ಮೂಲತಃ ಕಲಬುರ್ಗಿ ಜಿಲ್ಲೆಯ ಜೇವರ್ಗಿಯವರಾದ ಲೇಖಕರು ತಮ್ಮ ಹಳ್ಳಿಯ ವಿಷಯಗಳನ್ನೇ ಎಷ್ಟು ಅದ್ಭುತವಾಗಿ ವಿವರಿಸಿದ್ದಾರೆ. ಹಳ್ಳಿಯಲ್ಲಿದ್ದ ಶರಣಪ್ಪನಿಗೆ ಜನ ತೋರಿಸುವ ಪ್ರೀತಿ, ಕಾಳಜಿ, ಮತ್ತು ಅವನಿಗೂ ಮದುವೆ ಅಂತ ಮಾಡಿ ಅವನಿಗೂ ಬದುಕಲು ಕಲಿಸಿಕೊಟ್ಟಂತ ಆ ಊರಿನ ಮಾತೃ ಹೃದಯಿಗಳಾದ ಅಲ್ಲಿನ ಜನ, ಅವನ ಬದುಕಿನಲ್ಲಿ ನಡೆಯುವಂತಹ ವಿಚಿತ್ರ ಘಟನೆಗಳು, ಇನ್ನೊಂದು ವಿಷಯವೆಂದರೆ ಶರಣಪ್ಪ ಎಷ್ಟು ಮುಗ್ದನೆಂದರೆ ಒಂದು ಇರುವೆಯನ್ನು ಸಹ ಸಾಯಿಸಲು ಹೆದುರುವ ಆತ ಆ ಊರಿನ ಜನರ ರಕ್ಷಣೆಗಾಗಿ ಕೊಲೆ ಮಾಡುವಂತಹ ಹಂತಕ್ಕೆ ಕಂಬಳಿಯ ಕೆಂಡ ಕಥೆಯೂ ಓದುಗನನ್ನು ಹಿಡಿದಿಡುತ್ತದೆ. ಈ ಕೃತಿಯಲ್ಲಿನ ಹತ್ತು ಕತೆಗಳು ಒಂದೊಂದು ರೀತಿಯಲ್ಲೂ ವಿಭಿನ್ನವಾಗಿವೆ, ಅದರದ್ದೇ ಆದ ವೈಶಿಷ್ಟ್ಯವನ್ನು ಹೊಂದಿವೆ. ಈ ಕೃತಿಗೆ 2017-18 ನೇ ಸಾಲಿನ "ಅಮ್ಮ" ಪ್ರಶಸ್ತಿ ಲಭಿಸಿದೆ.
ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಶಶಿಕಾಂತ ಪಿ ದೇಸಾಯಿ ಅವರು ಪ್ರವೃತ್ತಿಯಲ್ಲಿ ಬರಹಗಾರ. ಕಥೆ, ಕವನ, ವಿಮರ್ಶೆಗಳು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.ಕಲಬುರಗಿ ಬಾನುಲಿ ಕೇಂದ್ರದಿಂದ ಐದು ನಾಟಕಗಳು ಬಿತ್ತರಗೊಂಡಿವೆ. ’ಶಿಲ್ಪಿ’ ಎಂಬ ನಾಟಕಕ್ಕೆ ರಾಷ್ಟ್ರೀಯ ನಾಟಕ ಸ್ಪರ್ಧೆಯಲ್ಲಿ, ಸಮಾಜ ಕಲ್ಯಾಣ ವಿಭಾಗದ ಎರಡನೇ ಬಹುಮಾನ ದೊರಕಿದೆ. ಈ ನಾಟಕವು ಚಿಂಚೋಳಿ ತಾಂಡಾಗಳಲ್ಲಿನ ಶಿಶು ಮಾರಾಟದ ಕುರಿತು ಹಾಗೂ ಆ ವ್ಯವಸ್ಥೆಯಿಂದ ತಾಯಿಯೊಬ್ಬಳು ತನ್ನ ಮಗುವನ್ನು ಆ ಪಿಡುಗಿನಿಂದ ರಕ್ಷಿಸಿ, ಅವಳನ್ನು ಓದಿಸಿ ಬೆಳೆಸುವಲ್ಲಿ ಸಫಲಳಾಗುತ್ತಾಳೆ. ಗುಲಬರ್ಗಾ ವಿಶ್ವವಿದ್ಯಾಲಯವು ಪ್ರತಿ ವರ್ಷ ಆಯೋಜಿಸುವ ಜಯತೀರ್ಥ ರಾಜಪುರೋಹಿತ ಕಥಾ ಸ್ಪರ್ಧೆಯಲ್ಲಿ ’ಇನ್ನೂ ಯಾಕ ಬರಲಿಲ್ಲವ್ರು’ ಎಂಬ ...
READ MOREಅಮ್ಮ ಪ್ರಶಸ್ತಿ ಪ್ರಧಾನ ಸಮಾರಂಭ