ಕರ್ನಾಟಕ ಸಾಹಿತ್ಯ ಅಕಾಡೆಮಿಯು ಆಯಾ ವರ್ಷ ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟವಾದ ಕತೆಗಳ ಆಯ್ದ ಸಂಕಲನ ಪ್ರಕಟಿಸುವ ಪರಿಪಾಠ ಇಟ್ಟುಕೊಂಡಿದೆ. ೧೯೮೧ರ ಸಣ್ಣಕತೆಗಳ ಸಂಕಲನವನ್ನು ಹಿರಿಯ ಕತೆಗಾರ-ವಿಮರ್ಶಕ ಗಿರಡ್ಡಿ ಗೋವಿಂದರಾಜ ಅವರು ಸಂಪಾದಿಸಿದ್ದಾರೆ. ಈ ಸಂಕಲನದಲ್ಲಿ ಒಟ್ಟು ೧೪ ಕತೆಗಳಿವೆ. ಅವು ಹೀಗಿವೆ.
ಅದ್ವಿತೀಯ -ಈಶ್ವರಚಂದ್ರ
ಕ್ಷಮಯಾಧರಿತ್ರಿ -ಎನ್.ಎಸ್. ಚಿದಂಬರ ರಾವ್
ತಾಯಿ -ಡಾ. ಬೆಸಗರಹಳ್ಳಿ ರಾಮಣ್ಣ
ಕಳ್ರು -ಬಿ.ಟಿ. ಲಲಿತಾನಾಯಕ
ಮತಾಂತರ -ಸಿದ್ಧಲಿಂಗಯ್ಯ
ವ್ಯವಸ್ಥೆ -ವೀರಭದ್ರ
ಚಂಬಣ್ಣನ ಬೊಂಬೆ ವ್ಯಾಪಾರ -ಎಚ್.ಎಸ್.ವೆಂಕಟೇಶಮೂರ್ತಿ
ಓಡದ ಕಾಲುಗಳಿಗೆ ಒಂದು ಜೊತೆ ಶೂಸ್- ಎಸ್. ರಘುನಾಥ್
ಅವ್ವ ಮಕ್ಕಳ ಬದುಕು ಸಾವು ಇತ್ಯಾದಿ -ಕೃಷ್ಣ ಮಾಸಡಿ
ಸಾವು -ಬಿ.ಸಿ. ದೇಸಾಯಿ
ಕೂರ್ಮಾವತಾರ -ಶಾಂತಿನಾಥ ದೇಸಾಯಿ
ಧನಂಜಯ -ಜಯಂತ ಕಾಯ್ಕಿಣಿ
ಹುತ್ತರಿ ಹಾಡು -ಕಾಳೇಗೌಡ ನಾಗವಾರ
ಪುರುಷೋತ್ತಮನ ಮಗ ದತ್ತಾತ್ರೇಯ ಅವನ ಮಗಳು ಸಾವಿತ್ರಿ -ಯಶವಂತ ಚಿತ್ತಾಲ
ಖ್ಯಾತ ವಿಮರ್ಶಕ ಗಿರಡ್ಡಿ ಗೋವಿಂದರಾಜ ಅವರು ಮೂಲತಃ ಧಾರವಾಡ ಜಿಲ್ಲೆಯ ಅಬ್ಬಿಗೇರಿಯವರು. ತಂದೆ ಅಂದಾನಪ್ಪ ಮತ್ತು ತಾಯಿ ನಾಗಮ್ಮ. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು. ಸಣ್ಣಕತೆ-ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಇಂಗ್ಲೆಂಡ್, ಬೆಲ್ಸಿಯಂ, ಫ್ರಾನ್ಸ್, ಸರೆಂಡ್, ಇಟಲಿಗಳಲ್ಲಿ ಉಪನ್ಯಾಸ ನೀಡಿರುವ ಅವರು ಇಂಗ್ಲಿಷ್ ಸ್ಟಡೀಸ್ ನಲ್ಲಿ ಡಿಪ್ಲಮೊ ಪಡೆದು ಕಲಬುರ್ಗಿಯ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದರು. ಬ್ರಿಟಿಷ್ ಕೌನ್ಸಿಲ್ ವಿದ್ಯಾರ್ಥಿ ವೇತನ ಪಡೆದು ಇಂಗ್ಲೆಂಡಿಗೆ ಭಾಷಾ ವಿಜ್ಞಾನದಲ್ಲಿ ವಿಶೇಷ ಅಧ್ಯಯನ ನಡೆಸಿದರು. ಅವರು ಹೈಸ್ಕೂಲಿನಲ್ಲಿರುವಾಗಲೇ 'ಶಾರದಾಲಹರಿ' ಎಂಬ ನೀಳ್ಗವಿತೆ ಪ್ರಕಟಿಸಿದ್ದರು. ನಾಟಕ ಅಕಾಡೆಮಿಯ ಫೆಲೋಶಿಪ್ ದೊರೆತಿರುವ ...
READ MORE