ಪೂರ್ಣಿಮಾ ಭಟ್ಟ ಸಣ್ಣಕೇರಿ ಅವರ ಸಣ್ಣ ಸಣ್ಣ ಕತೆಗಳ ಸಂಕಲನವೇ “ಕತೆ ಜಾರಿಯಲ್ಲಿರಲಿ”. ಹಲವು ಕಥೆಗಳನ್ನೊಳಗೊಂಡ ಈ ಕೃತಿಯು ಓದುಗನ ಮನಮುಟ್ಟುತ್ತದೆ. ಅಲ್ಲದೇ ಇದು ಈ ಹೊತ್ತಿಗೆ ಕಥಾ ಪ್ರಶಸ್ತಿ ವಿಜೇತ ಕೃತಿ ಕೂಡ ಹೌದು. ಮಗುವನ್ನು ಆಸ್ಪತ್ರೆಯಿಂದ ಮನೆಗೆ ಕರೆತಂದವನು ಅವನೇ... ಮಗಳನ್ನು ಪೂರ್ವಿ ಎಂದೇ ಕರೆಯಬೇಕೆಂದು ನಿರ್ಧರಿಸಿದವನು ಅವನೇ... ಹಡೆದ ಹನ್ನೊಂದನೇ ದಿನಕ್ಕೆ ಬೆತ್ತದ ಡಬ್ಬಿಯ ಮುಚ್ಚಳದಲ್ಲಿ ಗುಲಾಬಿ ದಾಸವಾಳದ ಪಕಳೆಯಂತೆ ಮಲಗಿದ ಮಗುವನ್ನು ಹೊತ್ತು ಹೊಸ್ತಿಲು ದಾಟಿಸಿದವನೂ ಅವನೇ... ದಾವಣಗೆರೆಗೆ ಹೊರಡುವ ಮುಂಚೆ ಪೂರ್ವಿಯನ್ನು ತೋಳಲ್ಲೆತ್ತಿಕೊಂಡು ಕುಮಾರವ್ಯಾಸ ಭಾರತದ 'ಗಜಮುಖನೆ ಮೆರೆವೇಕದಂತನೆ ನಿಜಗುಣಾನ್ವಿತ ಪರಶುಧಾರನೆ' ಸಾಲುಗಳನ್ನು ರಾಗಬದ್ಧವಾಗಿ ಹಾಡಿದವನೂ ಅವನೇ... ಮಗುವಿಗೆ ತಿಂಗಳು ತುಂಬಲು ಇನ್ನೇನು ಎರಡು ದಿನ ಇರುವಾಗ ದಾವಣಗೆರೆಯಿಂದ ಅಂಬ್ಯುಲೆನ್ಸಿನಲ್ಲಿ ಉದ್ದುದ್ದ ಮಲಗಿ ಹೆಣವಾಗಿ ಬಂದವನೂ ಅವನೇ. 'ಪಟಾಕಿ ಕೈಚೀಲ' ಕತೆಯಿಂದ ಒಂದು ಸಣ್ಣ ತುಣುಕು ಇದಾಗಿದೆ.
ವೈದ್ಯ ಸಾಹಿತಿ, ಕವಯತ್ರಿ ಪೂರ್ಣಿಮಾ ಭಟ್ ಅವರು ಮೂಲತಃ ಮಂಗಳೂರಿನವರು. ಭ್ರಮೆ (ಕವನ ಸಂಕಲನ), ಹಾಳೆಯಲ್ಲಿ ಜನ್ನ (ವೈದ್ಯಕೀಯ ಕೃತಿ) ಜನ್ಮಾಂತರ (ಅನುವಾದ), ನನ್ನ ಕಥೆ (ಕಮಲಾದಾಸ್ My story ಅನುವಾದ), ಸಾವು ಹೊಸದಲ್ಲ’ ಅವರು ಪ್ರಮುಖ ಕೃತಿಗಳು. ’'ಭ್ರಮೆ' ಕೃತಿಗೆ ಕ.ಸಾ.ಪ. ಬಹುಮಾನ, ಹಾಳೆಯಲ್ಲಿ ಜನ್ಮ ಕೃತಿಗೆ ಮೈ.ವಿ.ವಿ. ಆರ್.ಎಲ್. ನರಸಿಂಹಯ್ಯ ಸ್ಮಾರಕ ಬಹುಮಾನ ಪಡೆದಿದ್ದಾರೆ. ...
READ MORE