಾಡಿದರೆ ಅವನು ಚಂದ್ರಗ್ರಹಕ್ಕೂ ಕಾಲಿಡಬಲ್ಲ.” “ಆ ಭಿಕ್ಷುಕ ಬೇರಾರೂ ಅಲ್ಲ. ನಮ್ಮೂರಿನ ಆಗರ್ಭ ಶ್ರೀಮಂತನಾದ ಶ್ರೀ ರಮಾನಂದ ಸಾಗರ್, ಆತ ನನ್ನ ಆತ್ಮೀಯ ಗಳೆಯ. ಆಗಾಗ ನನ್ನ ಈ ಕಲಾ ಮಂದಿರಕ್ಕೆ ಭೇಟಿ ನೀಡುತ್ತಾನೆ. ನನ್ನಲ್ಲಿ ಹೆಚ್ಚಿನ ಸ್ಫೂರ್ತಿಯನ್ನು ತುಂಬುತ್ತಿರುತ್ತಾನೆ. ಕಳೆದ ತಿಂಗಳು ನನ್ನ ಹತ್ತಿರ ಬಂದು ತನ್ನನ್ನು ಭಿಕ್ಷುಕನ ವೇಷದಲ್ಲಿ ಚಿತ್ರಸಿಬೇಕೆಂದು ಮುಂಗಡ ಹಣವನ್ನು ಕೊಟ್ಟಿದ್ದ. ಅವನು ಭಿಕ್ಷುಕನ ವೇಷದಲ್ಲಿ ನಿಲ್ಲಿಸಿದಾಗ ತುಂಬಾ ಅದ್ಭುತವಾಗಿ ಕಾಣಿಸುತ್ತಿದ್ದ.” ( ಆಯ್ದಭಾಗ)
ವಿ.ಗಣೇಶ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರು. ಎಂ.ಎಸ್.ಸಿ, ಎಂ.ಎ., ಬಿ.ಎಡ್. ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಪ್ರೌಢಶಾಲಾ ಅಧ್ಯಾಪಕರಾಗಿ, ಗಣಿತ ಉಪನ್ಯಾಸಕರಾಗಿ, ಇಂಗ್ಲೀಷ್ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಬಿ.ಎಡ್.ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸುಮಾರು 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 75ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ...
READ MORE