ಲೇಖಕ ಗುರುಪ್ರಸಾದ್ ಕಂಟಲಗೆರೆ ಅವರು ರಚಿಸಿದ ಕಥಾಸಂಕಲನ ’ಕೆಂಡದ ಬೆಳುದಿಂಗಳು’ . ಈ ಕೃತಿಗೆ ಮುನ್ನುಡಿ ಬರೆದ ರಘುನಾಥ ಚ.ಹ. ಅವರು ’ಸಾಮಾಜಿಕ ನ್ಯಾಯದ ಬಗೆಗಿನ ಮಾತುಗಳು ಅಸಂಬದ್ಧ ಪ್ರಲಾಪದಂತೆ ಮುಖ್ಯವಾಹಿನಿಯ ಹಲವರಿಗೆ ಕಾಣಿಸುತ್ತಿರುವ ಹಾಗೂ ಬಹುತ್ವ, ಸಾಮರಸ್ಯ, ಸಮಾನತೆಯಂಥ ಶಬ್ಧಗಳೆಲ್ಲ ಸವಕಲಾಗಿರುವ ವಿಚಿತ್ರ ಸಂದರ್ಭದಲ್ಲಿ ನಾವು ಬದುಕುತ್ತಿದ್ದೇವೆ. ಈ ವಿರೋಧಾಭಾಸವನ್ನು ’ಕೆಂಡದ ಬೆಳುದಿಂಗಳು’ ಶೀರ್ಷಿಕೆ ಹಿಡಿದಿಡುವಂತಿದೆ’ ಎಂದು ಉಲ್ಲೇಖಿಸಿದ್ದಾರೆ.
’ಜನಪ್ರಿಯ ಕಥನ ಶೈಲಿಯನ್ನು ತೊರೆದು ರೂಪಾತ್ಮಕ ಮಾರ್ಗದ ಹುಡುಕಾಟ ಇಲ್ಲಿನ ಕಥೆಗಳಲ್ಲಿ ಬೀಜರೂಪದಲ್ಲಿದೆ’ ಎಂದು ಬೆನ್ನುಡಿ ಬರೆದಂತಹ ಜಿ.ಬಿ.ಆನಂದಮೂರ್ತಿ ಪ್ರಶಂಸಿಸಿದ್ದಾರೆ.
ತಮ್ಮ ಅನುಭವಗಳನ್ನು ಗಟ್ಟಿಯಾಗಿ ಕಥೆಗಳ ಮೂಲಕ ದನಿಸಿದವರು ಗುರುಪ್ರಸಾದ್ ಕಂಟಲಗೆರೆ. ಮೂಲತಃ ತುಮಕೂರಿನ ಕಂಟಲಗೆರೆಯವರು. ವೃತ್ತಿಯಲ್ಲಿ ಶಿಕ್ಷಕರು. ತಮ್ಮ ವೃತ್ತಿಯೊಂದಿಗೆ ಸಾಹಿತ್ಯ ಪ್ರೇಮವನ್ನು ಸಮಾನವಾಗಿ ನಿರ್ವಹಿಸುತ್ತಿರುವವರು. ತಮ್ಮ ಸಂವೇದನೆಗಳನ್ನು ಅಚ್ಚರಿ ಎನ್ನುವಂತೆ ಅಚ್ಚಿಳಿಸುವ ಯುವ ಬರೆಹಗಾರ. ಪ್ರಜಾವಾಣಿ, ವಿಜಯಕರ್ನಾಟಕ ಕತಾ ಸ್ಪರ್ಧೆಗಳಲ್ಲಿ ಹಲವಾರು ಬಹುಮಾನ ಪಡೆದಿದ್ದಾರೆ. 2017 ನೇ ಸಾಲಿನ ‘ಅನನ್ಯ ಪ್ರಶಸ್ತಿ’ ಅವರ ’ಗೋವಿನ ಜಾಡು’ ಕತಾ ಸಂಕಲನಕ್ಕೆ ಲಭಿಸಿದೆ. ‘ದಲಿತ ಸಾಂಸ್ಕೃತಿಕ ಕಥನಗಳ ಅಧ್ಯಯನ’ ಅವರ ಮತ್ತೊಂದು ಕೃತಿ. ...
READ MORE