ಕಿನ್ನರ ಕಥೆಗಳು

Author : ಎಂ.ವಿ ನಾಗರಾಜರಾವ್

Pages 124

₹ 81.00




Year of Publication: 2020
Published by: ಧೃತಿ ಪ್ರಕಾಶನ
Address: # 191/22, ಜಿ-2, 2ನೇ ಕ್ರಾಸ್, ವಿದ್ಯಾನಗರ, ಕುರುಬರಹಳ್ಳಿ ಮುಖ್ಯರಸ್ತೆ, ಪಿ. ಅಂಡ್ ಟಿ. ಎಂಪ್ಲಾಯಿಸ್ ಕಾಲೋನಿ, ಬೆಂಗಳೂರು-86.
Phone: 9845313583

Synopsys

ಕಿನ್ನರ ಕಥೆಗಳು-ಲೇಖಕ ಎಂ.ವಿ. ನಾಗರಾಜರಾವ್  ಅವರ ಸಂಗ್ರಹಾನುವಾದಿತ ಕೃತಿ. ಮಕ್ಕಳ ಲೋಕವಿಖ್ಯಾತ ವಿಜ್ಞಾನ ಮಾಲೆಯಡಿ ಧೃತಿ ಪ್ರಕಾಶನವು ಈ ಕೃತಿಯನ್ನು ಪ್ರಕಟಿಸಿದೆ. ಗ್ರಿಮ್ಸ್ ಸಹೋದರರು ಕಿನ್ನರ ಕಥೆಗಳನ್ನು ಬರೆದು 1812 ರ ಡಿಸೆಂಬರ್ 20 ರಂದು ಕೃತಿಯನ್ನು ಪ್ರಕಟಿಸಿದರು. ಮೊದಲು ಸಂಕಲನದಲ್ಲಿ ಬರೀ 86 ಕಥೆಗಳಿದ್ದು, ಅದರ 7ನೇ ಆವೃತ್ತಿಯು (1857) 210 ಕಥೆಗಳನ್ನು ಒಳಗೊಂಡಿತ್ತು. ಮಕ್ಕಳ ಕಲ್ಪನಾ ಸಾಮರ್ಥ್ಯವನ್ನು ಹೆಚ್ಚಿಸುವ, ಕಾಲ್ಪನಿಕ ಸೌಂದರ್ಯಕ್ಕೆ ಮತ್ತಷ್ಟು ಮೆರಗು ನೀಡುವ ಕಿನ್ನರ ಕಥೆಗಳು ಮಕ್ಕಳ ಮನಸ್ಸಿಗೆ ಮುದ ನೀಡುತ್ತವೆ. ಅವರ ಮನೋವಿಕಾಸದ ದೃಷ್ಟಿಯಿಂದ ಕಿನ್ನರ ಕಥೆಗಳು ಮಹತ್ವ ಪಡೆಯುತ್ತವೆ. ಇಂತಹ ಕಥೆಗಳನ್ನು ಸಂಗ್ರಹಿಸಿ ಮಕ್ಕಳಿಗೆ ಮುದ ನೀಡುವ ಹಾಗೆ ಸರಳವಾಗಿ ಭಾವಾನುವಾದ ಮಾಡಿದ್ದು ಈ ಕೃತಿಯ ವೈಶಿಷ್ಟ್ಯ.

About the Author

ಎಂ.ವಿ ನಾಗರಾಜರಾವ್

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಎಂ.ವಿ. ನಾಗರಾಜ ರಾವ್, ಸರ್ಕಾರಿ ಜೂನಿಯರ್‍ ಕಾಲೇಜಿನ ಉಪಾನ್ಯಾಸಕರು ನಂತರ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದಾರೆ. ಕನ್ನಡ ಹಾಗೂ ಹಿಂದಿಯಲ್ಲಿ ಎಂ.ಎ. ಹಾಗೂ ಬಿ.ಇಡಿ. ಸಾಹಿತ್ಯ ರತ್ನ ಪೂರೈಸಿದ್ದಾರೆ. ಜೇಮ್ಸ್ ಹ್ಯಾಡ್ಲಿ ಚೇಸ್ ಅವರ 20 ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ ಹೆಗ್ಗಳಿಕೆ ಇವರದ್ದು. ಹಾಸ್ಯ-ವಿಡಂಬನೆ-ವೈಚಾರಿಕತೆ ಸೇರಿದಂತೆ ಸುಮಾರು 300ಕ್ಕೂ ಅಧಿಕ ಲೇಕನಗಳನ್ನು ಬರೆದಿದ್ದಾರೆ. ಇವರ ‘ಕಂಪನ’ ಕಾದಂಬರಿಯು ಚಲನಚಿತ್ರವಾಗಿದೆ. ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಗಳನ್ನು ರಚಿಸಿದ್ದಾರೆ. 1985ರಲ್ಲಿ ಶೃಂಗಾರ ಪ್ರಕಾಶನ ಸಂಸ್ಥೆ ಸ್ಥಾಪಿಸಿ, ಸುಮಾರು  242 ಪುಸ್ತಕಗಳನ್ನು ಪ್ರಕಟಿಸಿದ್ದು, ಕರ್ನಾಟಕ ಸರ್ಕಾರದಿಂದ ‘ಪುಸ್ತಕ ಸೊಗಸು’ ಪ್ರಶಸ್ತಿ ಪಡೆದಿದ್ದಾರೆ.  ಅನುವಾದಿತ ಕೃತಿಗಳು : ಜೇಮ್ಸ್‌ ಹ್ಯಾಡ್ಲಿ ...

READ MORE

Related Books