ಸಾಹಿತಿ, ಪತ್ರಕರ್ತ ಪಿ. ಲಂಕೇಶ್ ಅವರ ಕೃತಿ-ʻಮುಸ್ಸಂಜೆಯ ಕಥಾ ಪ್ರಸಂಗʼ. ಕೃತಿ ಕುರಿತು ಲೇಖಕರೇ ಮುನ್ನುಡಿಯಲ್ಲಿ ಹೇಳಿರುವಂತೆ ತಮ್ಮ ಮೊದಲ ಇಪ್ಪತ್ತು ವರುಷಗಳ ಬಹುಪಾಲನ್ನು ತಮ್ಮ ಹಳ್ಳಿಯಲ್ಲಿ ಕಳೆದಿದ್ದರಿಂದ ಅಲ್ಲಿ ತಮಗಾದ ಅನುಭವಗಳ ಹಿನ್ನೆಲೆಯಲ್ಲಿ ಈ ಕೃತಿ ರಚಿತವಾಗಿದೆ. ಹಳ್ಳಿಯಲ್ಲಿ ನಡೆವ ತಮಾಷೆಯ ಘಟನೆಗಳು, ಆಳದ ಜಾತೀಯತೆ, ಹುಂಬತನ ಮತ್ತು ವಿಷಾದಕರ ವಂಚನೆಯಿಂದ ಹಳ್ಳಿಯೇ ವಿನಾಶದ ಅಂಚಿಗೆ ಸಾಗುವ ಈ ಕಥೆಗಳು, ಸಾಮಾನ್ಯ ಮನುಷ್ಯರ ಕ್ರಿಯೆಗಳು, ಅನಿಸಿಕೆಗಳನ್ನು ದಾಖಲಿಸುತ್ತಾ , ಒಂದು ಹಳ್ಳಿಯ ಅತಿಸಾಮಾನ್ಯವೆನಿಸುವ ವಿದ್ಯಮಾನಗಳನ್ನು ತಮಾಷೆಯಾಗಿ ಹೇಳುತ್ತಲೇ, ಸಮಾಜದ ಕೆಲ ಮೂಲಭೂತ ಸಮಸ್ಯೆಗಳಿಗೆ ಕನ್ನಡಿ ಹಿಡಿಯುವ ಕೃತಿ.
ಪಿ. ಲಂಕೇಶ್ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರು. ಪತ್ರಕರ್ತ-ಸಾಹಿತಿಯಾಗಿ ಜನಪ್ರಿಯರಾಗಿರುವ ಪಾಳ್ಯದ ಲಂಕೇಶ್ ಅವರ ಬದುಕು-ಬರಹ ವೈವಿಧ್ಯದಿಂದ ಕೂಡಿವೆ. ಕವಿ, ಕಥೆಗಾರ, ಕಾದಂಬರಿಕಾರ, ಅನುವಾದಕ, ನಾಟಕಕಾರ, ನಟ, ಚಲನಚಿತ್ರ ನಿರ್ದೇಶಕ, ಸಂಪಾದಕ, ಕೃಷಿಕ ಹೀಗೆ ಅವರ ಪ್ರತಿಭೆಗೆ ಹಲವು ಮುಖ. ಕೆಲಸ ಮಾಡಿದ ಕ್ಷೇತ್ರದಲ್ಲೆಲ್ಲ ತನ್ನದೇ ಛಾಪು ಮೂಡಿಸಿದವರು ಲಂಕೇಶ್. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೊನಗವಳ್ಳಿ 1935ರ ಮಾರ್ಚ್ 8ರಂದು ಜನಿಸಿದರು., ತಂದೆ ನಂದಿ ಬಸಪ್ಪ, ತಾಯಿ ದೇವೀರಮ್ಮ. ಕೊನಗವಳ್ಳಿ ಮತ್ತು ಹಾರನಹಳ್ಳಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸ ಮಾಡಿದ ಅವರು ಪ್ರೌಢಶಾಲೆ ಮತ್ತು ಇಂಟರ್ ...
READ MORE