‘ಕರಕೀಯ ಕುಡಿ’ ಲೇಖಕ ಆನಂದ್ ಋಗ್ವೇದಿ ಅವರ ಮೂರನೆಯ ಕಥಾ ಸಂಕಲನ. ಈ ಸಂಕಲನದಲ್ಲಿ ಕರಕೀಯ ಕುಡಿ, ತೇರು, ಭೂಪೋತ್ತಮನಂ, ವಿರಾಟ ಪರ್ವ, ಜಾತ್ರೆ, ಸನ್ನಿವೇಶ..ಸಾವಧಾನ, ಅನುಸಂಧಾನ, ತೊರೆಯ ತೇವ, ಕಾರ್ಣೀಕ, ಹಾರಿ ಹೋದ ಧೂಮಕೇತುವಿನ ಬಾಲ ಹಿಡಿದು, ಪುನರುಜ್ಜೀವನ ಎಂಬ ಹನ್ನೆರಡು ಕತೆಗಳು ಸಂಕಲನಗೊಂಡಿವೆ.
ಕತೆ ಎಂಬುದೇ ಬದುಕಿನ ವ್ಯಾಖ್ಯೆ. ಬದುಕು ಎಂಬುದು ಈ ಸಮಾಜದ ಎಲ್ಲಸ್ತರ, ಶ್ರೇಣಿ ಮತ್ತು ಪಾತಳಿಗಳಲ್ಲಿ ಹಾಸು ಹೊಕ್ಕಾಗಿರುವ ದೈನಿಕವಷ್ಟೇ. ಇಲ್ಲಿರುವ ಹಲವು ಆಯಾಮಗಳು ಇದೇ ಸಮಾಜದಲ್ಲಿ ಬದುಕುತ್ತಿರುವವರಿಗೆ ಅಪರಿಚಿತವೇನಲ್ಲ. ಕತೆಗಾರ ಎಂಬುವವ ಆ ಎಲ್ಲ ನಿದರ್ಶನಗಳಿಗೆ ಕನ್ನಡಿ ಹಿಡಿದು ತೋರುವ ತಂತ್ರಗಾರ ಮಾತ್ರ, ಅದಕ್ಕೆ ಬೇಕಾದುದು ಭಾಷೆ, ನಿರೂಪಣೆ ಮತ್ತು ಚಿತ್ರಕ ಶಕ್ತಿ. ಆ ಎಲ್ಲ ವಿಶೇಷತೆಗಳು ಇಲ್ಲಿನ ಕತೆಗಳಲ್ಲಿವೆ.
ಬರಹಗಾರ ಡಾ. ಆನಂದ್ ಋಗ್ವೇದಿ ಅವರು ಜನಿಸಿದ್ದು 1974ರ ಮೇ 24 ಚಿತ್ರದುರ್ಗ ಜಿಲ್ಲೆ ಗುಂಜಿಗನೂರಿನಲ್ಲಿ. ತಂದೆ- ರಾಘವೇಂದ್ರ ರಾವ್ ತಿರುಮಲಾರಾಯ ಕುಕ್ಕವಾಡ, ತಾಯಿ ಜಿ.ಎಸ್. ಸುಶೀಲಾದೇವಿ ಆರ್. ರಾವ್. ವೃತ್ತಿಯಲ್ಲಿ ದಾವಣಗೆರೆಯ ಸರ್ಕಾರಿ (ಚಿಗಟೇರಿಯವರ ಸ್ಮಾರಕ) ಜಿಲ್ಲಾ ಆಸ್ಪತ್ರೆಯಲ್ಲಿ ಸಹಾಯಕ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜ್ಞಾನ ಪದವೀಧರರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಕತೆ, ಕವಿತೆ, ಪ್ರಬಂಧ, ವಿಮರ್ಶೆ, ನಾಟಕ, ಸಂಶೋಧನೆ. . ಮೊದಲಾದ ಪ್ರಕಾರಗಳಲ್ಲಿ ಬರಹ. ‘ಜನ್ನ ಮತ್ತು ಅನೂಹ್ಯ ಸಾಧ್ಯತೆ’, ‘ಮಗದೊಮ್ಮೆ ನಕ್ಕ ಬುದ್ಧ’ ‘ಕರಕೀಯ ಕುಡಿ’ ...
READ MORE