ಲೇಖಕ ಶಶಿಕಿರಣ್ ಶೆಟ್ಟಿ ಅವರ ಕಥಾ ಸಂಕಲನ ಕೃತಿ ʻಬದುಕು ಬದಲಿಸುವ ಕತೆಗಳು- ನಿಜ ಜೀವನದ ವಿವಿಧ ರೀತಿಯ ಪಾಠಗಳ ಪುಟ್ಟ ಕೈಪಿಡಿʼ. ಜೀವನ ಕಲಿಸುವ ಪಾಠ ಬದುಕಿನಲ್ಲಿ ಮರೆಯಲಾಗದ ಅನುಭವ. ಅಂತಹ ಜೀವನಕ್ಕೆ ಸ್ಪೂರ್ತಿ ನೀಡಬಲ್ಲ ನೈಜ ಘಟನೆಗಳನ್ನು ಇಲ್ಲಿ ಸಣ್ಣ ಕತೆಗಳ ಮೂಲಕ ಹೇಳಿದ್ದಾರೆ. ಈಗಿನ ಯುವ ಪೀಳಿಗೆಯಲ್ಲಿ ಮಾನಸಿಕ ಸ್ಥೈರ್ಯ, ಆತ್ಮವಿಶ್ವಾಸ ಕುಂಠಿತ ಇರುವವರು, ತಾಳ್ಮೆ ಇಲ್ಲದವರಿಗಾಗಿ ಲೇಖಕರು ಈವರೆಗೆ ಬರೆದ ಸಣ್ಣ-ಸಣ್ಣ ಕತೆಗಳನ್ನು ಒಟ್ಟುಸೇರಿಸಿ ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ. ಪುಸ್ತಕದ ಪರಿವಿಡಿಯಲ್ಲಿ ರೈಟ್...ಹೋಗುವ, ಭಿಕಾರಿ ಯಾರು, ಒಂದು ರಬ್ಬರ್‌ನಿಂದ ಸಾಧ್ಯ, ಎಡವಿ ಬಿದ್ದಾಕ್ಷಣ ಅದು ಸೋಲಲ್ಲ, ಹೇ ನನ್ನ ಕ್ಷಮಿಸಿ ಬಿಡು, ಹಾಗೇ ಅತ್ತೆ ಕೂಡಾ ತನ್ನ ಮಕ್ಕಳ ತಾಯಿಯೇ ಅಲ್ಲವೇ, ದೇವರ ಲೆಕ್ಕಾಚಾರ ಅದೆಷ್ಟು ಸುಂದರ, ಕಾಮನ್ ಜ್ವರ, ದೇವರ ಆಟ ಬಲ್ಲವರಾರೋ?, ಹೀಗೊಂದು ಪ್ರೇಮಕತೆ, ಆ ಸಣ್ಣ ತಪ್ಪು ಮಾಡುವುದು ಒಳ್ಳೆಯದೇ, ಹಾಗೂ ಗೋಮುಖ ವ್ಯಾಘ್ರ ಸೇರಿ ಒಟ್ಟು 60 ಸಣ್ಣ ಕತೆಗಳಿವೆ.
ಶಶಿಕಿರಣ್ ಶೆಟ್ಟಿಯವರು ಉಡುಪಿಯ ಕೊಳಲಗಿರಿಯವರು. ಉಡುಪಿಯ ಎಸ್.ಡಿ.ಮ್. ಆಯುರ್ವೇದ ಕಾಲೇಜಿನಲ್ಲಿ ಆಯುರ್ವೇದ ಪದವಿಯನ್ನು ಪಡೆದು ಎಸ್.ಡಿ.ಮ್. ಆಯುರ್ವೇದ ಆಸ್ಪತ್ರೆಯಲ್ಲಿ ಆಯುರ್ವೇದ ವೈದ್ಯಕೀಯ ವ್ಯಾಸಂಗ ಮುಗಿಸಿ, ಪ್ರಸ್ತುತ ಉಡುಪಿಯ ಕೊಳಲಗಿರಿಯಲ್ಲಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದಾರೆ. ಜೊತೆಗೆ, ಜನ ಸೇವೆಗಾಗಿ ಹೋಂ ಡಾಕ್ಟರ್ ಫೌಂಡೇಶನ್ (ರಿ.) ಸಂಸ್ಥೆಯೊಂದನ್ನು ಸ್ಥಾಪಿಸಿ ತನ್ನ ಹುಟ್ಟೂರಿನ ಜನರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸಮಾಜ ಸೇವೆಯನ್ನು ಗುರುತಿಸಿ `ಎಮಿನೆಂಟ್ ಬಂಟ್ ಪರ್ಸನಾಲಿಟಿ ಪ್ರಶಸ್ತಿ’ ಬಂದಿದೆ. ಬರವಣಿಗೆ ಇವರ ನೆಚ್ಚಿನ ಹವ್ಯಾಸ. ವೃತ್ತಿಯ ಜೊತೆಜೊತೆಗೇ ಹಲವಾರು ಕತೆಗಳನ್ನು ಬರೆದಿದ್ದಾರೆ. ಅವೆಲ್ಲವನ್ನೂ ಒಟ್ಟುಗೂಡಿಸಿ 'ಬದುಕ ಬದಲಿಸುವ ಕತೆಗಳುʼ ಎನ್ನುವ ಕತಾಸಂಕಲ ಕೃತಿಯನ್ನು ಹೊರತಂದಿದ್ಧಾರೆ. ...
READ MORE