`ಜಯಂತಿಪುರದ ಕತೆಗಳು' ಶ್ರೀಧರ ಬನವಾಸಿ ಅವರ ಕಥಾಸಂಕಲನವಾಗಿದೆ. ಇದರಲ್ಲಿ ಜಯಂತಿಪುರದ ಸಮಗ್ರ ಚಿತ್ರಣ ಅನಾವರಣಗೊಂಡಿದ್ದು, ಜಯಂತಿಪುರದ ಮಡಿಲಲ್ಲಿ ಸಂಭವಿಸಿದ ಘಟನೆಗಳನ್ನು ಬಿಡಿಬಿಡಿಯಾಗಿ ಕತೆಗಳ ರೂಪದಲ್ಲಿ ನಿರೂಪಿಸಿದ್ದಾರೆ. ಈ ಕೃತಿಯು ಬೃಹತ್ಕತೆ ಅಥವಾ ಕಾದಂಬರಿಯ ಬಿಡಿ ಅಧ್ಯಾಯವಾಗಿ ಮೂಡಿ ಬಂದಿದ್ದು, ಒಂದು ಅಧ್ಯಾಯವು ಮುಂದಿನ ಅಧ್ಯಾಯಕ್ಕೆ ಪೂರಕವಾಗಿರುವಂತೆ ರೂಪಿಸಲ್ಪಟ್ಟಿದೆ. ಜಯಂತಿಪುರದ ಚಿತ್ರಣವೊಂದು ರೂಪುಗೊಳ್ಳುವುದನ್ನು ಇಲ್ಲಿ ನೋಡಬಹುದು. ಇಲ್ಲಿ ಒಟ್ಟೂ ಹನ್ನೆರಡು ಕಥೆಗಳಿವೆ. ಪ್ರೇಮ-ಕಾಮ, ದುರಾಸೆ, ಮೂಢನಂಬಿಕೆ, ಅಸಹಾಯಕತೆ ಹೀಗೆ ವಿವಿಧ ನೆಲೆಗಳಲ್ಲಿ ಘಟಿಸುವ ಸಂಗತಿಗಳನ್ನು ಲೇಖಕರು ಇಲ್ಲಿ ಗ್ರಹಿಸುತ್ತಾರೆ.
'ಫಕೀರ’ ಎಂಬ ಅಂಕಿತದಲ್ಲಿ ಬರೆಯುವ ಶ್ರೀಧರ ಬನವಾಸಿ ಅವರು ಕತೆ-ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ 1985 ಫೆಬ್ರುವರಿ 6 ರಂದು ಜನಿಸಿದರು. ಬನವಾಸಿ ಉಜಿರೆ ಹಾಗೂ ದಾವಣಗೆರೆಯಲ್ಲಿ ಶಿಕ್ಷಣಾಭ್ಯಾಸ ಪೂರ್ಣಗೊಳಿಸಿ ಮೆಕ್ಯಾನಿಕಲ್ ಎಂಜನಿಯರಿಂಗ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಅಧ್ಯಯನ ಮಾಡಿದ್ದಾರೆ. ಕಾಲೇಜು ದಿನಗಳಿಂದಲೇ ಕತೆ, ಕಾವ್ಯ, ಅಂಕಣ ಬರಹಗಳಲ್ಲಿ ಆಸಕ್ತಿ ಇರುವ ಅವರು ‘ಅಮ್ಮನ ಆಟ್ರೋಗ್ರಾಫ್’, ’ದೇವರ ಜೋಳಿಗೆ’, ’ಬ್ರಿಟಿಷ್ ಬಂಗ್ಲೆ’, ‘ಬೇರು’ ಪುಸ್ತಕಗಳ ಮೂಲಕ ಕನ್ನಡ ಕಥಾಕ್ಷೇತ್ರದಲ್ಲಿ ಮಹತ್ವದ ಕಥೆಗಾರರಾಗಿ ಶ್ರೀಧರ ಬನವಾಸಿ ಗುರುತಿಸಿಕೊಂಡಿದ್ದಾರೆ. ಶ್ರೀಧರ್ ಅವರು ಹಲವು ವರ್ಷಗಳ ಕಾಲ ಮಾಧ್ಯಮ ಮತ್ತು ...
READ MORE