‘ಈ ತನಕದ ಕಥೆಗಳು ಸಂಪುಟ- 2’ ಕೆ. ಸತ್ಯನಾರಾಯಣ ಅವರ ಸಮಗ್ರ ಕಥಾ ಸಂಕಲನವಾಗಿದೆ. ಕೃತಿಯ ಕುರಿತು ಬರೆದಿರುವ ಲೇಖಕ ಕೆ. ಸತ್ಯನಾರಾಯಣ ಅವರು 'ಸಂಪುಟದ ಬಹುಪಾಲು ಕತೆಗಳು ನನ್ನನ್ನು ಹುಡುಕಿಕೊಂಡು ಬಂದಿವೆ. ಕಾಡಿಮೆ ಬರೆಯುವಂತೆ ಒತ್ತಾಯಿಸಿವೆ. ಹಾಗೆ ಕೆಲವಾದರೂ ಕತೆಗಳನ್ನು ನಾನೇ ಹುಡುಕಿಕೊಂಡು ಹೋಗಿ ಒಲಿಸಿಕೊಂಡು ಬರೆದಿದ್ದೇನೆ. ಕತೆಗಳು ಓದುಗರಿಗೆ ಪ್ರಸ್ತುತವಾಗುವುದು ಬರವಣೆಗೆಯಲ್ಲಿ ನಮ್ಮ ಬದುಕಿನ ಎಳೆಗಳು ತನ್ನೆಲ್ಲ ಸಂದಿಗ್ಧತೆ ಸೂಕ್ತತೆಗಳೊಡನೆ ಒಡಮೂಡಿವೆಯೇ ಎಂಬುದರ ಮೇಲೆ ಈ ಹಿನ್ನೆಲೆಯಲ್ಲಿ ನನ್ನ ಕಥಾಪ್ರಪಂಚದ ಸಮಕಾಲೀನ ಎಳೆಗಳು ನನಗೆ ತುಂಬಾ ಖುಷಿ ಕೊಟ್ಟಿದೆ. ನಾವೆಲ್ಲ ಬದುಕಿರುವ ಕಾಲವನ್ನು ನಮ್ಮನ್ನೂ ಮುಂದೆ ಅರ್ಥ ಮಾಡಿಕೊಳ್ಳಲು ಬಯಸುವವರಿಗೆ ಕೂಡ ಇಲ್ಲಿನ ಬರವಣೆಗೆ ಆತ್ಮೀಯವಾಗಬಹುದು ಎಂಬ ಭರವಸೆಯಿದೆ ಹಾಗಾದಾಗ ಮಾತು ಕತೆಯಾಗಿರುತ್ತದೆ. ಪ್ರಕಟಣೆ ಸಂದರ್ಭಕ್ಕಾಗಿ ಇಲ್ಲಿಯ ಕತೆಗಳನ್ನು ಮತ್ತೆ ಮತ್ತೆ ಓದಿದಾಗ ಸಂತೋಷವಾಗಿದೆ. ಕೆಲವು ಕತೆಗಳ ವಿಷಯದಲ್ಲಿ ಸಾರ್ಥಕತೆಯ ಭಾವನೆಯೂ ಮೂಡಿದೆ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು ಎಂದಿದ್ದಾರೆ.
ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...
READ MORE