ಕತೆಗಾರ್ತಿ ಮಾಲತಿ ಮುದಕವಿ ಮೂರನೆಯ ಕಥಾಸಂಕಲನ- 'ಜೀವನ ಸಂಧ್ಯಾರಾಗ' ಈ ಸಂಕಲನದಲ್ಲಿ 25ಕ್ಕೂ ಮಿಕ್ಕಿ ಕಥೆಗಳಿವೆ. ಕಥನ ಶೈಲಿ, ವೈವಿಧ್ಯಮಯ ಕಥಾ ವಸ್ತು, ಅದರ ನಿರ್ವಹಣೆ, ಅವುಗಳಿಗೆ ಕೊಡುವ ತಿರುವಿನಿಂದಾಗಿ ಕಥೆಗಳು ಪರಿಣಾಮಕಾರಿಯಾಗಿವೆ.
ಈ ಸಂಕಲನದ ಒಂದು ಕತೆ 'ತೇಜಸ್ವಿನಿ' ಯಲ್ಲಿ ಇಂದಿನ ಆಧುನಿಕ ಸಮಾಜದಲ್ಲಿ ವೃದ್ಧಾಪ್ಯದಲ್ಲಿ ಹಿರಿಯರು ಅನುಭವಿಸುವ ಏಕಾಕಿತನ, ಅನಾಥಪ್ರಜ್ಞೆ ಸಹಜನಾಗಿದೆ. ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರು ಇಲ್ಲದೆ ಹೋದರೂ ಅವರು ಮಕ್ಕಳ ಮನೆಯಲ್ಲಿ ಎಷ್ಟೇ ಐಷಾರಾಮಿ ಸುಖ ಸೌಲಭ್ಯಗಳಲ್ಲಿ ಇದ್ದರೂ ಅವರನ್ನು ಒಂದು ರೀತಿಯಲ್ಲಿ ಪ್ರಾಚ್ಯ ವಸ್ತುಗಳಂತೆಯೇ ಭಾವಿಸಲಾಗುತ್ತದೆ ಎಂಬುದು ವಾಸ್ತವಾಂಶ.
'ನಾಕೋಶಿ' ಯಂತಹ ಕತೆ (ನಾಕೋಶಿ ಎಂದರೆ ಬೇಡದ ಮಗು) ಪುರುಷ ಪ್ರಾಧಾನ್ಯತೆಯನ್ನು ಒಪ್ಪಿಕೊಂಡಿರುವ ಸಮಾಜದಲ್ಲಿ ದಂಪತಿಗಳ ಚಿತ್ರಣವಿದೆ. 'ಸಾಫ್ಟ್‍ವೇರ್ ಅಮಲು' ಕತೆಯ ನಿರೂಪಣೆಯಲ್ಲಿ ಸಫಲರಾಗಿದ್ದಾರೆ. 'ಬರಲಿವೆ ಮಾನವರೂಪಿ ಪ್ರಾಣಿಗಳು' ವೈದ್ಯಕೀಯ ಕ್ಷೇತ್ರದ ಸಂಶೋಧನೆಯನ್ನು ಚಿತ್ರಿಸುವ ವೈಜ್ಞಾನಿಕ ಕತೆ. 'ವೇನಿ ನಾ ಬಂದೆ', 'ನಮ್ಮಮ್ಮ ಸುಂದರಿ' ಕತೆಗಳು ಮಾನವೀಯ ಅಂತಃಕರಣವನ್ನು ಮಿಡಿಯುತ್ತವೆ.
ಲೇಖಕಿ ಮಾಲತಿ ಮುದಕವಿ ಅವರು ಎಂ ಎ., ಬಿ ಎಡ್ ಪದವೀಧರರು. ನಿವೃತ್ತ ಕನ್ನಡ ಉಪನ್ಯಾಸಕಿ. ಕರ್ನಾಟಕ ರಾಜ್ಯ ಮಟ್ಟದ ‘ನಗೆಮುಗುಳು’ ಏರ್ಪಡಿಸಿದ್ದ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ಹಾಗೂ ಮುಂಬೈ ಕನ್ನಡಿಗರ ಹಾಸ್ಯ ಲೇಖನ ಸ್ಪರ್ಧೆಯಲ್ಲಿಯೂ ಪ್ರಥಮ ಬಹುಮಾನ. ಸುಧಾ ಯುಗಾದಿ 2016ರ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ತೃತೀಯ ಬಹುಮಾನ. ಆಕಾಶವಾಣಿಯಲ್ಲಿ ಕೂಡ ಅನೇಕ ಚರ್ಚೆಗಳು, ನಾಟಕ ರಚನೆ, ವಿಮರ್ಶೆ, ಪ್ರಬಂಧ ವಾಚನ ಕಾರ್ಯ ಕ್ರಮಗಳಲ್ಲಿ ಭಾಗವಹಿಸುವಿಕೆ. ಶ್ರೀ ಬಸವರಾಜ ಕಟ್ಟಿಮನಿಯವರ ಶತಮಾನೋತ್ಸವದ ಪ್ರಯುಕ್ತ 'ಸಾಹಿತ್ಯಶ್ರೀ' ಎಂಬ ಪುರಸ್ಕಾರ. ಲೇಖಿಕಾ ಸಾಹಿತ್ಯ ವೇದಿಕೆಯ 2020ರ ಎರಡು ರಾಜ್ಯ ಮಟ್ಟದ ಸ್ಪರ್ಧೆಗಳಾದ ...
READ MORE"ಜೀವನದ ರಕ್ಷಕಗೋಡೆ ಇದ್ದು ಬಯಲಾದ ಅನುಭವ ಬರುವವರೆಗೂ ನಾವು ಆಶಾವಾದಿಗಳೇ ಆಗಿರುತ್ತೇವೆ. ಹುಟ್ಟಿನ ಬೆನ್ನಿಗೇ ಬಂದಿರುವ ಸಾವಿನ ಗಡಿಯಾರ ತನ್ನ ಕ್ಷಣಗಣನೆಯನ್ನು ಕರಾರುವಾಕ್ಕಾಗಿ ನಡೆಸುತ್ತಿರುವ ಅರಿವಿದ್ದೂ ಅದನ್ನು ಮರೆತವರಂತೆ ಬದುಕುತ್ತೇವೆ. ಹಳೆಯ ಸಂಬಂಧಗಳ ಕೊಂಡಿ ಕಳಚುತ್ತಿರುವಂತೆಯೇ ಹೊಸ ಸಂಬಂಧಗಳಿಗೆ ಹಾತೊರೆಯುತ್ತೇವೆ. ವಯಸ್ಸಾದಂತೆ ಹಳೆಯ ಸಂಬಂಧಗಳು ಯಾವ್ಯಾವುದೋ ಕಾರಣಕ್ಕಾಗಿ ಕಳಚಿಕೊಳ್ಳುತ್ತವೆ. ಆದರೆ ಈ ವಯಸ್ಸಿನಲ್ಲಿ ಸಂಬಂಧಗಳು ಹುಟ್ಟುವುದಿಲ್ಲ.. ಖಾಲಿತನ ಎದೆಯನ್ನು ಚುಚ್ಚತೊಡಗುತ್ತದೆ. ಆಗ ನಮ್ಮ ಸಂಗಾತಿಗಳೆಂದರೆ ಹಳೆಯ ನೆನಪುಗಳು ಮಾತ್ರ..."
-(ತೇಜಸ್ವಿನಿ ಕತೆಯಿಂದ ಆಯ್ದ ಭಾಗ)