‘ಒಡಲ ಹಂಗು’ ಅಮರೇಶ ನುಗಡೋಣಿ ಅವರ ಕಥಾಸಂಕಲನವಾಗಿದೆ. ತಮ್ಮ ಕಥೆಗಳಲ್ಲಿ ಪ್ರಾದೇಶಿಕ ವಿಶಿಷ್ಟತೆಯನ್ನು, ಅನೂಹ್ಯ ಕಥಾ ವಸ್ತುಗಳನ್ನು ವಿಶಿಷ್ಟ ಭಾಷೆಯನ್ನು ಒಳಗೊಳಿಸುತ್ತಲೇ ಕಥಾ ರಚನೆಯಲ್ಲಿ ತೊಡಗಿ, ತಮ್ಮದೇ ಕಥನ ಕ್ರಮವನ್ನು ಅಳವಡಿಸುವ ಅಮರೇಶ ನುಗಡೋಣಿ, ಇಲ್ಲಿ ಮನುಷ್ಯ, ಸಮುದಾಯಗಳ ಆಳದ ದುರಂತವನ್ನು ವಿಷಾದದೊಂದಿಗೆ ಪ್ರಕಟಿಸುತ್ತಾರೆ. ಆಧುನಿಕ ಸಂದರ್ಭದಲ್ಲೂ ತಮ್ಮ ಕಥೆಗಳಲ್ಲಿ ಅನುಭಾವದ ಅಧ್ಯಾತ್ಮದ ಶೋಧವನ್ನು ನಡೆಸಿರುವ ಡಾ| ಅಮರೇಶರು ಜ್ವಲಂತ ಸಮಸ್ಯೆಗಳನ್ನು ಕಥೆಗಳಲ್ಲಿ ಹೆಣೆಯುತ್ತ ರಾಜಕೀಯ, ಸಾಮಾಜಿಕ ಆಯಾಮಗಳಲ್ಲಿ ಅವುಗಳನ್ನು ಒರೆಗೆ ಹಚ್ಚಿರುವ ಏಳು ಕಥೆಗಳು ಈ ಸಂಕಲನದಲ್ಲಿವೆ. ಹೆಚ್ಚು ವಿವರಗಳನ್ನು ಬಳಸಿ. ಕಥೆ ರಚಿಸುವ ಡಾ| ಅಮರೇಶರು ಕಥ ಸಂದರ್ಭದ ಸಾಂಸ್ಕತಿಕ ಹಾಗೂ ಸಾಮಾಜಿಕ ಒಳಸುಳಿಗಳನ್ನು, ವ್ಯಕ್ತಿ ಮತ್ತು ಸಾಮಾಜಿಕ ಸಂಬಂಧಗಳ ಅಂತರ್‌ಕ್ರಿಯೆಯನ್ನು ತಮ್ಮದೇ ಆದ ಭಾಷೆ ಹಾಗೂ ಶೈಲಿಗಳ ಮೂಲಕ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ.
ಕೃತಿಯು ನೆರಳ ಸೂರು, ದಾರಿಗಳು, ಪರಿಣಾಮಿ, ಬೆಳಕೂ ಅದೆ, ಕತ್ತಲೆಯೂ ಅದೇ, ಒಡಲ ಹಂಗು, ನೆಲೆಗೆ ಈ ನಡಿಗೆ, ಮೈಲಿಗೆ ಮಾಸುವ ಸಮಯ ಸೇರಿದಂತೆ ಏಳು ಕಥೆಗಳನ್ನು ಒಳಗೊಂಡಿದೆ.
ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನುಗಡೋಣಿಯಲ್ಲಿ 1960 ರಲ್ಲಿ ಜನಿಸಿದ ಅಮರೇಶ ನುಗಡೋಣಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೇವನೂರು ಮಹಾದೇವರ ನಂತರದ ಲೇಖಕರಲ್ಲಿ ಶೋಷಣಾವ್ಯವಸ್ಥೆಯ ವಿವಿಧ ಮುಖಗಳನ್ನು ನುಗಡೋಣಿಯವರಷ್ಟು ಸಮರ್ಥವಾಗಿ ಚಿತ್ರಿಸಿದ ಲೇಖಕರು ಇನ್ನೊಬ್ಬರಿಲ್ಲ ಎಂದು ಹೇಳಬಹುದು. ಸಾಹಿತ್ಯದ ಹಲವು ಮಜಲುಗಳಲ್ಲಿ ಕೆಲಸ ಮಾಡಿರುವ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರ ಕವನ ಸಂಕಲನಗಳು- ನೀನು, ಅವನು, ಪರಿಸರ. ಕಥಾ ಸಂಕಲನ- ಮಣ್ಣು ಸೇರಿತು ಬೀಜ, ಅರಿವು (ನವಸಾಕ್ಷರರಿಗಾಗಿ), ತಮಂಧದ ಕೇಡು, ಮುಸ್ಸಂಜೆಯ ಕಥಾನಕಗಳು, ಸವಾರಿ, ಹಾಗೂ ವ್ಯಕ್ತಿ ಪರಿಚಯ ಕೃತಿಯಲ್ಲಿ ಶ್ರೀಕೃಷ್ಣ ಆಲನಹಳ್ಳಿ (ಬದುಕು ...
READ MORE(ಹೊಸತು, ಸೆಪ್ಟೆಂಬರ್ 2014, ಪುಸ್ತಕದ ಪರಿಚಯ)
ಒಡಲ ಹಂಗು ಅಮರೇಶ ನುಗಡೋಣಿಯವರ ನಾಲ್ಕನೆಯ ಕಥಾ ಸಂಕಲನ, ಇಪ್ಪತ್ತೈದು ವರ್ಷಗಳಿಂದ ನಿರಂತರವಾಗಿ ಕಥಾ ರಚನೆಯಲ್ಲಿ ತೊಡಗಿಸಿಕೊಂಡಿರುವ ಅಪರೂಪದ ಕಥೆಗಾರ, ತಮ್ಮ ಕಥೆಗಳಲ್ಲಿ ಪ್ರಾದೇಶಿಕ ವಿಶಿಷ್ಟತೆಯನ್ನು, ಅನೂಹ್ಯ ಕಥಾ ವಸ್ತುಗಳನ್ನು ವಿಶಿಷ್ಟ ಭಾಷೆಯನ್ನು ಒಳಗೊಳಿಸುತ್ತಲೇ ಕಥಾ ರಚನೆಯಲ್ಲಿ ತೊಡಗಿ, ತಮ್ಮದೇ ಕಥನ ಕ್ರಮವನ್ನು ರೂಪಿಸಿದ ಕಥೆಗಾರ, ಡಾ| ಅಮರೇಶರು. ಅವರ ಕಥೆಗಳು ಮನುಷ್ಯರ, ಸಮುದಾಯಗಳ ಆಳದ ದುರಂತವನ್ನು ವಿಷಾದದೊಂದಿಗೆ ಪ್ರಕಟಿಸುತ್ತವೆ. ಆಧುನಿಕ ಸಂದರ್ಭದಲ್ಲೂ ತಮ್ಮ ಕಥೆಗಳಲ್ಲಿ ಅನುಭಾವದ ಅಧ್ಯಾತ್ಮದ ಶೋಧವನ್ನು ನಡೆಸಿರುವ ಡಾ| ಅಮರೇಶರು ಜ್ವಲಂತ ಸಮಸ್ಯೆಗಳನ್ನು ಕಥೆಗಳಲ್ಲಿ ಹೆಣೆಯುತ್ತ ರಾಜಕೀಯ, ಸಾಮಾಜಿಕ ಆಯಾಮಗಳಲ್ಲಿ ಅವುಗಳನ್ನು ಒರೆಗೆ ಹಚ್ಚಿರುವ ಏಳು ಕಥೆಗಳು ಈ ಸಂಕಲನದಲ್ಲಿವೆ. ಹೆಚ್ಚು ವಿವರಗಳನ್ನು ಬಳಸಿ. ಕಥೆ ರಚಿಸುವ ಡಾ| ಅಮರೇಶರು ಕಥ ಸಂದರ್ಭದ ಸಾಂಸ್ಕತಿಕ ಹಾಗೂ ಸಾಮಾಜಿಕ ಒಳಸುಳಿಗಳನ್ನು, ವ್ಯಕ್ತಿ ಮತ್ತು ಸಾಮಾಜಿಕ ಸಂಬಂಧಗಳ ಅಂತರ್‌ಕ್ರಿಯೆಯನ್ನು ತಮ್ಮದೇ ಆದ ಭಾಷೆ ಹಾಗೂ ಶೈಲಿಗಳ ಮೂಲಕ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ.