‘ಜಾಂಬ್ಳಿ ಟುವಾಲು’ ಲೇಖಕ ರಾಜು ಹೆಗಡೆ ಅವರ ಕತಾ ಸಂಕಲನ. ಇಲ್ಲಿ ಉತ್ತರ ಕನ್ನಡದ ವಿಭಿನ್ನ ಕತೆಗಳಿವೆ. ಅಲ್ಲಿಯ ಮನುಷ್ಯರ ಸಾಮಾನ್ಯತನವನ್ನು ಭಾರವಿಲ್ಲದ ಸಹಜತೆಯಲ್ಲಿ ಅಕ್ಷರಕ್ಕೆ ಒಗ್ಗಿಸಿರುವ ರಾಜು ಹೆಗಡೆ, ನೆಲದಿಂದ ಎತ್ತರದಲ್ಲಿ ಹಾರುತ್ತಿದ್ದ ಅದರ ಕತಾ ಜಗತ್ತನ್ನು ನೆಲಮಟ್ಟದಲ್ಲಿರಿಸಿ ಹೆಚ್ಚು ಆಪ್ತಗೊಳಿಸಿದ್ದಾರೆ.
ಅವರ ಕತೆಗಳಲ್ಲಿ ವಿಮರ್ಶಕರ ಪಾಂಡಿತ್ಯ ಹೊರಸೂಸಲು ಅಗತ್ಯವಾದ ಘನ ಗಂಭೀರ ವಿಷಯಗಳು ಸಿಗುವುದು ಕಷ್ಟ ಅಂಥಹ ಕೃತಕ ನುಡಿಗಟ್ಟುಗಳಲ್ಲಿ ರಾಜು ಹೆಗಡೆ ಅವರ ಕಥನ ಕಟ್ಟಿಹಾಕಲು ಬರುವುದಿಲ್ಲ. ಅವರ ಕಥನ ಪ್ರಕ್ರಿಯೆಯಲ್ಲಿ ಮೂರು ಘಟ್ಟಗಳನ್ನು ಗುರುತಿಸಬಹುದು. ಈ ಮೂರೂ ಘಟ್ಟದಲ್ಲಿ ಅವರು ಸಮಕಾಲೀನ ಕನ್ನಡ ಸಣ್ಣಕತೆಗಳ ಪಾರಂಪರಿಕ ಮಾದರಿಯನ್ನಾಗಲಿ ಅದರ ಚೌಕಟ್ಟನ್ನಾಗಲಿ ಅನುಸರಿಸಿಲ್ಲ ಎನ್ನಬಹುದು.
ರಾಜು ಹೆಗಡೆ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾಗೋಡು ಗ್ರಾಮದವರು. 1964 ರ ಜುಲೈ 17ರಂದು ಜನಿಸಿದರು. ಶಿರಸಿಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿರುವ ರಾಜು ಹೆಗಡೆ, ಮನುಷ್ಯ ಸಂಬಂಧಗಳ ಬದಲಾಗುವ ಭಾವಗಳನ್ನು ಕುರಿತು ಕಥೆ ಕವನ ಬರೆಯುವುದರಲ್ಲಿ ವಿಶೇಷ ಆಸಕ್ತಿ ವಹಿಸುತ್ತಾರೆ. ಪ್ರಕಟಿತ ಕೃತಿಗಳು- ಪಾಯಸದ ಗಿಡ, ಅಂಗಳದಲ್ಲಿ ಆಕಾಶ, ಟೊಂಗೆಯಲ್ಲಿ ಸಿಕ್ಕ ನಕ್ಷತ್ರ (ಕವನ ಸಂಕಲನಗಳು), ಅಪ್ಪಚ್ಚಿ (ಕಥಾ ಸಂಕಲನ), ಹಳವಂಡ (ಲಘು ಬರಹಗಳ ಸಂಕಲನ), ಗಿರೀಶ್ ಕಾರ್ನಾಡರ ಸಮಗ್ರ ನಾಟಕಗಳ ಸಮೀಕ್ಷೆ (ವಿಮರ್ಶೆ), ಜಿ.ಎಸ್. ಅವಧಾನಿ ಕವಿತೆಗಳು (ಸಂಪಾದನೆ). ...
READ MORE