‘ಬಣ್ಣದ ಬದುಕು’ ತೆಲುಗಿನ ಖ್ಯಾತ ಲೇಖಕ ಡಾ.ವಿ.ಆರ್. ರಾಸಾನಿ ಅವರ ಕಾದಂಬರಿಯನ್ನು ಲೇಖಕ ಡಾ. ಟಿ.ಡಿ. ರಾಜಣ್ಣ ತಗ್ಗಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಬೀದಿ ನಾಟಕದ ಕತೆಯನ್ನು ಒಳಗೊಂಡ ಕೃತಿ. ಆಧುನಿಕ ತಂತ್ರಜ್ಞಾನದಿಂದ ರಾಶಿರಾಶಿಯಾಗಿ ಬಂದು ಬೀಳುತ್ತಿರುವ ಸಿನಿಮಾಗಳು, ಟಿ.ವಿ. ಚಾನೆಲ್ಲುಗಳ ಧಾರಾವಾಹಿಗಳಿಂದ ಈ ವೃತ್ತಿ ಕಲಾವಿದರಿಗೆ ಬದುಕು ಘೋರವಾಗಿ ಹೋಗಿದೆ. ಯಾವ ಆದರಣೆಗಳೂ ಸಿಗದೆ ಕಲಾಕಾರರು ನಿಕೃಷ್ಟ ಜೀವನ ಸಾಗಿಸುತ್ತಿದ್ದಾರೆ. ಸುಮಾರು ಐದು ತಲೆಮಾರುಗಳಿಂದ ನಾಟಕವನ್ನೇ ವೃತ್ತಿಯನ್ನಾಗಿ ಕೈಹಿಡಿದ ಕುಟುಂಬದ ಕಥೆಯೇ ಈ ‘ಬಣ್ಣದ ಬದುಕು’ ಕಾದಂಬರಿ. ಮೂಲ ತೆಲುಗು ಕಾದಂಬರಿಯು ಅಮೆರಿಕದಲ್ಲಿಯ ತೆಲುಗರ ‘ತಾನಾ’ ಬಹುಮಾನವನ್ನು ಪಡೆದಿದೆ.
©2024 Book Brahma Private Limited.