‘ಭೂಮಿಯ ಹಕ್ಕುದಾರರು’ ಮಲೆಯಾಳಂ ಪ್ರಮುಖ ಕತೆಗಾರ ವೈ.ಕಂ. ಮುಹಮ್ಮದ್ ಬಷೀರ್ ಅವರ ಆಯ್ದ ಕತೆಗಳ ಕನ್ನಡಾನುವಾದ. ಯುವ ಬರಹಗಾರ ಸುನೈಫ್ ಅವರು ಮಲೆಯಾಳಂ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದು, ಸಾಹಿತಿ ಬೊಳುವಾರು ಮಹಮದ್ ಕುಂಞ್ ಅವರು ಬೆನ್ನುಡಿ ಬರೆದಿದ್ದಾರೆ.
ಗೋಡೆ, ಪ್ರೇಮಪತ್ರ, ಜನ್ಮದಿನದಂತಹ ಅದ್ಭುತ ಕತೆ, ಕವಿತೆಗಳನ್ನು ನೀಡಿದ ವೈಕಂ ಮುಹಮ್ಮದ್ ಬಷೀರ್, ಕನ್ನಡದ ಓದುಗರಿಗೆ ತೀರಾ ಪರಿಚಿತರು, ಪೇಪರ್ ಹಂಚುವವನಾಗಿ, ಪ್ರೆಸ್ಸಿನಲ್ಲಿ ಕರಡು ತಿದ್ದುವವನಾಗಿ, ಪತ್ರಿಕೆಯೊಂದರ ದನಿಯಾಗಿ, ರೈಲ್ವೆ ಸ್ಟೇಷನ್ ಮಾಸ್ತರನಾಗಿ, ಸನ್ಯಾಸಿಯಾಗಿ, ಭಿಕ್ಷುಕನಾಗಿ, ಕಣಿ ಹೇಳುವವನಾಗಿ, ಹಡಗಿನಲ್ಲಿ ಕೂಲಿಯಾಗಿ, ಹೋಟೆಲುಗಳಲ್ಲಿ ಗ್ಲಾಸು ತೊಳೆಯುವವನಾಗಿ, ಸ್ವಾತಂತ್ರ್ಯ ಹೋರಾಟಗಾರನಾಗಿ ಮತ್ತು ಅವುಗಳೆಲ್ಲದರ ಜೊತೆಗೆ ನನ್ನಜ್ಜನಿಗೊಂದಾನೆಯಿತ್ತು. ಪಾತುಮ್ಮನ ಆಡು ಮೊದಲಾದ ಕೃತಿಗಳ ಮೂಲಕ ಮಲೆಯಾಳಂ ಸಾಹಿತ್ಯಲೋಕವನ್ನು ಸುಲ್ತಾನನಂತೆ ಆಳಿದವರು ವೈ.ಕಂ. ಬಷೀರ್. ಅವರ ಆಯ್ದ 17 ಕತೆಗಳನ್ನು ಸುನೈಫ್ ಕನ್ನಡಕ್ಕೆ ಅನುವಾದಿಸಿದ್ದಾರೆ.
ಸುನೈಫ್, ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದವರು. ಸದ್ಯ ಉದ್ಯೋಗ ನಿಮಿತ್ತ ಕಲ್ಲಿಕೋಟೆಯಲ್ಲಿ ವಾಸವಿದ್ದಾರೆ. ಕವಿತೆ ಮತ್ತು ಅನುವಾದ ಇವರ ಇಷ್ಟದ ಹವ್ಯಾಸ .ಮಲೆಯಾಳಂ ಭಾಷೆಯಿಂದ ಹಲವು ಕಥೆ ಮತ್ತು ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಸೂಫಿ ಕಾವ್ಯಾನುವಾದಲ್ಲೂ ತೊಡಗಿಸಿಕೊಂಡಿದ್ದಾರೆ. ಮಲೆಯಾಳಂ ಪ್ರಮುಖ ಕತೆಗಾರ ವೈ.ಕಂ. ಮುಹಮದ್ ಬಷೀರ್ ಅವರ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿರುವ ‘ಭೂಮಿಯ ಹಕ್ಕುದಾರರು’ ಅವರ ಪ್ರಕಟಿತ ಕೃತಿ. ...
READ MORE