ಶ್ರೀಹರ್ಷ ಸಾಲಿಮಠ ಅವರ ’ಉದಕ ಉರಿದು’ ಕೃತಿಯು ಕತಾಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಡಾ. ಬಂಜಗೆರೆ ಜಯಪ್ರಕಾಶ್ ಅವರು `ಇಲ್ಲಿ ಕತೆ ಕಟ್ಟುವ ಕಸುಬುದಾರಿಕೆಗಿಂತಲೂ ನಡೆದದ್ದನ್ನು ನಿರೂಪಿಸುವ ಪ್ರತಿಭೆ ಹೆಚ್ಚು ಕ್ರಿಯಾಶೀಲವಾಗಿರುವುದು ಕಂಡು ಬರುತ್ತದೆ. ಈ ಕತೆಗಳಲ್ಲಿ ಅವರೊಳಗಿನ ಚಿಂತಕ ಕತೆಗಾರನಿಗೆ ಜಾಗ ಬಿಟ್ಟು, ಹಿಂದಿನ ಸಾಲಿನಲ್ಲಿ ಕೂರುತ್ತಾನೆ. ಹಾಗಾಗಿ, ಓದುಗ ಕತೆಯ ಓದಿನ ಸೊಗಸಾದ ಅನುಭವವನ್ನು ಅದರ ಮೂಲಸತ್ವದ ಸಮೇತವಾಗಿ ಪಡೆಯಲು ಸಾಧ್ಯವಾಗುತ್ತದೆ.
’ಗಂಧಕ್ಕೊಂದು ಬರೆ’, ’ಸದ್ಗತಿ’ ಹಾಗೂ ’ಉಡಾಳ ಬಸ್ಯಾನ ಖೂನಿ’ ಕತೆಗಳಲ್ಲಿ ಕತೆಗಾರನ ಸತ್ವ ಬಹಳ ತಾಜಾ ಆಗಿ ಅನಾವರಣಗೊಂಡಿದೆ. ಇವು ಗ್ರಾಮೀಣ ಜೀವನದ ಒಂದು ವಿಶಿಷ್ಟ ಪರಿಸರದ ಅನನ್ಯ ಕಥನಗಳಾಗಿವೆ. ಗ್ರಾಮ ಜೀವನದಲ್ಲಿ ಕಂಡುಬರುವ ಇಂತಹ ಕೋನಗಳನ್ನು ಆಯ್ಕೆ ಮಾಡಿಕೊಂಡು, ಅವುಗಳನ್ನು ಚಿತ್ರಿಸಿರುವ ಪರಿ ಶ್ರೀಹರ್ಷರಿಗೆ ಇರುವ ಬರವಣಿಗೆಯ ಹದಕ್ಕೆ ಕನ್ನಡಿ ಹಿಡಿಯುವಂತ್ತಿದೆ. ಅವರ ಸಾಹಿತ್ಯಾಸಕ್ತಿ ಮತ್ತು ಜೀವನಾನುಭವಗಳ ವಿಸ್ತಾರ, ಕನ್ನಡಕ್ಕೆ ಒಬ್ಬ ಒಳ್ಳೆಯ ಕತೆಗಾರರನ್ನು ಕೊಡಲು ಸಜ್ಜಾಗಿದೆ. ಕಥನ ಶೈಲಿಯೂ ಚೇತೋಹಾರಿಯಾಗಿದೆ’ ಎಂದು ಅಭಿಪ್ರಾಯಿಸಿದ್ದಾರೆ.
ಕಥೆಗಾರ ಶ್ರೀಹರ್ಷ ಸಾಲಿಮಠ ಮೂಲತಃ ದಾವಣಗೆರೆಯವರು. ಊರಿನಲ್ಲೇ ಪದವಿ ಹಾಗೂ ಮೈಸೂರಿನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ವೃತ್ತಿ ನಿಮಿತ್ತ ಎರಡು ವರ್ಷ ಚೆನೈನಲ್ಲಿದ್ದ ಅವರು ಕನ್ನಡಪ್ರಭದಲ್ಲಿ ವಿಜ್ಞಾನ ಅಂಕಣಕಾರರಾಗಿದ್ದರು. ನಂತರ ಅವರು ಬೆಂಗಳೂರಿನಲ್ಲಿ ಹತ್ತು ವರ್ಷಗಳ ಕಾಲ ಇದ್ದು ಕೆಲಸ ಮಾಡಿದರು. ಸದ್ಯ, ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೃತಿಗಳು: ಉದಕ ಉರಿದು (ಕಥಾ ಸಂಕಲನ) ...
READ MORE