ಚಿತ್ರಗುಪ್ತನ ಕತೆಗಳು

Author : ಕೆ. ಸತ್ಯನಾರಾಯಣ

Pages 1

₹ 120.00

Buy Now


Year of Publication: 2015
Published by: ಅಭಿನವ ಪ್ರಕಾಶನ
Address: ಅಭಿನವ, 17/18-2, ಮೊದಲನೆಯ ಮುಖ್ಯುರಸ್ತೆ, ಮಾರೇನಹಳ್ಳಿ ವಿಜಯನಗರ, ಬೆಂಗಳೂರು - 40
Phone: 9448804905

Synopsys

ಲೇಖಕ, ಕತೆಗಾರ ಕೆ. ಸತ್ಯನಾರಾಯಣ ಅವರ ಕಿರು ಕತೆಗಳ ಸಂಗ್ರಹ ’ ಚಿತ್ರಗುಪ್ತನ ಕತೆಗಳು’. ಇವರ ಹೊಸ ಕತೆಗಳ ಸಂಕಲನದಲ್ಲಿ ಒಟ್ಟು ಮೂವತ್ತು ಕತೆಗಳಿವೆ. ಭಾಷೆಯನ್ನು ಹಲವು ಸ್ತರಗಳಲ್ಲಿ ವಿಭಿನ್ನ ಅರ್ಥ ಪಡೆದುಕೊಳ್ಳುವಲ್ಲಿ ಇಲ್ಲಿನ ಕತೆಗಳು ತೆರೆದುಕೊಳ್ಳುತ್ತದೆ. ಇಲ್ಲಿ ಅರ್ಥಕ್ಕಿಂತ, ಕತೆಗಿಂತ, ಕಾರ್ಯಕಾರಣ ತರ್ಕಕ್ಕಿಂತ ಭಾವವೇ ಹೆಚ್ಚು ಮುಖ್ಯವಾಗುತ್ತದೆ, ಆ ಭಾವ ಓದುಗನಲ್ಲಿ ಹುಟ್ಟಿಸುವ ಸಂವೇದನೆಗಳು ಬಹಳ ಮುಖ್ಯವಾಗುತ್ತವೆ, ಒಟ್ಟು ಸಂವಹನ ಈ ಲಯದಲ್ಲಿ ಸಫಲಗೊಳ್ಳುವುದೇ ಕಥನ ಶೈಲಿಯ ವಿಶೇಷವಾಗಿ  ಹೆಚ್ಚಿನ ಕತೆಗಳು ಹೊಸತನವನ್ನು ಪಡೆದುಕೊಳ್ಳುತ್ತವೆ.

ವಿಭಿನ್ನ ಕತೆಗಳಿಗೆ ತೆರೆದುಕೊಂಡ ಲೇಖಕರ  ಪ್ರಯೋಗಶೀಲ ಸಾಹಸ ಮತ್ತು ಅದರ ಸಾಫಲ್ಯದ ಬಗ್ಗೆ ಮೆಚ್ಚುಗೆಯನ್ನು ಮೂಡಿಸುವ, ತೆಗೆದುಕೊಂಡ ಅವರ ದಿಟ್ಟತನದ ಬಗ್ಗೆ ಅಭಿಮಾನ ಹುಟ್ಟಿಸುವ ಅನೇಕ ಸಂಗತಿಗಳ ಕಥಾ ವಸ್ತುಗಳು ಇಲ್ಲಿನ ಕತೆಗಳು ಪಡೆದುಕೊಂಡಿವೆ.

ಇವರ ಕೃತಿಗೆ ಲೇಖಕ, ಚಿಂತಕ ಕೆ ಪಿ ಸುರೇಶ್ ಅವರು ಬಹಳ ಆಳವಾದ ಗ್ರಹಿಕೆಯಿಂದ ಕೂಡಿದ, ವಿಶಿಷ್ಟ ವಿಶ್ಲೇಷಣೆಯ ಮುನ್ನುಡಿಯನ್ನು ಬರೆದಿದ್ದಾರೆ. ಈ ಕೃತಿಯ ಬಗ್ಗೆ ಹೇಳುತ್ತಾ ”ಸತ್ಯನಾರಾಯಣ ಅವರ ಕಿರುಕಥೆಗಳು,ಲೇಖಕನೊಬ್ಬ ತನ್ನ ಹೆಗಲೇರಿರುವ ಕಥನ ಶೈಲಿ ಮತ್ತು ಕಾಣುವ ಬಗೆಯನ್ನು ಕೊಡವಿ ಹೊಸ ರೀತಿಯಲ್ಲಿ ನೋಡುವ/ಕಾಣುವ ಬಗೆಯನ್ನು ಅನ್ವೇಷಿಸುವ ಧೀರ ಪ್ರಯತ್ನ ಕನ್ನಡಕ್ಕೂ ಇದು ಹೊಸ ರೀತಿಯ ಸುಳುಹು. ಈ ಮಾತುಗಳು ವರಸೆಯ ಮಾತುಗಳಂತೆ ಕೇಳಬಾರದು. ಸತ್ಯನಾರಾಯಣ ತಮ್ಮ ಕಥೆಗಳಲ್ಲಿ ಮಾಸ್ತಿಯವರ ಒಂದು ಮಟ್ಟಿನಲ್ಲಿ ಕಥೆ ಕಟ್ಟುತ್ತಾ ಹೋಗುತ್ತಾರೆ. ಮಾಸ್ತಿಯವರ ವಿವರಗಳ ಹೃಸ್ವತನ ಸತ್ಯನಾರಾಯಣ ಅವರಲ್ಲಿಲ್ಲ, ಅವರ ಕಥೆಗಳಿಗೆ ನಿರೂಪಣೆಯ ವಿಸ್ತಾರವಿದೆ. ಆದರೆ ಅದು ವಿವರಗಳ ದುಂದುವಲ್ಲ ಪಾರಂಪರಿಕವಾಗಿ ನಮ್ಮಲ್ಲಿ ನೆಂಟರಿಷ್ಟರು ಲೋಕಾಭಿರಾಮದಲ್ಲಿ ಬಿಚ್ಚಿಡುತ್ತ ಹೋಗುವ ತಂತ್ರ ಇದು” ಎನ್ನುವ ಮುಕ್ತ ಅನಿಸಿಕೆಗಳನ್ನು ಮುನ್ನುಡಿಯಲ್ಲಿ ವ್ಯಕ್ತಪಡಿಸಿದ್ದಾರೆ. 

About the Author

ಕೆ. ಸತ್ಯನಾರಾಯಣ
(21 April 1954)

ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ.  1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ.  ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...

READ MORE

Related Books