ಯಶವಂತ ಚಿತ್ತಾಲ ಅವರ ಆಯ್ದ ಕಥೆಗಳು

Author : ಯಶವಂತ ಚಿತ್ತಾಲ

Pages 108

₹ 100.00




Year of Publication: 2018
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರು ಯಶವಂತ ಚಿತ್ತಾಲ. ಹನೇಹಳ್ಳಿಯ ಚಿತ್ತಾಲರು ಬದುಕಿನ ಬಹುತೇಕ ದಿನಗಳನ್ನು ಮುಂಬೈಯಲ್ಲಿ ಕಳೆದವರು. ಚಿತ್ತಾಲರ ಕತೆಗಳಲ್ಲಿ ಹನೇಹಳ್ಳಿ ಗ್ರಾಮೀಣ ಬದುಕು ಹಾಗೂ ಮುಂಬೈನ ನಗರದ ಬದುಕುಗಳೆರಡೂ ಕಾಣಿಸಿಕೊಂಡಿವೆ. ಚಿತ್ತಾಲರ ಅನನ್ಯ ಕತೆಗಾರಿಕೆಯು ಓದುಗರಿಗೆ ಪ್ರಿಯವಾಗದೇ ಇರದು. ಚಿತ್ತಾಲರ ಕತಾ ಸಂಕಲನಗಳಿಂದ ಆಯ್ದ ಪ್ರಾತಿನಿಧಿಕ ಕತೆಗಳನ್ನು ಈ ಸಂಕಲನವು ಒಳಗೊಂಡಿದೆ.

About the Author

ಯಶವಂತ ಚಿತ್ತಾಲ
(03 August 1928 - 22 March 2014)

ತಮ್ಮ ಸಣ್ಣಕತೆಗಳ ಮೂಲಕ ಆಧುನಿಕ ಕನ್ನಡ ಕಥಾಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು ಯಶವಂತ ಚಿತ್ತಾಲ.  ಅವರೊಬ್ಬ ಮಹತ್ವದ ಲೇಖಕ. ನವ್ಯ ಸಾಹಿತ್ಯದ ಪ್ರಮುಖ ಕತೆಗಾರ ಚಿತ್ತಾಲರು ಕತೆ ಹೇಳುವುದರಲ್ಲಿ ಸಿದ್ಧಹಸ್ತರು. ಕತೆಗಳ ಮೂಲಕ ಬರವಣಿಗೆ ಆರಂಭಿಸಿದ ಯಶವಂತರ ಮೊದಲ ಕತೆ 'ಬೊಮ್ಮಿಯ ಹುಲ್ಲು ಹೊರೆ'. ಅವರ ಮೊದಲ ಕತೆಯನ್ನು ಕನ್ನಡದ ಮಹತ್ವದ ಕತೆಗಳಲ್ಲಿ ಒಂದು ಗುರುತಿಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹನೇಹಳ್ಳಿಯವರಾದ ಯಶವಂತ ಅವರು 1928ರ ಆಗಸ್ಟ್ 3ರಂದು ಜನಿಸಿದರು. ತಂದೆ ವಿಠೋಬ, ತಾಯಿ ರುಕ್ಕಿಣಿ. ಖ್ಯಾತ ಕವಿ ಗಂಗಾಧರ ಚಿತ್ತಾಲರು ಅವರ ಹಿರಿಯ ಸಹೋದರ. ಹನೇಹಳ್ಳಿ, ಕುಮಟೆ, ಧಾರವಾಡ, ಮುಂಬಯಿಗಳಲ್ಲಿ ...

READ MORE

Related Books