‘ಮನಸೆಂಬ ಮಾಯಾವಿ’ ಕವಿ, ಲೇಖಕ ಕುಮಾರ ಬೇಂದ್ರೆ ಅವರ ಆಯ್ದ ಕಥಾಸಂಕಲನ. ಕಥೆಗಾರ ಕುಮಾರ ಬೇಂದ್ರೆಯವರು ಪ್ರಕಟವಾದ ಕಥಾ ಸಂಕಲನಗಳಾದ 'ಮಾದಪ್ಪನ ಸಾವು, ಅದೃಶ್ಯ ಲೋಕದ ಮಾಯೆ, ನಿರ್ವಾಣ ಮತ್ತು ಗಾಂಧಿ ವೃತ್ತದ ದಂಗೆ ಎಂಬ ನಾಲ್ಕು ಕೃತಿಗಳಿಂದ ಆಯ್ದ ಇಪ್ಪತ್ತೈದು ಉತ್ತಮ ಕತೆಗಳ ಸಂಕಲನವೇ 'ಮನಸೆಂಬ ಮಾಯಾವಿ'.
ಈ ಸಂಕಲನದ 'ರೊಟ್ಟಿ ಮತ್ತು ಕಲೆ' ಎಂಬ ಕತೆಯಲ್ಲಿ ಕುಮಾರ ಬೇಂದ್ರೆಯವರು 'ಬಡತನಾ ಅನ್ನೋದು ಇಂಥ ಎಷ್ಟೋ ಕತೆಗಳಿಗೆ ತಾಯಿ' ಎಂಬ ಬೀಜ ವಾಕ್ಯದಂಥ ಸಾಲು ಬರೆಯುತ್ತಾರೆ. ಇಲ್ಲಿನ ಕಥೆಗಳಲ್ಲಿ ಹಸಿವು, ಬಡತನ, ಮಹಿಳಾ ಸಮಾನತೆ, ದಲಿತ ಅಂತಃಕರಣ ಇಲ್ಲಿರುವ ಬರಹಗಳ ಪ್ರಮುಖ ವಿಷಯ ವಸ್ತುಗಳು. ವರ್ಗಭೇದ, ಲಿಂಗ ತಾರತಮ್ಯ, ಮಾನವ ಸಮಾಜದಲ್ಲಿನ ಅಸಮಾನತೆ ಕುರಿತು ಇಂದಿನ ಸಾಹಿತ್ಯ ಏನು ಹೇಳಬೇಕು ಎಂಬ ಅಂಶಗಳು ಕಥೆಗಳಲ್ಲಿವೆ.
ಗಾಂಧೀ ವೃತ್ತದ ದಂಗೆ’ಯಲ್ಲಿ ಭ್ರಷ್ಟಾಚಾರದ ವಿರುದ್ಧ ದಾದಾ ಸಾಹೇಬರು ನಡೆಸುವ ಹೋರಾಟ ಈ ಕಾಲಕ್ಕೂ ಪ್ರಸ್ತುತ ಎನಿಸುತ್ತದೆ. ಇನ್ನು ಹಳ್ಳಿ ಜಾತ್ರೆಯ ಸೊಗಡನ್ನು, ಅದರ ಹಿನ್ನೆಲೆಯನ್ನು ಕಟ್ಟಿಕೊಡುವ ಕತೆ , ಕುಮಾರ ಬೇಂದ್ರೆ ಸಾಮಾಜಿಕ ವ್ಯವಸ್ಥೆಯಲ್ಲಿ ಜನಸಾಮಾನ್ಯರು ಪಡುವ ಪಡಿಪಾಟಲನ್ನು ವಿವರಿಸಿದ್ದಾರೆ.
ಕುಮಾರ ಬೇಂದ್ರೆ ಜನನ 24-10-1977, ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಬೆಳ್ಳಟ್ಟಿಯಲ್ಲಿ ಪಡೆದರು. ಹುಬ್ಬಳ್ಳಿಯ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಿಂದ ಚಿತ್ರಕಲಾ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಪಡೆದಿದ್ದಾರೆ. ಇವರು ಹುಬ್ಬಳ್ಳಿ ನಿವಾಸಿಯಾಗಿದ್ದು 'ಉದಯವಾಣಿ' ಪತ್ರಿಕೆಯಲ್ಲಿ ಉಪಸಂಪಾದಕ ವೃತ್ತಿ, ಪತ್ನಿ ಅನುಪಮ, ಪುತ್ರರು ಚೇತನ, ಚಂದನ, ಎರಡು ದಶಕದಿಂದ ಸಾಹಿತ್ಯ ಕೃಷಿಯಲ್ಲಿ ಸಕ್ರಿಯರಾಗಿದ್ದಾರೆ. ಕುಮಾರ ಬೇಂದ್ರೆ ಅವರ ಪ್ರಕಟಿತ ಕೃತಿಗಳು ಮಾದಪ್ಪನ ಸಾವು (೨೦೦೫) ಅದೃಶ್ಯ ಲೋಕದ ಮಾಯೆ (೨೦೦೭) ನಿರ್ವಾಣ (೨೦೧೧) ಗಾಂಧಿ ವೃತ್ತದ ದಂಗೆ (೨೦೧೨) ...
READ MORE