‘ವೀರಸೈನಿಕ’ ಕಿಶೋರ ಸಾಹಿತಿ ಅಂತಃಕರಣನ ಕಥಾ ಸಂಕಲನ. ಈ ಕೃತಿಗೆ ಲೇಖಕಿ ಸುನಂದ ಕಡಮೆ ಮುನ್ನುಡಿ ಬರೆದಿದ್ದು, ಈ ಕತೆಗಳನ್ನು ಓದುವುದೇ ಒಂದು ರೀತಿಯ ಖುಷಿ ಎನ್ನುತ್ತಾರೆ.
ಈ ಪುಟಾಣಿಯ ಬರಹಗಳು ಎಲ್ಲರೊಡನೆ ಒಂದುಗೂಡಿ, ಹಂಚಿ ತಿನ್ನುವ ಉದಾರತೆಯನ್ನು ಮೆರೆಯುತ್ತವೆ. ಎಲ್ಲ ಕತೆಗಳೂ ಬಡವರಿಗೆ, ಹಸಿದವರಿಗೆ ದಾನಧರ್ಮ ಮಾಡುವ ಮನಸ್ಸುಳ್ಳವು. ವಿಡಿಯೋ ಗೇಮ್ ಆಡುವ ರೀತಿಯನ್ನು ವರ್ಣಿಸುವಂತೆ ಯುದ್ಧದ ಸನ್ನಿವೇಶ ಕಟ್ಟಿಕೊಡುವ ಅಂತಃಕರಣ, ಈ ಮುಗ್ಧತೆಯಲ್ಲೂ ಗಂಭೀರವಾದ ವಿಷಯಗಳ ಜೊತೆ ಮುಖಾಮುಖಿಯಾಗುವುದು ಅಚ್ಚರಿ ಮೂಡಿಸುತ್ತದೆ.
‘ಯುದ್ಧ ಬೇಕಾ’ ಎಂಬ ಕತೆ ತೀವ್ರವಾಗಿ ಕಾಡುತ್ತದೆ. ಯುದ್ಧಗಳು ಬೇಕೋ ಬೇಡವೋ ಎಂಬ ಪ್ರಸ್ತುತದ ಚರ್ಚೆಯನ್ನೆತ್ತಿಕೊಂಡು ಮುಗ್ಧವಾಗಿಯೇ ಸ್ಪಂದಿಸುವ ಅಂತಃಕರಣ, ಅಲ್ಲಿ ಬರುವ ವೃದ್ಧನೊಬ್ಬ, ಆಸ್ಪತ್ರೆಗಳು ಹಾಗೂ ಔಷಧಿಗಳ ವಿನಿಮಯದ ಸಂಧಾನದೊಂದಿಗೆ ಯುದ್ಧ ನಿಲ್ಲಿಸಿದ ಕತೆಯನ್ನು ತೆರೆದಿಡುತ್ತಾನೆ. ಅಂತಃಕರಣನ ಇಲ್ಲಿಯ ಬಾಲ ಭಾಷೆ ಮೈಮರೆಸುವಂಥದು.
ಅಂತಃಕರಣ ತನ್ನ 4ನೇ ಕ್ಲಾಸಿನಿಂದ 'ಎಚ್ಚರಿಕೆ', 'ಜೀವನ್ಮುಖಿ' ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲ ಪತ್ರಿಕೆ 'ವಿಶ್ವಕನ್ನಡಿಗ'ದಲ್ಲಿ ವಾರಕ್ಕೆ 2 ಅಂಕಣ ಬರೆಯುತ್ತಿರುವ ಅಂಕಣಕಾರ. ಇದುವರೆಗೆ ಕ್ರೀಡಾಂಕಣಗಳೂ ಸೇರಿದಂತೆ 500 ಅಂಕಣಪ್ರಬಂಧ, 95 ಕವಿತೆ, 78 ಕತೆ, 4 ಕಾದಂಬರಿ ಮತ್ತು 1 ನಾಟಕಗಳನ್ನು ರಚಿಸಿರುವ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆಯುವ ಲೇಖಕ. 9ನೇ ತರಗತಿಯೊಳಗೆ 4 ಸಮಗ್ರ ಬರಹಗಳ ಕೃತಿಗಳು ಸೇರಿದಂತೆ ಒಟ್ಟು 30 ಕೃತಿಗಳನ್ನು ರಚಿಸಿರುವ ಪುಟ್ಟ ಸಾಹಿತಿ. ಪ್ರಸ್ತುತ ಶಿವಮೊಗ್ಗದ ಲೊಯಲಾ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ. ಕನ್ನಡ ಪ್ರವೇಶ, ಕಾವ ಸಾಹಿತ್ಯ ಪರೀಕ್ಷೆಗಳಲ್ಲಿ ಮತ್ತು ...
READ MORE