ಮನುಷ್ಯರನ್ನು ತಿನ್ನುವ ಹುಡುಗ

Author : ಸಂತೆಕಸಲಗೆರೆ ಪ್ರಕಾಶ್‌

Pages 136

₹ 75.00




Year of Publication: 2012
Published by: ಸ್ವಪ್ನ ಬುಕ್‌ ಹೌಸ್‌

Synopsys

'ಮನುಷ್ಯರನ್ನು ತಿನ್ನುವ ಹುಡುಗ ಸಂಕಲನದ ಕಥೆಗಳು ಹೊಸತನದಿಂದ ಕೂಡಿದ, ಹೊಸ ಆಲೋಚನಾ ವಿಧಾನಗಳನ್ನು ಮಂಡಿಸುವ ನಿರೂಪಣಾ ವಿನ್ಯಾಸವನ್ನು ಒಳಗೊಂಡಿವೆ. ಇದಕ್ಕೆ ಸಂಕಲನದ ಪ್ರಧಾನ ಕಥೆಯಾದ 'ಮನುಷ್ಯರನ್ನು ತಿನ್ನುವ ಹುಡುಗ ಕಥೆಯನ್ನೇ ಗಮನಿಸಬಹುದು. ಆಧುನಿಕ ಪ್ರಪಂಚದಲ್ಲಿ ದಾಖಲೆಗಳ ಹುಚ್ಚು ಯಾವ ಮಟ್ಟಕ್ಕೆ ಮುಟ್ಟಬಹುದು ಎಂಬುದನ್ನು ಮನೋಜ್ಞವಾಗಿ ಕತೆಗಾರರು ಚಿತ್ರಿಸಿದ್ದಾರೆ. ಹಾಗೆಯೇ ಸಂಕಲನದ ಉಳಿದ ಕಥೆಗಳು ಕೂಡ ಕನ್ನಡ ಕಥನ ಪರಂಪರೆಯನ್ನು ಅರ್ಥಪೂರ್ಣವಾಗಿ ವಿಸ್ತರಿಸುವ ಮಹತ್ವಾಕಾಂಕ್ಷೆಯ ಕಥೆಗಳಾಗಿವೆ. ನಿಂತ ನೆಲ ನನ್ನದಲ್ಲ, ಚಿನ್ನದ ಮೀನುಗಳು ಮತ್ತು ಹರಿದ ನೋಟುಗಳು, ಅಕ್ಕನ ಊರಿನ ಹಳೆಯ ದಾರಿ ಮತ್ತಿತರ ಕತೆಗಳು ಭಿನ್ನ ದೃಷ್ಟಿಕೋನದ ಕತೆಗಳಾಗಿರುವುದಲ್ಲದೆ ಆಧುನಿಕ ಮನುಷ್ಯನ ವಿಚಿತ್ರ ತೆವಲು, ಮನೋವರ್ತನೆಗಳನ್ನು ನಿಕಷಕ್ಕೊಡ್ಡುತ್ತವೆಯಲ್ಲದೆ ಕಳೆದುಹೋಗುತ್ತಿರುವ ಮಾನವೀಯ ಮೌಲ್ಯಗಳ ಕುರಿತು ಚಿಂತನೆ ನಡೆಸಲು ಪ್ರೇರೇಪಿಸುತ್ತವೆ. ಈಗಾಗಲೇ ಮೂರು ಕಥಾಸಂಕಲನಗಳ ಮೂಲಕ ಕನ್ನಡದ ಶಕ್ತ ಕಥೆಗಾರರಲ್ಲೊಬ್ಬರಾಗಿ ಗುರುತಿಸಿಕೊಂಡಿರುವ ಸಂತೆಕಸಲಗೆರೆ ಪ್ರಕಾಶ್ ಅವರು ಈ ಸಂಕಲನದ ಮೂಲಕ ಮತ್ತಷ್ಟು ಜನಮೆಚ್ಚುಗೆ ಪಡೆಯಲೆಂದು ಹಾರೈಸುತ್ತೇನೆ. ಡಾ. ಸಿದ್ದಲಿಂಗಯ್ಯ ಅವರು ಪುಸ್ತಕದ ಹಿನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಸಂತೆಕಸಲಗೆರೆ ಪ್ರಕಾಶ್‌

ಮಂಡ್ಯ ಜಿಲ್ಲೆಯ ಸಂತೆಕಸಲಗೆರೆ ಗ್ರಾಮದವರು. ತಂದೆ ತಿಮ್ಮಪ್ಪಯ್ಯ ,ತಾಯಿ ಲಕ್ಷ್ಮಮ ,ಪ್ರಸ್ತುತ ಹೊಸದಿಗಂತ ದಿನಪತ್ರಿಕೆ , ಹಿರಿಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ಸಮ್ಮಿಲನ(ಕವನ ಸಂಕಲನ-1993), ವಳ್ಳೂರ ನೆನೆದೇನು (1996). ಮುತ್ತಕೇರೋಕೆ ಮೊರವಾದ (1998), (ಗ್ರಾಮಗಳ ಸ್ಥಳ ಪುರಾಣ ಕುರಿತ ಜಾನಪದ ಕೃತಿಗಳು), ಭಾಗಾಯ(1999) (ತೋಟದ ಬೆಳೆಗಳು  ಕುರಿತು ಜಾನಪದ ಅಧ್ಯಯನ ಕೃತಿ) ಒಂದು ಸ್ವರ್ಗಕ್ಕಾಗಿ ,ಕರಗಿ ಹೋದವಳು, ನೀರು ನಿಂತ ನೆಲ, ಕತೆಗೂ ಊರಿಗೂ ಅಪಾರ ನಂಟು ( ಸಮಗ್ರ ಕತೆಗಳು)  ಮೆಲ್ಲಗೆ ಹಬ್ಬಿತ್ತು ಮಲ್ಲಿಗೆ ಗಮಲು ( ಜಾನಪದ ಗ್ರಾಮಗಳ ಆಧ್ಯಯನ). ಗ್ರಾಮಗಳ ಕುರಿತ ಸ್ಥಳಪುರಾಣ, ಜಾನಪದ ಅಧ್ಯಯನ ...

READ MORE

Related Books