‘ಜ್ಯೋತಿಷ್ಯದ ಕತೆಗಳು’ ವಿ.ಗಣೇಶ್ ಅವರ ಕಥಾಸಂಕಲನವಾಗಿದೆ. ಈ ಕೃತಿಯಲ್ಲಿ ನಾನು ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಏನನ್ನೂ ಹೇಳಲು ಹೋಗುತ್ತಿಲ್ಲ. ಕೃತಿಯ ಹೆಸರೇ ಸೂಚಿಸುವಂತೆ ನಾನು ಜ್ಯೋತಿಷ್ಯದ ಕೆಲವು ಅನುಭವದ ಕಥೆಗಳು,ಪುರಾಣದ ಕಥೆಗಳು ಹಾಗೂ ಅವರಿದರು. ಕಥೆಗಳನ್ನು ಇಲ್ಲಿ ಚಿತ್ರಿಸಿದ್ದೇನೆ. ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಲು ಈ ಕಥೆಗಳು ಖಂಡಿತ ಮಕ್ಕಳಿಗೆ ನೆರವಾಗುತ್ತವೆ.ಹಾಗಾಗಿ ನಾನು ಈ ಸಂಕಲನವನ್ನು ಮಕ್ಕಳಿಗ ಬರೆದು, ಇದಕ್ಕೆ 'ಮಕ್ಕಳ ಕಥಾಸಂಕಲನ' ಎಂದೇ ಹೆಸರಿಟ್ಟಿದ್ದೇನೆ. ಅಂದಾಕ್ಷಣ ದೊಡ್ಡವರು ಈ ಕಥೆಗಳನ್ನು ಓದಬಾರದೆಂದು ಏನೂ ಇಲ್ಲ, ಕೆಲವು ಕಥೆಗಳಾದರೂ ಅವರ ಮನಸ್ಸಿಗೆ ಮುದ ಕೊಡುವುದರಲ್ಲಿ ಹಿಂದೆ ಬೀಳುವುದಿಲ್ಲ ಎಂದು ಭಾವಿಸುತ್ತೇವೆ.
ವಿ.ಗಣೇಶ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರು. ಎಂ.ಎಸ್.ಸಿ, ಎಂ.ಎ., ಬಿ.ಎಡ್. ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಪ್ರೌಢಶಾಲಾ ಅಧ್ಯಾಪಕರಾಗಿ, ಗಣಿತ ಉಪನ್ಯಾಸಕರಾಗಿ, ಇಂಗ್ಲೀಷ್ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಬಿ.ಎಡ್.ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸುಮಾರು 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 75ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ...
READ MORE