‘ಆಷಾಢದ ಮಳೆ’ ಕೆ. ಎನ್. ಭಗವಾನ್ ಅವರ ಕಥಾಸಂಕಲನವಾಗಿದೆ. ಮಧ್ಯಮ ವರ್ಗದ ಜನರ ಬದುಕಿನ ಮಧ್ಯದಿಂದಾರಿಸಿದ ಸಾಂಸಾರಿಕ ಚಿತ್ರಣಗಳು ಕಥೆಗಳಾಗಿ ಉಳಿಯದೆ ಅಲ್ಲಿಯ ಇಲ್ಲಿಯ ನೈಜ ಘಟನೆಗಳೇ ಆಗಿಬಿಡುತ್ತವೆ. ಬದುಕನ್ನೇ ಕಥಾ ರೂಪದಲ್ಲಿ ತೋರಿಸುವ ಎಂಟು ಕಥೆಗಳ ಸಂಕಲನವಿದು.
ಲೇಖಕ ಕೆ.ಎನ್. ಭಗವಾನ್ ಅವರು (ಜನನ: 1942, ಜೂನ್ 9 ) ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕ್ಯಾಶಾವಾರ ಗ್ರಾಮದವರು. ಹುಟ್ಟೂರಿನಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ, ಅಕ್ಕರಾಂಪುರದಲ್ಲಿ ಮಾಧ್ಯಮಿಕ ಶಿಕ್ಷಣ ಮತ್ತು ಮಧುಗಿರಿಯಲ್ಲಿ ಪ್ರೌಢಶಾಲಾ ಶಿಕ್ಷಣ, ನಂತರ, ತುಮಕೂರಿನ ಪಾಲಿಟೆಕ್ನಿಕಲ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಪದವಿ ಪಡೆದರು. ದೆಹಲಿಯ ಏರೋನಾಟಿಕ್ ಸೊಸೈಟಿ ಆಫ್ ಇಂಡಿಯಾದಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಪದವಿ ಪಡೆದರು. ಮೈಸೂರು ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ಮೇಲ್ವಿಚಾರಕರಾಗಿ ಉದ್ಯೋಗಕ್ಕೆ ಸೇರಿದರು. ಎಚ್. ಎ. ಎಲ್ ಸಂಸ್ಥೆಯಲ್ಲಿ ಅಧಿಕಾರಿಗಳಾಗಿ 37 ವರ್ಷ ದೀರ್ಘಕಾಲ ...
READ MOREಹೊಸತು-2004- ಮೇ
ಲೋಕದ ವ್ಯವಹಾರಗಳು ತನ್ನ ಪಾಡಿಗೆ ತಾನು ನಡೆಯುತ್ತಲೇ ಇರತ್ತವೆಯೋ ನಾವೇ ನಮಗೆ ಬೇಕಾದಂತೆ ಅನಾಡದ ಮಳೆ ನಡೆಸಿಕೊಳ್ಳುತ್ತೇವೆಯೋ ಎಂಬ ಪ್ರಶ್ನೆ ಇಲ್ಲಿನ ಕಥೆಗಳಲ್ಲಿ ಇಣುಕು ಹಾಕುತ್ತದೆ. ಮನುಷ್ಯ ಸಂಬಂಧಗಳು ಎಲ್ಲೋ ಪ್ರಾರಂಭವಾಗಿ ಪ್ರವಾಹದಂತೆ ಎಲ್ಲಿಯೋ ಗುರಿಮುಟ್ಟುತ್ತವೆ. ಮಧ್ಯಮ ವರ್ಗದ ಜನರ ಬದುಕಿನ ಮಧ್ಯದಿಂದಾರಿಸಿದ ಸಾಂಸಾರಿಕ ಚಿತ್ರಣಗಳು ಕಥೆಗಳಾಗಿ ಉಳಿಯದೆ ಅಲ್ಲಿಯ ಇಲ್ಲಿಯ ನೈಜ ಘಟನೆಗಳೇ ಆಗಿಬಿಡುತ್ತವೆ. ಬದುಕನ್ನೇ ಕಥಾ ರೂಪದಲ್ಲಿ ತೋರಿಸುವ ಎಂಟು ಕಥೆಗಳ ಸಂಕಲನವಿದು.