‘ವಾಸ್ತವದ ಕನವರಿಕೆ’ ಡಿ. ಬಿ. ರಜಿಯಾ ಅವರ ಕಥಾಸಂಕಲನವಾಗಿದೆ. ಇಲ್ಲಿನ ಕಥಾಪಾತ್ರಗಳು ಜಾತಿಮತದ' ಕರಿ ನೆರಳಿನಿಂದ ಸಂಪೂರ್ಣ ಮುಕ್ತವಾಗಿದ್ದು ಮಾನವರೆಲ್ಲರ ಒಟ್ಟು ಸಮಸ್ಯೆಗಳನ್ನು ಒಂದಾಗಿ ತಿಳಿಯಲೆತ್ನಿಸುತ್ತದೆ.
ಡಿ. ಬಿ. ರಜಿಯಾ ಮೂಲತಃ ಬಳ್ಳಾರಿ ಜಿಲ್ಲೆಯ ಹಿರೇಕಾಳಿನವರು. 1954 ಜನವರಿ 26ರಂದು ಜನನ. ತಂದೆ ಹೆಚ್. ಇಬ್ರಾಹಿಂ, ತಾಯಿ ಸಕೀನಾ ಬೇಗಂ. ‘ಛಾಯೆ, ಕಳೆದು ಹೋಗುತ್ತೇವೆ, ಋತು’ ಎಂಬ ಹನಿಗವನಗಳನ್ನು ರಚಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆಯಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ. ‘ವಾಸ್ತವದ ಕನವರಿಕೆ’ ಅವರ ಕಥಾ ಸಂಕಲನವಾಗಿದೆ. ಅವರಿಗೆ ಡಾ. ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಗೀತಾ ದೇಸಾಯಿ ದತ್ತಿ ಬಹುಮಾನ, ಕರಾವಳಿ ಲೇಖಕಿಯರು ವಾಚಕಿಯರ ಸಂಘದ ಕೃಷ್ಣಬಾಯಿ ದತ್ತಿ ಬಹುಮಾನ, ಅಮ್ಮ ಪ್ರಶಸ್ತಿ, ಮಾತೃಶ್ರೀ ರತ್ನಮ್ಮ ಹೆಗಡೆ ಬಹುಮಾನ , ಹರಿಹರಶ್ರೀ ಪ್ರಶಸ್ತಿ, ...
READ MOREಹೊಸತು- ಸೆಪ್ಟೆಂಬರ್-2002
ಇಲ್ಲಿನ ಕಥಾಪಾತ್ರಗಳು ಜಾತಿಮತದ ಕರಿ ನೆರಳಿನಿಂದ ಸಂಪೂರ್ಣ ಮುಕ್ತವಾಗಿದ್ದು ಮಾನವರೆಲ್ಲರ ಒಟ್ಟು ಸಮಸ್ಯೆಗಳನ್ನು ಒಂದಾಗಿ ತಿಳಿಯಲೆತ್ನಿಸುತ್ತವೆ. ಕಾಲ್ಪನಿಕವಲ್ಲದ ನಾವು ನೀವು ಪ್ರಸ್ತುತದಲ್ಲಿ ಎದುರಿಸುವಂತಹ ವಾಸ್ತವವೊಂದನ್ನು ಸೋದರಿ ರಜಿಯಾ ತಮ್ಮೆಲ್ಲ ಕಥೆಗಳಲ್ಲಿ ಯಶಸ್ವಿಯಾಗಿ ಬಿಂಬಿಸಿದ್ದಾರೆ. ಸೌಹಾರ್ದ-ನಿರ್ಮಲ ವಾತಾವರಣ ಇರುವ ಕುಟುಂಬಗಳಲ್ಲಿ ಸಮಸ್ಯೆ ಗಳಿಗೆ ತನ್ಮೂಲಕ ಸಂಘರ್ಷಗಳಿಗೆ ಜಾಗವಿಲ್ಲದಿರುವುದನ್ನು ಮನಗಾಣಿಸಿದ್ದಾರೆ.