ಲೇಖಕಿ ಶಾಂತಾ ಪಸ್ತಾಪುರ ಅವರ ಕಥಾ ಸಂಕಲನ-ಬದುಕೇ ಒಂದು ಕಥೆ. ಆಶ್ರಯ, ಬಿಸಿಯೂಟ, ಬದುಕೇ ಒಂದು ಕಥೆ, ಏಳು ಮಲ್ಲಿಗೆ ಹೂವಿನ ತೂಕದ ರಾಜಕುಮಾರಿ, ಉಪವಾಸ ಸತ್ಯಾಗ್ರಹ, ಕೀಡಾರಾಮ್, ಆಯ್ಕೆ, ರಿಪೋರ್ಟ್, ಹೃದಯವಂತ, ಲಕ್ಕಿಪೆನ್ ಸೇರಿದಂತೆ ಇತರೆ ಕಥೆಗಳನ್ನು ಸಂಕಲಿಸಲಾಗಿದೆ. ಡಾ. ವಸುಂಧರಾ ಭೂಪತಿ ಅವರು ಕೃತಿಗೆ ಮುನ್ನುಡಿ ಬರೆದು ‘ಲೇಖಕಿಯು ಸರಳವಾದ ನಿರೂಪಣೆ, ಉತ್ತರ ಕರ್ನಾಟಕದ ಆಡುಮಾತಿನ ಭಾಷೆಯಲ್ಲಿ ಸೊಗಸಾಗಿ ಕಥೆಹಗಳನ್ನು ಹೆಣೆದಿದ್ದಾರೆ. ಬಹುತೇಕ ಎಲ್ಲ ಕಥೆಗಳನ್ನು ಹೆಣ್ಣಿನ ಒಳಸಂಕಟಗಳನ್ನು, ಬದುಕು ಬವಣೆಗಳನ್ನು ತೆರೆದಿಟ್ಟಿದ್ದಾರೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣಿನ ಶೋಷಣೆ ಹೇಗಾಗುತ್ತದೆ ಎಂಬುದನ್ನು ಚಿತ್ರಿಸಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ. ಲೇಖಕಿ ಶಾಂತಾ ಪಸ್ತಾಪುರ ಅವರು ‘ನಮ್ಮ ನಡುವೆ ಸಾಗುವ ಬದುಕಿನ ಆಗು-ಹೋಗುವ ಘಟನೆಗಳೇ ಇಲ್ಲಿ ಕಥೆಗಳಾಗಿವೆ. ನನ್ನ ಅನುಭವದ ಬುತ್ತಿಯನ್ನು ಬಿಚ್ಚಿ ಕಥೆ ಹೆಣೆಯಲು ಪ್ರಯತ್ನಿಸಿದ್ದೇನೆ’ ಎನ್ನುವ ಮೂಲಕ ಇಲ್ಲಿಯ ಕಥೆಗಳ ಹೂರಣವು ಬದುಕೇ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕವಿಯತ್ರಿ ಶಾಂತಾ ಪಸ್ತಾಪುರ ಮೂಲತಃ ಬೀದರದವರು. ತಂದೆ ರಾಚಪ್ಪ ಭಂಡಾರ, ತಾಯಿ ಮಹಾದೇವಿ ಭಂಡಾರ. ಎಸ್.ಎಸ್.ಎಲ್.ಸಿ.ವರೆಗೆ ಶಿಕ್ಷಣ. ಕಲಬುರಗಿಯಲ್ಲಿ ವಾಸವಿದ್ದಾರೆ. ಕೃತಿಗಳು: ಮನದಾಳದ ಮಾತು (ಕವನ ಸಂಕಲನ) ಪಯಣ (ಪ್ರವಾಸ ಕಥನ), ನೆನಪಿನಂಗಳ (ಕವನ ಸಂಕಲನ), ಕುಸುಮ ಬಾಲೆ (ಕವನ ಸಂಕಲನ), ಗೆಳೆತಿಯರ ದಂಡು ಯೂರೋಪ್ ಗೆ ಹೋಗಿದ್ದು (ಪ್ರವಾಸ ಕಥನ), ಬದುಕೇ ಒಂದು ಕಥೆ (ಕಥಾ ಸಂಕಲನ), ಅನುಭವ -ಅಭಿವ್ಯಕ್ತಿ ಮತ್ತು ಚಿಂತನ (ಲಲಿತ ಪ್ರಬಂಧಗಳು) , ಕಾವ್ಯಧಾರೆ (ಅವರು ರಚಿಸಿ, ಹಾಡಿದ ಧ್ವನಿ ಸುರುಳಿ) ಪ್ರಶಸ್ತಿ-ಪುರಸ್ಕಾರಗಳು: ಬದುಕೆ ಒಂದು ಕಥೆ ಕಥಾ ಸಂಕಲನಕ್ಕೆ ಶ್ರೇಷ್ಠ ಸಾಹಿತ್ಯ ಕೃತಿ ಪ್ರಶಸ್ತಿ, ಅಖಿಲ ...
READ MORE