ಒಂದ್ ಕಥೆ ಹೇಳ್ಲಾ…

Author : ರಾಜಮ್ಮ ಡಿ. ಕೆ.

Pages 120

₹ 300.00




Published by: ಸಾವಣ್ಣ ಎಂಟರ್‌ಪ್ರೈಸಸ್‌
Address: ಸಾವಣ್ಣ ಎಂಟರ್‌ಪ್ರೈಸಸ್‌, ನಂ. 12, ಭೈರಸಂದ್ರ ಮುಖ್ಯರಸ್ತೆ, ಜಯನಗರ 1ನೇ ಬ್ಲಾಕ್‌ ಪೂರ್ವ, ಬೆಂಗಳೂರು-560011
Phone: 080-41229757/ 9036312786

Synopsys

‘ಒಂದ್ ಕಥೆ ಹೇಳ್ಲಾ…’ ರಾಜಮ್ಮ ಡಿ. ಕೆ ಅವರ ಸ್ಪೂರ್ತಿದಾಯಕ ಕತೆಗಳ ಕಥಾಸಂಕಲನವಾಗಿದೆ. ಜೀವನದಲ್ಲಿ ಪ್ರೇರಣೆ ವಹಿಸುವ ಪಾತ್ರ ಅಪಾರ, ಪ್ರೇರಣೆಗೆ ವಸ್ತು ಅಥವಾ ಏಷಯ ಇಂತಹದೇ ಆಗಿರಬೇಕೆಂಬ ಯಾವುದೇ ನಿಯಮವಿಲ್ಲ. ಶಕ್ತಿಯುತವಾದ ಒಂದು ಹೇಳಿಕೆ, ಸಾಂತ್ವನದ ಒಂದು ಮಾತು ಕೇಳಿದ ಕಥೆ, ನೋಡಿದ ಚಲನಚಿತ್ರ, ಓದಿದ ಪುಸ್ತಕ, ದಿನನಿತ್ಯದ ಜೀವನದಲ್ಲಿ ನಡೆಯುವ ಆಗುಹೋಗುಗಳು, ಭೇಟಿ ಮಾಡುವ ವ್ಯಕ್ತಿಗಳು, ಭಾಗವಹಿಸುವ ಸಭೆಸಮಾರಂಭಗಳು, ಹಿರಿಯರ ಅನುಭವದ ಹಿತನುಡಿಗಳು, ಮಹಾನುಭಾವರ ಜೀವನದಲ್ಲಿ ನಡೆದ ಘಟನೆಗಳು, ಒಂದು ಸಂದೇಶ... ಹೀಗೆ ಯಾವುದೇ ಮೂಲಗಳಿಂದ ಹರಿದು ಬರುವ ಒಳ್ಳೆಯ ವಿಚಾರಗಳು ಒಳ್ಳೆಯ ಬದುಕಿಗೆ ಪ್ರೇರಣೆ ನೀಡುತ್ತವೆ. ಬದುಕು ಇನ್ನೇನು ಮುಗಿದುಹೋಯಿತು ಎಂದು ತಲೆ ಮೇಲೆ ಕೈಹೊತ್ತು ಕುಳಿತವನನ್ನು ಮತ್ತೆ ಎದ್ದು ನಿಲ್ಲುವಂತೆ ಮಾಡುತ್ತವೆ, ಬದುಕಿನ ದಿಕ್ಕನ್ನೇ ಬದಲಿಸುತ್ತವೆ. ಎಲ್ಲ ವಯೋಮಾನದವರಿಗೂ ಆಪ್ತವಾಗುವ ರೀತಿಯಲ್ಲಿ, ಸರಳವಾದ ಭಾಷೆಯಲ್ಲಿ, ಚಿಕ್ಕ ಚಿಕ್ಕ ಕಥೆಗಳ ರೂಪದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಈ ಕಥೆಗಳಲ್ಲಿ ಪ್ರೇರಣೆಯ ಜೊತೆಗೆ ನೀತಿಯ ಲೇಪನವಿದೆ. ಜೀವನೋತ್ಸಾಹಕ್ಕೆ ಚೈತನ್ಯ ತುಂಬುವ ಪ್ರಸಂಗಗಳಿವೆ.

About the Author

ರಾಜಮ್ಮ ಡಿ. ಕೆ.

ರಾಜಮ್ಮ ಡಿ.ಕೆ ಅವರು ಶಿಕ್ಷಕಿಯಾಗಿ ಸುದೀರ್ಘ ಅನುಭವವನ್ನು ಹೊಂದಿದ್ದಾರೆ. ರಂಗಭೂಮಿ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆಗಳನ್ನು ನೀಡಿರುತ್ತಾರೆ.  ಕೃತಿಗಳು ; ಅರ್ಥಸಹಿತ ಅಮೂಲ್ಯ ಗಾದೆಗಳು, ಯಶಸ್ವಿ ಜೀವನಕ್ಕೆ ಸ್ಫೂರ್ತಿದಾಯಕ ಕತೆಗಳು, ಒಂದು ಕಥೆ ಹೇಳ್ಲಾ, 50 ಬದುಕು ಬದಲಿಸುವ ಕಥೆಗಳು ಪ್ರಶಸ್ತಿ ; 2021ನೇ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ‘ರಂಗ ಭೂಮಿ’ ಕ್ಷೇತ್ರ)     ...

READ MORE

Related Books