ಸೂರ್ಯ ನಾರಾಯಣ ಹಿಳ್ಳೆಮನೆ ಅವರ ಕಥಾ ಸಂಕಲನ-ಗೋವು, ಮಹಿಷಿ ಮತ್ತು ಮಹಾವೃಕ್ಷ. ಪ್ರಕೃತಿಯ ಮಡಿಲಲ್ಲಿ ಬದುಕುವ ಮನುಷ್ಯ ತನ್ನ ಸುತ್ತಲಿನ ಪ್ರಕೃತಿಯ ಜೊತೆಗೆ ಒಂದು ರೀತಿಯ ಆದರ, ಪ್ರೀತಿ ಹೊಂದಿರುತ್ತಾನೆ. ತನ್ನ ಜೀವನಕ್ಕೆ ಸಹಾಯಕಾರಿಯಾಗುವ ದನ, ಎಮ್ಮೆ, ನಾಯಿ.. ಅಷ್ಟೇ ಏಕೆ ? ಮರಗಳ ಮೇಲೆಯೂ ಅಕ್ಕರೆ ಹೊಂದಿರುತ್ತಾನೆ. ಪರಸ್ಪರ ಅವಲಂಬನದಿಂದ ಒಂದು ರೀತಿಯ ಅವಿನಾಭಾವ ಸಂಬಂಧ ಮೂಡುತ್ತದೆ. ಗಡಿನಾಡು ಕುಂಬಳೆಯ, ಗ್ರಾಮೀಣ ಚಿತ್ರಣದೊಂದಿಗೆ, ಇಂತಹ ಸಂಬಂಧವನ್ನು ಪುಷ್ಟೀಕರಿಸುವ ಹಲವಾರು ಸತ್ಯಘಟನೆಗಳ ಆಧಾರಿತ ಚಿತ್ರಣವೇ ಈ ಕಥಾ ಸರಣಿ .
ಲೇಖಕ ಸೂರ್ಯ ನಾರಾಯಣ ಹಿಳ್ಳೆಮನೆ ಅವರು ಕಾಸರಗೋಡಿನ ಕುಂಬಳೆ ಗ್ರಾಮದವರು. ಪ್ರಸ್ತುತ, ಮಂಗಳೂರಿನ ಖಾಸಗಿ ಐಟಿ ಕಂಪೆನಿಯೊಂದರಲ್ಲಿ ಉದ್ಯೋಗಿ. https://sooryabaraha.blogspot.com ಅವರ ಬ್ಲಾಗ್. ಬರಹ ಇವರ ಹವ್ಯಾಸ. ಕೃತಿಗಳು: ಗೋವು, ಮಹಿಷಿ ಮತ್ತು ಮಹಾವೃಕ್ಷ (ಕಥೆಗಳು) ...
READ MORE