“ಅಮೃತ ಕಥಾನಕ” ಡಾ. ಕರೀಗೌಡ ಬೀಚನಹಳ್ಳಿ ಅವರ ಸಣ್ಣಕಥಾಸಂಕಲನವಾಗಿದೆ. ಇಲ್ಲಿ ಕನ್ನಡ ಸಣ್ಣಕಥೆಗಳ, ಕಿರುಗತೆಗಳ ಬೆಳವಣಿಗೆ ಹಾಗೂ ಅವುಗಳ ವಸ್ತುವೈವಿಧ್ಯತೆಯ ಹಿನ್ನೆಲೆಯಲ್ಲಿ 75 ಕಿರುಗತೆಗಳನ್ನು ಆಯ್ದು ಪ್ರಸ್ತುತ ಸಂಕಲವನ್ನು ರೂಪಿಸಲಾಗಿದೆ. ಈ ಕಿರುಗತೆಗಳು ಮುಖ್ಯವಾಗಿ 1950 ರಿಂದ 2025ರ ನಡುವೆ ಪ್ರಕಟವಾದ ಕಥೆಗಳಾಗಿವೆ. ಈ ಕಥೆಗಳನ್ನು ಅವುಗಳ ವಸ್ತು, ಮಿತಪಾತ್ರಗಳು, ಮಿತ ಘಟನೆಗಳು, ಸಂಕ್ಷಿಪ್ತತೆ, ನಿರೂ ನಿರೂಪಣೆ, ಭಾಷೆ, ಪರಿಣಾಮ, ಬಹುತ್ವ ಇತ್ಯಾದಿ ಗುಣಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಆಯ್ಕೆ ಮಾಡಿದ್ದಾಗಿದೆ. ಈ ಘಟ್ಟದ ಕಥೆಗಳ ವಸ್ತುಗಳ ಬಗ್ಗೆ ಹೇಳುವುದಾದರೆ, ಜಾತಿ, ಧರ್ಮ, ಮದುವೆ, ಬಡತನ, ಬಹಿಷ್ಕಾರ, ಅಸ್ಪೃಶ್ಯತೆ, ಅಸಮಾನತೆ, ಸ್ತ್ರೀಯರು, ಮಕ್ಕಳು, ದಾಂಪತ್ಯ, ಕುಟುಂಬ, ಸಂಬಂಧ, ಅವಮಾನ, ದ್ವೇಷ, ಕ್ರೌರ್ಯ, ಶೋಷಣೆ, ಕೃಷಿ, ಪರಿಸರ, ಪಕ್ಷಿ, ಅಭದ್ರತೆ, ಜಮೀನ್ದಾರಿಕೆ, ಸಣ್ಣತನ, ಸ್ವಾರ್ಥ, ದುರಾಸೆ, ಲೋಲುಪತೆ, ಮಾನವೀಯತೆ, ಜೀವನ ಪ್ರೀತಿ, ಕಾರುಣ್ಯ - ಹೀಗೆ ಹತ್ತಾರು ಬದುಕಿನ ವಿಷಯಗಳಿಗೆ ಇಲ್ಲಿನ ಕಿರುಗತೆಗಳು ಮುಖ್ಯ ಭಿತ್ತಿಯಾಗಿವೆ; ಇವು ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಅನನ್ಯತೆಗಳಾಗಿಯೂ ಮೈದಾಳಿವೆ. ಮನುಕುಲವು ನಿರಂತರವಾಗಿ ಹಂಬಲಿಸುವ ಎಲ್ಲಾ ಕಾಲದ ಮೌಲ್ಯಗಳಾದ ಸಮಾನತೆ, ಸೋದರತ್ವ, ಸಹಿಷ್ಣುತೆ, ಸ್ವಾತಂತ್ರ್ಯ, ಜಾತ್ಯತೀತತೆ ಹಾಗೂ ಮನುಷ್ಯತ್ವದ ಘನತೆಗಾಗಿ ತುಡಿದಿವೆ.
ಕರೀಗೌಡ ಬೀಚನಹಳ್ಳಿ ಅವರು 1951 ಸೆಪ್ಟೆಂಬರ್ 10ರಂದು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಬೀಚನಹಳ್ಳಿಯಲ್ಲಿ ಜನಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು, ವ್ಯಷ್ಟಿ-ಸಮಷ್ಟಿ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿಯನ್ನು ಪಡೆದಿದ್ದಾರೆ. .ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಂಗದಲ್ಲಿ ಕಾರ್ಯ ನಿರ್ವಹಿಸಿದ ನಿವರು, ಹಂಪಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಪ್ರಸಾರಂಗದ ನಿರ್ದೇಶಕರಾಗಿ ನಂತರ ಕುಲಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡ ಸಾಹಿತ್ಯದೆಡೆಗಿನ ಒಲವು ಕಾಲೇಜು ದಿನಗಳಿಂದಲೇ ಸಾಹಿತ್ಯ ಕೃಷಿಯಲ್ಲಿ ತೊಡಗುವಂತೆ ಮಾಡಿತ್ತು. ಇವರು ಬರೆದ ಕಥೆ, ಕವನಗಳು ತುಮಕೂರು ವಿಶ್ವವಿದ್ಯಾಲಯ ಪದವಿ ತರಗತಿಗಳಿಗೆ ಪಠ್ಯವಾಗಿವೆ. ಇವರ ಕಥೆಗಳು ...
READ MORE