ಬೂತ

Author : ಕೃಷ್ಣ ಮಾಸಡಿ

Pages 130

₹ 90.00




Year of Publication: 2000
Published by: ಅಂತರಂಗ ಪ್ರಕಾಶನ
Address: ಜೀವಣ್ಣರಾವ್‌ ರಾಮನಗರ- 571 511

Synopsys

'ಬೂತ' ಶ್ರೇಷ್ಠ ಕತೆಗಾರರಾದ ಕೃಷ್ಣಮಾಸಡಿಯವರ ಕೃತಿಯಾಗಿದೆ. ಈ ಕೃತಿಯು ನವ್ಯ ಚಳವಳಿಯ ಅಂತ್ಯದಲ್ಲಿ ಬರೆಯಲು ತೊಡಗಿದ ಅವರ ಕತೆಗಳು ಇಲ್ಲಿವೆ. ಯಾವ ಚಳವಳಿಗಳ ವ್ಯಾಮೋಹಕ್ಕೂ ಬೀಳದೆ ಸ್ವತಂತ್ರ ಛಾಪು ಉಳಿಸಿಕೊಂಡಿರುವುದು ಈ ಕತೆಗಳಲ್ಲಿ ಕಂಡು ಬರುತ್ತದೆ. ಸರಿಸುಮಾರು ಎರಡು ದಶಕಗಳಿಂದ ಬರೆದ ಕತೆಗಳು ಇಲ್ಲಿವೆ. ಹಾದರ, ಪ್ರೇಮ ದುರಂತಗಳು ಕತೆಗಳಲ್ಲಿ ಎದ್ದು ಕಂಡರೂ, ನಮ್ಮ ಸಮಾಜದ ಬದುಕು ಬದುಕಿನೊಳಗಿರುವ ವಿವಿಧ ಸೂಕ್ತಗಳನ್ನು ವ್ಯಂಗ್ಯ ಹೇಳಿಕೆಗಳಷ್ಟೇ ಸೀಮಿತಗೊಳಿಸದೆ, ಉತ್ಕಟವಾದ ಸರಳತೆಯಿಂದ ಇವುಗಳು ಸಾಗುವುದನ್ನು ಇಲ್ಲಿ ಕಾಣಬಹುದು. ಕೆಲವು ಕತೆಗಳು ತೆರೆದಿಡುವ ಲೋಕ ಕಥನ ಕಲೆಯಲ್ಲಿಯೇ ವಿಶಿಷ್ಟವಾಗಿ ಉಳಿದುಕೊಳ್ಳುವಂದವು, ವಿನೂತನ ಶೈಲಿಯಲ್ಲಿರುವ ಇವುಗಳು ಬೀಸುವ ಗಾಳಿ ತನ್ನದೇ ಹೊಚ್ಚ ಹೊಸತನದೊಂದಿಗೆ ಆವರಿಸಿಕೊಳ್ಳುತ್ತವೆ. ಎಂದು ಅಂತರಂಗ ಪ್ರಕಾಶನ ಪುಸ್ತಕದ ಬಗ್ಗೆ ತಿಳಿಸಿದೆ.

About the Author

ಕೃಷ್ಣ ಮಾಸಡಿ

ಹೊನ್ನಾಳಿ ತಾಲ್ಲೂಕಿನ ಮಾಸಡಿಯಲ್ಲಿ ಜನಿಸಿದ ಕೃಷ್ಣ ಮಾಸಡಿಯವರು ಪತ್ರಕರ್ತರಾಗಿ, ಸಾಹಿತಿಯಾಗಿ, ಚಲನಚಿತ್ರ ನಿರ್ದೇಶಕರಾಗಿ ತಮ್ಮ ಪ್ರತಿಭೆಯನ್ನು ಕಾಣಿಸಿದ್ದಾರೆ. 'ಲಂಕೇಶ್ ಪತ್ರಿಕೆ'ಯಲ್ಲಿ ಆರಂಭಿಕ ವರದಿಗಾರರಾಗಿ, ಸಹ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.ಕರ್ನಾಟಕ ಸರ್ಕಾರದ ಚಲನಚಿತ್ರ ಸಹಾಯಧನ (2012) ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಚಲನಚಿತ್ರ ಪ್ರಶಸ್ತಿಗಳ ಆಯ್ಕೆ ಸಮಿತಿ ಸದಸ್ಯರೂ ಆಗಿದ್ದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಯು.ಆರ್. ಅನಂತಮೂರ್ತಿಯವರ 'ಅವಸ್ಥೆ' ಕಾದಂಬರಿ ಆಧಾರಿತ ಚಲನಚಿತ್ರವನ್ನು ನಿರ್ದೇಶಿಸಿದ್ದವರು ಮಾಸಡಿಯವರು. ತಮ್ಮದೇ ಕಾದಂಬರಿ 'ನಂಬಿಕೆಗಳು ಆಧರಿಸಿದ ಚಲನಚಿತ್ರವನ್ನೂ ನಿರ್ದೇಶಿಸಿದವರು. ಎಸ್. ನಿಜಲಿಂಗಪ್ಪ, ಡಿ. ದೇವರಾಜ ಅರಸು, ಪು.ತಿ.ನ., ಜಿ.ಎಸ್.ಎಸ್., ...

READ MORE

Related Books