‘ಮೌನಿ’ ಅನಂತಮೂರ್ತಿಯವರ ಮೂರನೆಯ ಕಥಾಸಂಗ್ರಹ. ಈ ಸಂಗ್ರಹದಲ್ಲಿ ಸಾಕಷ್ಟು ಚರ್ಚೆಗೊಳಗಾದ ‘ಕ್ಲಿಪ್ ಜಾಯಿಂಟ್’, ‘ಮೌನಿ’ ಹಾಗೂ ‘ನವಿಲುಗಳು’ ಎಂಬ ಮೂರು ಕತೆಗಳಿವೆ. ಇಲ್ಲಿಯ ಕತೆಗಳ ರಚನೆಯ ನಾವೀನ್ಯ ತಂತ್ರದ ಹೊಸದೊಂದು ಶೋಧವಾಗಿದೆ. ತೀವ್ರವಾದ ಆತ್ಮಪ್ರಜ್ಞೆ ಹಾಗೂ ಕಾಲವನ್ನು ಕುರಿತ ಸಮಗ್ರ ಕಲ್ಪನೆಗಳಿಂದಾಗಿ ಅಂತರಂಗ ಬಹಿರಂಗಗಳನ್ನು ಏಕಕಾಲಕ್ಕೆ ಹಲವಾರು ಸ್ತರಗಳಲ್ಲಿ ಕ್ರಿಯಾಶೀಲವಾಗಬಲ್ಲ ರಚನೆ ಈ ಕತೆಗಳಲ್ಲಿ ಬರುತ್ತದೆ.
ಕಥೆ-ಕಾದಂಬರಿ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ- ಭಾರತದ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಯನ್ನು ಶ್ರೀಮಂತಗೊಳಿಸಿದವರು ಯು.ಆರ್. ಅನಂತಮೂರ್ತಿ. ತಂದೆ ಉಡುಪಿ ರಾಜಗೋಪಾಲಾಚಾರ್ಯ ತಾಯಿ ಸತ್ಯಮ್ಮ. ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21 ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (1966) ಪದವಿ ಪಡೆದರು. ಹಾಸನದ ಕಾಲೇಜಿನಲ್ಲಿ ಅಧ್ಯಾಪಕ (1956) ರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ (1987-91) ಗಳಾಗಿ ...
READ MORE