‘ಹುಣಸೇ ಮತ್ತು ಇತರ ಕತೆಗಳು’ ದೀಪದ ಮಲ್ಲಿ ಅವರ ಕಥಾ ಸಂಕಲನವಾಗಿದೆ. ಇದಕ್ಕೆ ದಯಾ ಗಂಗನಘಟ್ಟ ಅವರ ಬೆನ್ನುಡಿ ಬರಹವಿದೆ: ಪರಂಪರೆ ಮತ್ತು ಆಧುನಿಕತೆ ಎರಡರ ಕಡೆಗೂ ಒಲವಿರುವ ದೀಪದಮಲ್ಲಿ ಅವರಿಗೆ ಹೊಸ ಹೊಸ ತಿಳುವಳಿಕೆಗಳ ಅಂದಂದಿನ ಪರಿಣಾಮಗಳ ಬಗ್ಗೆಯೂ ಪ್ರಜ್ಞೆ ಇದೆ. ಇವರ "ಹುಣಸೇ ಚಿಗುರು" ಕಥಾಸಂಕಲನದ ಕಥೆಗಳಲ್ಲಿ ಲೌಕಿಕದ ಹಲವು ಸಮಸ್ಯೆಗಳ ನಡುವೆಯೂ ಚಿಮ್ಮುವ ಜೀವನ ಪ್ರೀತಿ, ಇಲ್ಲಿಯ ಸ್ತ್ರೀ ಪ್ರಪಂಚ, ಕತೆಯನ್ನ ವ್ಯಕ್ತಪಡಿಸುವ ರೀತಿ ಭಿನ್ನವಾದದ್ದು. ಕಥೆಗಾರ್ತಿ ದೀಪದಮಲ್ಲಿ ಈ ಸಂಕಲನವನ್ನು ಸಾಮಾಜಿಕ ಆಗುಹೋಗುಗಳೊಂದಿಗೆ ಕಾಲ್ಪನಿಕತೆಯನ್ನು ಸಂಯೋಜಿಸುವ ವಿಧಾನದಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ವಿಧಾನದ ಚಂದವೇನೆಂದರೆ ಕಥೆಯೊಂದನ್ನ ನೀವು ಓದುತ್ತಾ ಹೋದಂತೆ ಕಥೆ ಪಾತ್ರಧಾರಿಗಳ ಹೋರಾಟಗಳು ನಾವೇ ಕಂಡುಂಡಂತೆ ನೈಜವೆಂದು ಭಾಸವಾಗುತ್ತಾ ಹೋಗುತ್ತವೆ. ಇಲ್ಲಿನ ಕೌಶಲ್ಯಪೂರ್ಣ ಕಥಾ ನಿರೂಪಣೆಯು ಓದುಗರನ್ನು ಮೊದಲಿನಿಂದ ಕೊನೆಯವರೆಗೆ ಹಿಡಿದಿಟ್ಟುಕೊಳ್ಳುತ್ತದೆ. ಇಲ್ಲಿನ ಕಥೆಗಳ ಮೂಲ ಸೆಲೆ ಮಾನವೀಯ ಕಳಕಳಿ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.
ಕವಿ, ಹೋರಾಟಗಾರ್ತಿ, ಕಲಾವಿದೆ ದೀಪಾ ಕೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಸಂಪಿಗೆ ಹಳ್ಳಿಯಲ್ಲಿ ಜನಿಸಿದರು. 'ದೀಪದಮಲ್ಲಿ' ಕಾವ್ಯನಾಮದಲ್ಲಿ ಬರವಣಿಗೆಯಲ್ಲಿ ತೊಡಗಿರುವ ಅವರು, ಸಾಹಿತ್ಯ, ರಂಗಭೂಮಿ ಮತ್ತು ಸಾಮಾಜಿಕ ಹೋರಾಟಗಳಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿ ತೊಡಗಿದವರು. ಹಲವಾರು ಸಾಮಾಜಿಕ ಸಂಘಟನೆಗಳ ಮೂಲಕ ಮಹಿಳೆಯರು, ಮಕ್ಕಳು, ಯುವಜನರು, ಲೈಂಗಿಕ ಅಲ್ಪಸಂಖ್ಯಾತರು ಹಾಗೂ ರೈತರ ಬಲವರ್ಧನೆಗಾಗಿ ಕೆಲಸ ಮಾಡಿದ್ದಾರೆ. ಇವರ ʼಅಸ್ಮಿತಾʼ ಕವನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2015ರಲ್ಲಿ ಚೊಚ್ಚಲ ಪುಸ್ತಕ ಬಹುಮಾನ ಲಭಿಸಿದ್ದು, ಅದೇ ಕೃತಿಗೆ ಕರ್ನಾಟಕ ಲೇಖಕಿಯರ ಸಂಘ ಕೊಡಮಾಡುವ ʼಶ್ರೀಲೇಖಾ ದತ್ತಿ ಪ್ರಶಸ್ತಿʼಯೂ ದೊರಕಿದೆ. ಬೆಂಗಳೂರು ವಿಶ್ವವಿದ್ಯಾಲಯದ ...
READ MORE