‘ಸ್ವಾತಂತ್ರ್ಯೋತ್ತರ ಕನ್ನಡ ಸಣ್ಣಕಥೆಗಳು’ ಲೇಖಕ ಕರೀಗೌಡ ಬೀಚನಹಳ್ಳಿ ಅವರು ಸಂಪಾದಿಸಿರುವ ಕತಾ ಸಂಕಲನ. ಇಲ್ಲಿ 1950ರಿಂದ 2000ವರೆಗಿನ ಆಯ್ದ ಕತೆಗಳು ಸಂಕಲನಗೊಂಡಿವೆ. ಕೃತಿಯಲ್ಲಿ ಬಿ.ಸಿ. ರಾಮಚಂದ್ರ ಶರ್ಮ ಅವರ ನಾಡು ಒಡೆಯಿತು, ಯು.ಆರ್. ಅನಂತಮೂರ್ತಿ ಅವರ ನವಿಲುಗಳು, ಯಶವಂತ ಚಿತ್ತಾಲ ಅವರ ಸೆರೆ, ಶಾಂತಿನಾಥ ದೇಸಾಯಿ ಅವರ ಮಂಜುಗಡ್ಡೆ, ಪಿ.ಲಂಕೇಶ್ ಅವರ ಮುಟ್ಟಿಸಿಕೊಂಡವನು, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಅವನತಿ, ವೀಣಾ ಶಾಂತೇಶ್ವರ ಅವರ ಕೊನೆಯ ದಾರಿ, ಬೆಸಗರಹಳ್ಳಿ ರಾಮಣ್ಣ ಅವರ ಗಾಂಧಿ, ಸುಧಾಕರ ಅವರ ಕಣ್ಣಿ ಕಿತ್ತ ಹಸು, ಶ್ರೀಕೃಷ್ಣ ಆಲನಹಳ್ಳಿ ಅವರ ಆಗಂತುಕ, ದೇವನೂರು ಮಹಾದೇವ ಅವರ ಗ್ರಸ್ತರು, ಕಾಳೇಗೌಡ ನಾಗವಾರ ಮಾಯೆ, ಜಿ.ಎಸ್, ಸದಾಶಿವ ಅವರ ಮೀಸೆಯವರು, ಶ್ರೀಕಂಠ ಕೂಡಿಗೆ ಅವರ ಮೂಗೂರಿನ ಐತಿಹ್ಯ, ಬರಗೂರು ರಾಮಚಂದ್ರಪ್ಪ ಅವರ ಕ್ಷಾಮ, ಎಸ್. ದಿವಾಕರ ಅವರ ಕ್ರೌರ್ಯ, ಜಯಂತ ಕಾಯ್ಕಿಣಿ ಅವರ ದಗಡೂ ಪರಬನ ಅಶ್ವಮೇಧ, ಸಾರಾ ಅಬೂಬಕರ್ ಅವರ ಪಯಣ, ರಾಘವೇಂದ್ರ ಪಾಟೀಲರ ಪ್ರತಿಮೆಗಳು, ವೈದೇಹಿ ಅವರ ಗುಲಾಬಿ ಮೃದು ಪಾದಗಳು, ಕೆ. ಸತ್ಯನಾರಾಯಣ ಅವರ ಒಂದು ಸೈಕಲ್ ಸಾಕು, ವಿವೇಕ ಶಾನಭಾಗ ಅವರ ಹುಲಿ ಸವಾರಿ, ನೇಮಿಚಂದ್ರರ ಹೊಸಹುಟ್ಟು, ಚೆನ್ನಣ್ಣ ವಾಲೀಕಾರ ಅವರ ಅಗಸರ ಅಣ್ಣೆಮ್ಮ, ಕುಂ.ವೀರಭದ್ರಪ್ಪ ಅವರ ರುದ್ರಪ್ಪನ ಖಡ್ಗ, ಬಿ.ಟಿ. ಲಲಿತಾ ನಾಯಕ್ ಅವರ ತಾಯಿ ಸಾಕೀಬಾಯಿ, ಬೊಳುವಾರು ಮಹಮದ್ ಕುಂಇ್ ಅವರ ದೃಷ್ಟಿ, ಕರೀಗೌಡ ಬೀಚನಹಳ್ಳಿ ಅವರ ಕೋಳಿಪಾಲು, ನಟರಾಜ್ ಹುಳಿಯಾರ್ ಅವರ ದಾದಾ ಕ ಪಹಾಡ್, ಫಕೀರ್ ಮಹಮದ್ ಕಟ್ಪಾಡಿ ಅವರ ಬುರ್ಖಾ, ಮೊಗಳ್ಳಿ ಗಣೇಶ್ ಅವರ ಬುಗುರಿ, ಬಿ.ಟಿ. ಜಾಹ್ನವಿ ಅವರ ಕಳ್ಳುಬಳ್ಳಿ, ಅಮರೇಶ ನುಗಡೋಣಿ ಅವರ ಮೀರುವ ಘನ, ಜಯಪ್ರಕಾಶ ಮಾವಿನಕುಳಿ ಅವರ ಅನುಗಾಲವು ಚಿಂತೆ ಜೀವಕೆ, ರಾಜಶೇಖರ ಹತಗುಂದಿ ಅವರ ಕಾಳ ಬೆಳದಿಂಗಳ ಸಿರಿ, ಕಲಿಗಣನಾಥ ಗುಡದೂರು ಅವರ ಹೊಸ ಅಂಗಿ, ಮಲ್ಲಿಕಾರ್ಜುನ ಹಿರೇಮಠ, ಶ್ರೀಧರ ಬಳಗಾರ ಅವರ ಇಳೆಯೆಂಬ ಕನಸು, ಹೆಚ್. ನಾಗವೇಣಿ ಅವರ ತಾಯ್ತನ ಎಂಬ 39 ಕತೆಗಳು ಸಂಕಲನಗೊಂಡಿವೆ.
ಕೇರಳದಲ್ಲಿ ಹುಟ್ಟಿ, ಚಿತ್ರದುರ್ಗ ಜಿಲ್ಲೆಯ, ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿ ಹಳ್ಳಿಯಲ್ಲಿದ್ದು, ತಿರುಕ ಎಂ ಕಾವ್ಯನಾಮದೊಂದಿಗೆ ಬೆಳೆದವರು. ತಂದೆ ಅನಂತ ಪದ್ಮನಾಭ ನಂಬೂದರಿ, ತಾಯಿ ಪದ್ಮಂಬಾಳ್. ಈ ಮಗುವಿಗೆ ದೇಹ ವಿಕಾರ ಹಾಗೂ ಮೆದುಳಿನ ಬೆಳವಣಿಗೆ ಸರಿಯಾಗಿರಲಿಲ್ಲ. ಮೂಕಾಂಬಿಕ ದರ್ಶನಕ್ಕೆ ಬಂದಿದ್ದ ದಂಪತಿ ಬಾರಕೂರಿನಲ್ಲಿ ತಂಗಿದ್ದರು. ಆ ಹಾದಿಯಲ್ಲಿ ಉಡುಪಿಗೆ ಹೊರಟಿದ್ದ ಮಂತ್ರಾಲಯದ ಪೀಠಸ್ಥ ಸ್ವಾಮಿಗಳು ಈ ಮಗುವನ್ನು ಕಂಡು ಕೀರ್ತಿವಂತನಾಗುವುದಾಗಿ ಹರಸುತ್ತಾರೆ. ತಂದೆ ಈ ಮಗುವನ್ನು ಸಾಕಲಾಗದೆ ಅತಿಥೇಯರಾಗಿದ್ದ ನರಸಿಂಹಯ್ಯ – ಪುತಲೀ ಬಾಯಿ ಅವರಿಗೆ ದತ್ಯತು ಕೊಟ್ಟು ಯಾತ್ರೆ ಹೊರಡುತ್ತಾರೆ. ಈ ಮಗು ಮುಂದೆ ರಾಘವೇಂದ್ರ ಎಂದು ನಾಮಕರಣವಾಗುತ್ತದೆ. ಕುಂದಾಪುರದ ಶಾಲೆಗೆ. ...
READ MORE