ಬಿಟ್ಟ ಸ್ಥಳ

Author : ಪ್ರಜ್ಞಾ ಮತ್ತಿಹಳ್ಳಿ

Pages 128

₹ 200.00




Year of Publication: 2020
Published by: ಅಭಿನವ ಪ್ರಕಾಶನ
Address: 17/18-2, 1ನೇ ಮುಖ್ಯರಸ್ತೆ, ಮಾರೆನಹಳ್ಳಿ, ವಿಜಯನಗರ, ಬೆಂಗಳೂರು- 560040

Synopsys

‘ಬಿಟ್ಟ ಸ್ಥಳ’ ಪ್ರಜ್ಞಾ ಮತ್ತಿಹಳ್ಳಿ ಅವರ ಕಥಾಸಂಕಲನ. ಈ ಕೃತಿಗೆ ಖ್ಯಾತ ಲೇಖಕಿ ವೈದೇಹಿ ಬೆನ್ನುಡಿ ಬರೆದಿದ್ದಾರೆ. ‘ಬಹುಮುಖೀ ಅನುಭವಗಳೊಂದಿಗೆ ಅವುಗಳ ಅಭಿವ್ಯಕ್ತಿಗೆ ಬೇಕಾದ ಪರಿಕರಗಳನ್ನೂ ಹೊಂದಿರುವ ಲೇಖಕಿ ಪ್ರೀತಿಯ ಪ್ರಜ್ಞಾ ಮತ್ತಿಹಳ್ಳಿ ಅವರ ಪ್ರಥಮ ಕಥಾ ಸಂಕಲನವಿದು. ಉತ್ತರ ಕನ್ನಡದ ಜನ, ಅವರ ಭಾವ-ಚರ್ಯೆ, ಹವಿಗನ್ನಡ, ಧಾರವಾಡ ಕನ್ನಡದ ಲಯಗಾರಿಕೆ, ಕಥೆಯ ನೇಯ್ಗೆಯಲ್ಲೇ ಪುಟಿಯುವ ಮೃದು ಹಾಸ್ಯ, ಈ ಎಲ್ಲದರೊಂದಿಗೆ ಇಲ್ಲಿನ ಕಥೆಗಳ ಒಡಲು ಬಿಚ್ಚಿಕೊಳ್ಳುತ್ತದೆ. ಕವಿ ಮತ್ತು ಪ್ರಬಂಧಗಾರ್ತಿ ಅಷ್ಟೇ ಅಲ್ಲ, ಪ್ರಜ್ಞಾ ಒಬ್ಬ ಯಕ್ಷಗಾನ ಕಲಾವಿದೆಯೂ ಆಗಿರುವುದರಿಂದಾಗಿ ಅವರ ಕತೆಗಾರಿಕೆಗೆ ಅವರದೇ ಆದೊಂದು ಕೆನ್ವಾಸು ಲಭ್ಯವಾಗಿರುವುದು ಅತ್ಯಂತ ಗಮನಾರ್ಹ ಸಂಗತಿ ಎನ್ನುತ್ತಾರೆ ವೈದೇಹಿ.

ಇಲ್ಲಿನ ಕಥೆಗಳು ಆಧುನಿಕತೆಯ ಸ್ಪರ್ಶದೊಂದಿಗೆ ತರುಣ ಲೋಕವನ್ನೇ ಹೆಚ್ಚು ತೆರೆದಿಡುವುದು ಕುತೂಹಲಕಾರಿ. ನಿರೂಪಣೆಯ ಹಿನ್ನೆಲೆಯಲ್ಲಿ ಕಾಣುವ ತಾಳಮದ್ದಲೆಯ ಸಂಸ್ಕಾರದ ಒಂದು ವಿಶಿಷ್ಟ ಧ್ವನಿಯೂ ಕೆಲ ಅಪೂರ್ವ ನುಡಿಚಿತ್ರಗಳೂ ಇಲ್ಲಿನ ಪರ್ಯಾವರಣಕ್ಕೆ ತಾಜಾತನ ಕೊಡಮಾಡಿವೆ. ಎಂತಲೇ ಕಥಾಮಾರ್ಗದಲ್ಲಿ ಪ್ರಜ್ಞಾ ಅವರ ಮುಂದಿನ ನಡೆಯ ಬಗ್ಗೆ ಅಪಾರ ಭರವಸೆಯಿಂದ ಎದುರು ನೋಡುವಂತಾಗಿದೆ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

About the Author

ಪ್ರಜ್ಞಾ ಮತ್ತಿಹಳ್ಳಿ
(02 April 1969)

ಲೇಖಕಿ ಪ್ರಜ್ಞಾ ಮತ್ತಿಹಳ್ಳಿ ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರು. 1969ರ ಏಪ್ರಿಲ್  02ರಂದು ಜನಿಸಿದ ಅವರು ವಾಣಿಜ್ಯಶಾಸ್ತ್ರದಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ.  ಪ್ರಜ್ಞಾ ಮತ್ತಿಹಳ್ಳಿ ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸೃಜನಶೀಲ ಪ್ರಯೋಗ ಮಾಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಥೆ, ಕಾವ್ಯದ ಜೊತೆಗೆ ಹಾಸ್ಯ ಲೇಖನಗಳನ್ನು ಬರೆದಿರುವ ಅವರಿಗೆ ನಾಟಕ ರಚನೆ ಕೂಡ ಆಸಕ್ತಿಯ ಕ್ಷೇತ್ರ. ಅವರ ಕಥೆಗಳು ಮತ್ತು ಕವನಗಳು ನಾಡಿನ ವಿವಿಧ ಪತ್ರಿಕೆಗಳ ವಿಶೇಷಾಂಕಗಳ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿವೆ. ನುರಿತ ಯಕ್ಷಗಾನ ಕಲಾವಿದೆಯೂ ಆಗಿರುವ ಅವರು ಅದಕ್ಕಾಗಿ ಶಾಸ್ತ್ರೀಯ ತರಬೇತಿ ಪಡೆದಿದ್ದಾರೆ. ಅವರ ಪ್ರಕಟಿತ ...

READ MORE

Related Books