‘ಮೆಚ್ಚುಗೆಯ ಕತೆಗಳು’ ಲೇಖಕ ಡಾ. ಎಸ್.ಬಿ. ಜೋಗುರ ಅವರ ಇಷ್ಟದ ಕತೆಗಳ ಸಂಕಲನ. ಈ ಕೃತಿಯಲ್ಲಿ ಅವರ ಮನಸಿನ ಪದರುಗಳು ಸಂಕಲನದಿಂದ ಹಿಡಿದು ಮೋಹದ ಮೂಟೆಯ ತೂತುಗಳು ವರೆಗಿನ ಸಂಕಲನದ ಕತೆಗಳು ಸೇರಿಕೊಂಡಿವೆ. ಬಹುತೇಕ ಎಲ್ಲ ಕತೆಗಳು ನಾಡಿನ ಬೇರೆ ಬೇರೆ ಹೆಸರಾಂತ ಪತ್ರಿಕೆ ಮತ್ತು ಬ್ಲಾಗ್ ಗಳಲ್ಲಿ ಪ್ರಕಟವಾದವುಗಳು. ನನಗೆ ಮೆಚ್ಚುಗೆಯಾಗುವ ಕತೆಗಳನ್ನು ಹೀಗೆ ಒಂದೆಡೆ ಸೇರಿಸುವ ಹಂಬಲದಿಂದ ಈ ಕೃತಿ ರಚನೆಯಾಗಿದೆ. ಜೋಗುರ ಅವರ ಕತಾಸಂಕಲನಗಳಲ್ಲಿ , ತಮಗೆ ಹೆಚ್ಚು ಆಪ್ತವಾದ ಕತೆಗಳನ್ನು ಸಂಕಲಿಸಿದ್ದಾರೆ.
ವೈಚಾರಿಕ ಬರಹಗಾರ ಎಸ್. ಬಿ. ಜೋಗುರ ಅವರುಕಥೆಗಳನ್ನೂ, ಕಾದಂಬರಿ, ಲೇಖನಗಳನ್ನು ಬರೆದಿದ್ದಾರೆ.ಇವರ ನಿದರ್ಶನ' ಕಾದಂಬರಿಯು ಒಂದು ಕುಟುಂಬದ ಮೂರು ತಲೆಮಾರಿನ ಬದುಕನ್ನು ಕೇವಲ 147 ಪುಟಗಳಲ್ಲಿ ಅನಾವರಣಗೊಳಿಸಿದ ಕಾದಂಬರಿಯಾಗಿದೆ. ಅಸ್ಪಶ್ಯತೆಯೆಂಬ ವಿಷ ಕೂಸಿನ ಸುತ್ತ, ಓಡಿ ಹೋದ ಹುಡುಗ ಮರಳಿ ಬಂದ ಕಥೆ, ‘ಅಂತರಾಳದ ಮಾತು, ಇರದೇ ತೋರುವ ಬಗೆ’ ಅವರ ಮತ್ತೆರಡು ಕೃತಿಗಳು. ಕತೆಗಾರ ಮತ್ತು ಪತ್ರಕರ್ತ ಎಸ್. ಬಿ. ಜೋಗುರ ಅವರು ಮೂಲತಃ ಸಿಂದಗಿಯವರು. ಧಾರವಾಡದಲ್ಲಿ ನೆಲೆಸಿದ್ದರು. ‘ಮುಗ್ಗಲು ಮನಸಿನ ಪದರು’ ಅವರ ಕತಾ ಸಂಕಲನ. ಸಿಂದಗಿಯಲ್ಲಿ ‘ಜೋಗುರ ಪತ್ರಿಕೆ’ ನಡೆಸುತ್ತಿದ್ದರು. ಕಾರವಾರದ ಕರಾವಳಿ ಮುಂಜಾವು ಪತ್ರಿಕೆ ...
READ MORE