ನಮ್ಮ ಸುತ್ತಮುತ್ತಲಿನ ವಿಷಯ ವಸ್ತುಗಳನ್ನೇ ಇಟ್ಟುಕೊಂಡು ಕಟ್ಟಿರುವ ಕಥಾ ಗುಚ್ಛವೇ ಏಪ್ರಿಲ್ ಫೂಲ್. ಸಾಮಾಜಿಕ ಕಾರ್ಯಕರ್ತರಾಗಿರುವ ಹನುಮಂತ ಹಾಲಗೇರಿ ಅವರ ಕೃತಿಗಳಲ್ಲಿಯೂ ಪ್ರಸ್ತುತ ಸಮಾಜದ ಸ್ಥಿತಿಗತಿ, ಸಾಮಾಜಿಕ ಹೊಣೆಗಾರಿಕೆ ಕುರಿತು ಅರಿವು ಮೂಡಿಸುತ್ತವೆ ಎಂದರೂ ತಪ್ಪಾಗಲಾರದು. ಸಮಕಾಲೀನ ವಿಷಯಗಳಿಗೆ ಸ್ಪಂದಿಸುವ ಲೇಖಕ ಈ ಕೃತಿಗಳ ಮೂಲಕವೂ ಅಂತಹ ಒಂದು ಪ್ರಯತ್ನವನ್ನು ಮಾಡಿದ್ದಾರೆ. ಲಿಂಗ ತಾರತಮ್ಯ ತಾರಕ್ಕಕೇರಿದಾಗ ಗತಿಸಬಹುದಾದ ಕಲ್ಪನಾ ವಿಲಾಸಿ ಜಗತ್ತು, ಗಂಡಿಗೆ ಹೇಗೆ ಬೆವರಿಳಿಸಬಲ್ಲದು ಎಂಬ ಸಂಭವಿಸಬಹುದಾದ ಜಗತ್ತನ್ನು 'ಏಪ್ರಿಲ್ ಫೂಲ್' ಕತೆಯಲ್ಲಿ ಕಾಣಬಹುದು. ಮೇಲ್ನೋಟಕ್ಕೆ ತಿಳಿ ಹಾಸ್ಯದಂತೆ ಚಿತ್ರಿಸಿದ ಈ ಚಿತ್ರಕಥೆ ತನ್ನೊಡಳೊಗೆ ಅಸಂಖ್ಯಾತ ನೋವಿನ ನಗುಗಳನ್ನಿಟ್ಟುಕೊಂಡಿದೆ. ವ್ಯವಸ್ಥೆ ಪರಸ್ಪರ ಭಿನ್ನ ಲಿಂಗಿಗಳಿಗೆ ಸಹಜ ಸಮಾನತೆ ನೀಡದಿದ್ದರೆ, ಅದರ ಬುಡ ಮೇಲಾಗುವ ಸಣ್ಣ ಝಲಕ್ ಈ ಕತೆಯ ವಿನ್ಯಾಸ.
ಬಾಗಲಕೋಟೆ ಸಮೀಪದ ತುಳಸಿಗೇರಿಯವರಾದ ಹನಮಂತ ಹಾಲಿಗೇರಿಯವರು ಬಸವೇಶ್ವರ ಕಾಲೇಜಿನಲ್ಲಿ ಬಿ.ಎ. ವಿದ್ಯಾರ್ಥಿಯಾಗಿದ್ದರೂ ಅದನ್ನು ಅರ್ಧಕ್ಕೆ ಕೈ ಬಿಟ್ಟು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಗ್ರಾಮೀಣ ಅಭಿವೃದ್ಧಿ ವಿಭಾಗದಲ್ಲಿ ಪದವಿ ಪಡೆದರು. ಸರ್ವ ಶಿಕ್ಷಣ ಅಭಿಯಾನದ ಟೀಚರ್ ಆಗಿ ಮೂರು ವರ್ಷಗಳ ಕಾಲ ಗ್ರಾಮೀಣ ಗುರುಕುಲ ನಡೆಸಿರುವ ಅವರು, ನಂತರ ‘ಭೈಪ್’ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸೇರಿ ಅಲ್ಲಿಯೂ ಮೂರು ವರ್ಷ ಕೆಲಸ ಮಾಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಮಾಡುವ ಉದ್ದೇಶದಿಂದ ನಿಸರ್ಗ ಮಿಲ್ಕ್ ಡೈರಿ ಸಂಸ್ಥೆ ಕಟ್ಟಿದ್ದರು. ಕೆಂಗುಲಾಬಿ ಕಾದಂಬರಿ ಪ್ರಕಟಿಸುವ ಮುನ್ನ ಅವರು ಎಂಟನೇ ತರಗತಿಯಲ್ಲಿದ್ದಾಗ ‘ರೊಚ್ಚಿಗೆದ್ದ ...
READ MOREಏಪ್ರಿಲ್ ಫೂಲ್ ಪುಸ್ತಕದ ಕುರಿತು