ದಡ

Author : ಮಧುರಾ ಕರ್ಣಮ್

Pages 144

₹ 130.00




Year of Publication: 2021
Published by: ಮಂಗಳ ಎಂಟರ್‌ಪ್ರೈಸಸ್‌

Synopsys

ದಡ ಮಧುರಾ ಕರ್ಣಮ್‌ ಅವರ ಕಥಾಸಂಕಾಲನವಾಗಿದೆ. ಅಕ್ಷರ, ಉದ್ಯೋಗ, ಸಾಮಾಜಿಕ ಅರಿವು ಬದಲಾವಣೆ, ಹೊಸ ಕಾಲದ ಸ್ತ್ರೀ ವಾದ ಅದರಾಚೆ ಮಿಡಿವ ಹತಾಶೆ, ನೋವು ಅನುಭವಿಸುವ ಪಾತ್ರಗಳು 'ದಡ' ಕಥಾ ಸಂಕಲನದಲ್ಲಿವೆ. ಒಂದು ರೀತಿಯಲ್ಲಿ ಹೆಣ್ಣು ಸಂಕಟದ ಕಥಾಕುಂಡವಿದೆ. ಬದಲಾದ ಜಾಗತಿಕ ಸ್ಥಿತ್ಯಂತರಗಳಿಗೆ ಚಾಚಿಕೊಳ್ಳುವ, ಐಟಿ.ಬಿಟಿ. ಕೊರೋನಾ ಸಂಕಷ್ಟಗಳಲ್ಲಿ ಮಧ್ಯಮ ವರ್ಗ ಅನುಭವಿಸುವ ಯಾತನೆಗಳು ಕೂಡಾ ಇಲ್ಲಿನ ಕಥೆಗಳಲ್ಲಿ ಮುಖ ಪಡೆದಿವೆ. ಒಟ್ಟು ಇವುಗಳಂತರಾಳದಲ್ಲಿ ಒಂದೇನೋ ಹುಡುಕಾಟವಿದೆ. ಹಳತನ್ನು ಕಳಚಿಕೊಳ್ಳದೆ, ಹೊಸದನ್ನು ಅಪ್ಪಿಕೊಳ್ಳಲಾಗದ 'ಥರ್ಡ್ ಅಂಪಾಯರ್' ಗೊಂದಲದ ಪರಸ್ಥಿತಿಯವು. 'ದಡ' ಕಥಾ ಸಂಕಲನ ಸೇರಿ ಮಧುರಾರ ಮೂರು ಕಥಾಸಂಕಲನಗಳನ್ನು ಓದಿದ ನಾನು, ಲೇಖಕಿ ಒಂದಿಷ್ಟು ದೂರ ಸಾಗಿದ್ದಾರೆ ಎಂದು ಅನ್ನಿಸದೆ ಇರಲಿಲ್ಲ. ವಸ್ತು ವಿವೇಚನೆ, ಶೈಲಿ ವಿಧಾನದಲ್ಲಿ ಬದಲಾವಣೆಗಳನ್ನು ಕಾಣುವ ಫ್ಲ್ಯಾಶ್ ಬ್ಯಾಕ್ ತಂತ್ರವೇ ಬಹುತೇಕ ಕಥೆಗಳಲ್ಲಿವೆ.

About the Author

ಮಧುರಾ ಕರ್ಣಮ್

ಬೆಳಗಾವಿಯಲ್ಲಿ ಜನಿಸಿ ವಿಜ್ಞಾನದಲ್ಲಿ ಬಿ.ಎಸ್ಸಿ. ಮತ್ತು ಎಲ್.ಎಲ್.ಬಿ. ಪದವಿ ಪಡೆದರು. ಆಗಲೇ ಸಾಹಿತ್ಯದ ಅಭಿರುಚಿ ಹೊಂದಿದ್ದರು. ದೆಹಲಿಯಲ್ಲಿ ವಾಸವಾಗಿದ್ದಾಗ ದೆಹಲಿ ಕರ್ನಾಟಕ ಸಂಘದ 'ಅಭಿಮತ' ಮಾಸಪತ್ರಿಕೆಯ ಮೂಲಕ ಅವರ ಕತೆಗಳು ಪ್ರಕಟವಾಗತೊಡಗಿದವು. ಬೆಂಗಳೂರಿಗೆ ಬಂದ ಮೇಲೆ ಸಾಹಿತ್ಯಾಸಕ್ತಿ ಇನ್ನೂ ಹೆಚ್ಚಾಗಿ ಕಥೆ, ಹಾಸ್ಯ, ಬರಹಗಳನ್ನೊಳಗೊಂಡು ಸುಮಾರು ನೂರೈವತ್ತಕ್ಕಿಂತಲೂ ಹೆಚ್ಚು ಕತೆ ಮತ್ತು ಲೇಖನಗಳು ನಾಡಿನ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿ ಅನೇಕ ಬಹುಮಾನಗಳನ್ನೂ ಪಡೆದವು.. ಇವೆಲ್ಲ ೧೬ ಕೃತಿಗಳಾಗಿ ಮೂಡಿ ಬಂದಿವೆ. ಅವುಗಳಲ್ಲಿ ಮೂರು ಹಾಸ್ಯ ಲೇಖನ ಮತ್ತು ಪ್ರಬಂಧಗಳ ಸಂಕಲನ ಹಾಗೂ ಒಂದು ಕವನ ಸಂಕಲನವೂ ...

READ MORE

Related Books