ಕ್ರೌಂಚ ಪಕ್ಷಿಗಳು ಕೃತಿಗಳಿಗೆ ಪ್ರೇರಣೆಯಾದ ಘಟನೆಗಳ ಕುರಿತು ತಮ್ಮ ಮನಸ್ಸಿನಲ್ಲುಳಿದ ಚಿತ್ರಗಳೇ ಕಥೆಗಳಿಗೆ ಆಧಾರವಾದವು ಎಂದು ನುಡಿದಿರುವ ಲೇಖಕಿ ವೈದೇಹಿ ಅವರ ಕಾದಂಬರಿ-ಗುಲಾಬಿ ಟಾಕೀಸು. ಈ ಕಥೆಯ ಆಧರಿಸಿ ಗಿರೀಶ ಕಾಸರವಳ್ಳಿ ನಿರ್ದೇಶನದಲ್ಲಿ ಚಲನಚಿತ್ರವೂ ಆಗಿ ಜನಮೆಚ್ಚುಗೆ ಪಡೆಯಿತು. ಸಿನಿಮಾ ಮಾಡುವವರಿಗೆ, ನೋಡುವವರಿಗೆ, ಕಲಿಸುವವರಿಗೆ, ಕಲಿಯುವವರಿಗೆ ಉತ್ತಮವಾದ ಕೈಪಿಡಿಯಾಗಿದೆ ಈ ಕೃತಿ. ಗುಲಾಬಿ ಟಾಕೀಸ್ ಚಿತ್ರಕಥೆ, ಕಥೆ, ವಿಮರ್ಶೆಯನ್ನು ಈ ಕೃತಿಯನ್ನು ಒಳಗೊಂಡಿದೆ.
ಡಾ. ವೈದೇಹಿ ಅವರ ಮೂಲ ಹೆಸರು ಜಾನಕಿ ಶ್ರೀನಿವಾಸಮೂರ್ತಿ. ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದ ಅವರು ಕಾವ್ಯ, ಪ್ರಬಂಧ, ಮಕ್ಕಳ ಸಾಹಿತ್ಯ, ಜೀವನಚಿತ್ರ, ಕೃತಿ ಸಂಪಾದನೆ ಪ್ರಕಾರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಮಾನವ ಸಹಜ ಸಂಬಂಧಗಳು ಮತ್ತು ಹೆಣ್ಣಿನ ಭಾವತರಂಗಗಳನ್ನು ಹಿಡಿದಿಡುವ ಕಥೆ-ಕಾದಂಬರಿ ರಚಿಸಿರುವ ಲೇಖಕಿ. ಮರಗಿಡಬಳ್ಳಿ ಅಂತರಂಗದ ಪುಟಗಳು ಸಮಾಜಶಾಸ್ತ್ರಜ್ಞೆಯ ಟಿಪ್ಪಣಿಗಳು, ಅಮ್ಮಚ್ಚಿ ಎಂಬ ನೆನಪು. ಕತೆ ಕತೆ ಕಾರಣ (ಕಥಾ ಸಂಕಲನಗಳು), ಅಲೆಗಳಲ್ಲಿ ತರಂಗ (ಸಮಗ್ರ ಕಥಾ ಸಂಕಲನ), ಬಿಂದು ಬಿಂದಿಗೆ, ಪಾರಿಜಾತ ಹೂವ ಕಟ್ಟುವ ಕಾಯಕ (ಕವನ ಸಂಕಲನ), ಅಸ್ಪೃಶ್ಯರು (ಕಾದಂಬರಿ), ಮಲ್ಲಿನಾಥನ ಧ್ಯಾನ, ಮೇಜು ಮತ್ತು ...
READ MORE