'ಘಾತ' ಲೇಖಕಿ ಸಹನಾ ಅವರ ಕಥಾಸಂಕಲನವಾಗಿದೆ. ಹಸಿಮಣ್ಣಿನಂತೆ ಮನಸ್ಸಿರುವಾಗಲೇ ಪ್ರೀತಿಯೊಂದನ್ನು ಅಚ್ಚಾಗಿಸಿಕೊಂಡ ಶಾರ್ವಿ ಪ್ರಾಮಾಣಿಕವಾಗಿ ಪ್ರೀತಿಸಿದಳು. ತನ್ನಾತ್ಮ ಶಕ್ತಿಯನ್ನು ಕಂಡುಕೊಂಡಳು. ಆದರೆ ಪಡೆದದ್ದನ್ನೆಲ್ಲ ಉಳಿಸಿಕೊಳ್ಳಬಹುದೇ ? ಕಳೆದುದನ್ನು ಮತ್ತೆ ಪಡೆಯಬಹುದೇ ? ಹೃದಯ ಚೂರಾದರೆ ಮತ್ತೆ ಅವಳ ಪ್ರೀತಿ ಅದನ್ನು ಪೂರ್ಣ ಮಾಡುವುದೇ ? ಉತ್ತರಗಳೆಲ್ಲ ತೆರೆದ ಪುಟಗಳಲ್ಲಿ.! ( ಬೆನ್ನುಡಿ)
ಸಹನಾ ಹೆಗಡೆ ಹೂಡೇಹದ್ದ ಮೂಲತಃ ಉತ್ತರ ಕನ್ನಡ ಜಿಲ್ಲೆಯವರು. ಪ್ರಸ್ತುತ ಬಿಎಸ್ಸಿ ವ್ಯಾಸಂಗ ಮಾಡುತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದ ಓದು ಮತ್ತು ರಚನೆಯಲ್ಲಿ ಆಸಕ್ತಿಹೊಂದಿರುವ ಅವರು ಪುಸ್ತಕಗಳ ಓದಿನಿಂದ ಪಡೆದ ಸಾಹಿತ್ಯಾತ್ಮಕ ದೃಷ್ಟಿಕೋನಗಳು ಮತ್ತು ತತ್ವಗಳಿಂದ ನನ್ನ ಬದುಕು ಅಪಾರವಾಗಿ ಪ್ರಭಾವಿತವಾದ್ದರಿಂದ ಸಾಹಿತ್ಯ ಕ್ಷೇತ್ರಕ್ಕೆ ಸೇವೆಯನ್ನು ಮಾಡುವ ಇಚ್ಛೆಯನ್ನು ಹೊಂದಿದ್ದಾರೆ. ಕೆಲವು ಕವನಗಳು , ನಾಟಕ, ಲೇಖನ, ಕಥೆಗಳು, ಲಘು ವಿಮರ್ಶಾತ್ಮಕ ಟಿಪ್ಪಣಿಗಳನ್ನು ಬರೆದಿದ್ದು ಕೊಳಲು ,ಛಾಯಾಗ್ರಹಣ , ಯಕ್ಷಗಾನ ಮತ್ತು ರಂಗಭೂಮಿ ಇವುಗಳು ಆಸಕ್ತಿಯ ವಿಷಯಗಳಾಗಿವೆ. ...
READ MORE