ಪಾಕಕ್ರಾಂತಿ ಮತ್ತು ಇತರ ಕತೆಗಳು (2008) ತೇಜಸ್ವಿ ಅವರ ಅನುಭವಗಳ ಕಥನ ಕೃತಿ. ತೇಜಸ್ವಿ ಅವರು ತಮ್ಮ ಬದುಕಿನಲ್ಲಿ ಎದುರಾದ ಚಿಕ್ಕ ಚಿಕ್ಕ ಘಟನೆ, ಸನ್ನಿವೇಶಗಳನ್ನು ಕಥೆಗಳಾಗಿಸಿದ್ದಾರೆ. ಪಾಕಕ್ರಾಂತಿ ಎಂಬ ನೀಳ್ಗತೆಯಲ್ಲಿ ಮನೆಯ ಒಳ ಮತ್ತು ಹೊರ ಜಗತ್ತನ್ನು ವಿಶ್ಲೇಷಿಸುವ ಕ್ರಮ ವಿಶಿಷ್ಟವಾಗಿದೆ. ಅಡಿಗೆ ಮನೆಗೆ ಮಾತ್ರ ಸೀಮಿತವಾಗಿದ್ದ ಪಾಕ ಕ್ರಾಂತಿ, ಸಾಮಾಜಿಕ ಕ್ರಾಂತಿಯಾಗಿ ಮಾರ್ಪಡುವ ಮಾರ್ಮಿಕತೆಯನ್ನು ತೆರೆದಿಡುತ್ತದೆ. ಅಂತೆಯೇ ಸುವರ್ಣ ಸ್ವಪ್ನ, ನಗು, ಮಳೆಗಾಲದ ಚಿತ್ರ ಸಂತೆ, ಮೂಡಿಗೆರೆ ಎಂಬ ಊರು, ಸಿತಾರ್ ವಾದ್ಯದ ಕಥೆ, ದನಗಳು ಇತ್ಯಾದಿ ಕತೆಗಳು ತೇಜಸ್ವಿ ಅವರ ಜೀವನದ ಬಗ್ಗೆ ಕುತೂಹಲ ಮೂಡಿಸುತ್ತವೆ.
ಕನ್ನಡದ ಹೆಸರಾಂತ ಲೇಖಕ ಕುವೆಂಪು ಅವರ ಪುತ್ರರಾಗಿರುವ ಪೂರ್ಣಚಂದ್ರ ತೇಜಸ್ವಿ ಅವರು 08-09-1938ರದು ಜನಿಸಿದರು. ತಮ್ಮ ಬರವಣಿಗೆಯ ಮೂಲಕವೇ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ’ಚಿದಂಬರ ರಹಸ್ಯ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ತೇಜಸ್ವಿ ಅವರು ಕನ್ನಡದಲ್ಲಿ ನವ್ಯ ಸಾಹಿತ್ಯ ಚಳುವಳಿಯು ಉಚ್ಛ್ರಾಯ ಸ್ಥಿತಿಯಲ್ಲಿದ್ದ ದಿನಗಳಲ್ಲಿ ಅದಕ್ಕಿಂತ ಭಿನ್ನವಾದ ನೆಲೆಯ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ನವ್ಯ ಲೇಖಕರು ನಗರ ಕೇಂದ್ರಿತ, ವ್ಯಕ್ತಿನಿಷ್ಟ ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಬದುಕು ಕುರಿತ ಮತ್ತು ಅದು ಹಳಹಳಿಕೆಯ ಧ್ವನಿಯಲ್ಲಿ ಇರದ ಹಾಗೆ ನೋಡಿಕೊಂಡರು. ಲೋಹಿಯಾ ಚಿಂತನೆಗಳಿಂದ ಪ್ರೇರಿತರಾಗಿದ್ದ ...
READ MORE‘ಪಾಕಕ್ರಾಂತಿ ಮತ್ತು ಇತರ ಕತೆಗಳು’ | ಕೆ.ಪಿ. ಪೂರ್ಣಚಂದ್ರ ತೇಜಸ್ವಿ