ಸಾಮಾಜಿಕ ಜಾಲತಾಣಗಳ ಓದುಗರಿಗೆ ಅನುಕೂಲವಾಗುವಂತೆ ಕಿರುಕತೆಗಳು ಹುಟ್ಟಿಕೊಳ್ಳುತ್ತಿವೆ. ಇದೇ ಸಂದರ್ಭದಲ್ಲಿ 'ನ್ಯಾನೋ ಕತೆ'ಗಳೆಂಬ ವಿಭಿನ್ನವಾದ ಪ್ರಯೋಗಗಳೂ ನಡೆಯುತ್ತಿವೆ. ಕೆಲವೇ ಸಾಲುಗಳಲ್ಲಿ ಧ್ವನಿಯನ್ನು ಸ್ಫೋಟಿಸುವ ಈ ಪ್ರಯೋಗ ಹೆಚ್ಚು ಹೆಚ್ಚು ಜನಪ್ರಿಯವೂ ಆಗುತ್ತಿದೆ. ಸಣ್ಣ ಝಲಕ್‌ನ್ನು ಇಟ್ಟುಕೊಂಡು ನಾಲ್ಕೇ ಸಾಲುಗಳಲ್ಲಿ ಕತೆಗಳನ್ನು ಹೇಳುವುದು. ಒಂದು ರೀತಿಯಲ್ಲಿ ಝೆನ್ ಮಾದರಿಯ ಅನುಕರಣೆ ಇದು. ಝೆನ್ ಕತೆಗಳು ಈಗಾಗಲೇ ಜನಪ್ರಿಯವಾಗಿವೆ. ಅದು ಬೇರೆ ಬೇರೆ ರೂಪಗಳಲ್ಲಿ ಭಾರತೀಕರಣಗೊಂಡಿದೆ. ಸಾದತ್ ಹಸನ್ ಮಾಂಟೋ ಅವರು, ಭಾರತದ ವಿಭಜನೆಯ ಕ್ರೌರ್ಯಗಳನ್ನು ಹೇಳಲು ಇಂತಹ ಕಿರು ಸಾಲುಗಳ ತಂತ್ರವನ್ನು ಬಳಸಿಕೊಂಡಿದ್ದರು. ಒಂದೆರಡು ವಾಕ್ಯಗಳಲ್ಲಿ ಅಂದಿನ ಕೌರ್ಯದ ದಿನಗಳನ್ನು ವಿಡಂಬನೆ ಮಾಡುತ್ತಿದ್ದರು. ಇತ್ತೀಚೆಗೆ ಈ ತಂತ್ರ ಬೇರೆ ಬೇರೆ ರೀತಿಯಲ್ಲಿ ವಿಸ್ತರಿಸಿಕೊಳ್ಳುತ್ತಿದೆ. ಬೆಳಕಿನ ಬೇಲಿ' ಕೃತಿ ಇದೇ ತಂತ್ರದಿಂದ ರೂಪುಗೊಂಡವುಗಳು. ಶರತ್ ಎಚ್. ಕೆ. ಅವರು ಇಲ್ಲಿ ಸಣ್ಣ ಸಣ್ಣ ಹನಿಗಳ ಮೂಲಕ ಓದುಗರನ್ನು ಸೆಳೆಯುತ್ತಾರೆ.
ಮೂಲತಃ ಹಾಸನದ ಎಚ್.ಕೆ. ಶರತ್, ಹಾಸನದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ. ಹಾಗೂ ಎಂ.ಟೆಕ್ ಪೂರ್ಣಗೊಳಿಸಿದ್ದಾರೆ. ಈಗ ಅದೇ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದು, 'ಮೊದಲ ತೊದಲು', 'ಬೆಳಕಿನ ಬೇಲಿ', 'ಗೋಡೆಗಳ ನಡುವೆ...' ಮತ್ತು 'ಕುಶಲೋಪರಿ' ಪ್ರಕಟಿತ ಕೃತಿಗಳು. ಸದ್ಯ ಹಾಸನ ನಿವಾಸಿಯಾಗಿರುವ ಎಚ್.ಕೆ. ಶರತ್ ಅವರು ’ಪ್ರಜೋದಯ ಪ್ರಕಾಶನ’ ನಡೆಸುತ್ತಿದ್ದಾರೆ.’ ಪ್ರಜೋದಯ’ವು ಎಂಬ ಆನ್‌ಲೈನ್‌ನಲ್ಲಿ ಪುಸ್ತಕ ಮಾರಾಟ ನಡೆಸುತ್ತಿದೆ. ...
READ MORE