'ಸುನೀತಾಗೆ ಮಲ್ಲಿಗೆ ಎಂದರೆ ಇಷ್ಟ' ಲೇಖಕ ಭಾಸ್ಕರ ಹೆಗಡೆ ಅವರ ಮೊದಲ ಕಥಾಸಂಕಲನ. ಇಲ್ಲಿನ ಹತ್ತೂ ಕಥೆಗಳಲ್ಲಿನ ಸಮಾನ ಅಂಶ ಮನುಷ್ಯನ ಆಳದಲ್ಲಿ ಹುದುಗಿರುವ ತಣ್ಣನೆಯ ಕ್ರೌರ್ಯ, ಎಲ್ಲೋ ಧಿಗ್ಗನೆ ಎದ್ದು ಬರುವ ಮಾನವೀಯ- ಪ್ರೀತಿಯ ಸೆಲೆ, ಮನುಷ್ಯ ಸಂಬಂಧಗಳು ಕೂಡುವ, ಕಾಡುವ ಅನನ್ಯ ಪರಿ, ಆಧುನಿಕತೆ ನುಂಗುತ್ತಿರುವ ಅವನ ಸ್ಮೃತಿಗಳು, ಭ್ರಷ್ಟನಾಗುತ್ತಿರುವ ಅವನ ವ್ಯಕ್ತಿತ್ವ ಎಲ್ಲವೂ ಕಣ್ಣೆದುರು ಬರುತ್ತದೆ. ಹೀಗೆ ಬದುಕನ್ನು ಅದರ ವಿಶಿಷ್ಟತೆಯಲ್ಲಿ ಮತ್ತು ಸಮಗ್ರತೆಯಲ್ಲಿ ಒಟ್ಟಿಗೇ ಹಿಡಿಯಲು ಭಾಸ್ಕರ ಹೆಗಡೆ ಅವರು ಪ್ರಯತ್ನಿಸುತ್ತಾರೆ. ಹಾಗಾಗಿ, ಒಂದೇ ಸಂಕಲನದಲ್ಲಿ ತೀರ ಭಿನ್ನವೆನಿಸುವ ಕಥಾರಚನೆಗಳನ್ನು ಅವರು ನಮ್ಮೆದುರು ಇಡುತ್ತಾರೆ. ಮೊದಲಿಗೆ ಗಮನಸೆಳೆಯುವುದು ಇವರು ಬಳಸುವ ಆಧುನಿಕತೆಯ ಸ್ಪರ್ಶವಿರುವ ನುಡಿಕಟ್ಟುಗಳು, ರೂಪಕಗಳು. ಒಂದೊಂದು ಕಥೆಯನ್ನೂ ಇಡಿಯಾಗಿ ಒಂದು ರೂಪಕವನ್ನಾಗಿಸಲು ಭಾಸ್ಕರ ಹೆಗಡೆ ಅವರು ವಹಿಸಿರುವ ಪರಿಶ್ರಮ ಇಲ್ಲಿ ಎದ್ದು ಕಾಣುತ್ತದೆ.
ಪತ್ರಕರ್ತರಾಗಿರುವ ಭಾಸ್ಕರ ಹೆಗಡೆ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ (ಎಂ.ಎ.) ಪದವಿ ಪಡೆದಿದ್ದಾರೆ. ಮನೋಹರ ಗ್ರಂಥಮಾಲೆಯಿಂದ ಪ್ರಕಟವಾಗಿರುವ ಅವರ ’ಮೀಸೆ ಮಾವ’ ಮೊದಲ ಕಥಾ ಸಂಕಲನ. ...
READ MORE