ಕತ್ತಲೆಯ ಬೆತ್ತಲು

Author : ಶ್ರೀರಾಜ್ ಎಸ್. ಆಚಾರ್ಯ

Pages 100

₹ 100.00




Year of Publication: 2019
Published by: ಜಾನಕಿರಾಮ ಪಬ್ಲೀಷರ್ಸ್
Address: ವಕ್ರಾಡಿ, ಕುಂದಾಪುರ 576257
Phone: 8762723716

Synopsys

“ಕತ್ತಲೆಯ ಬೆತ್ತಲು” ಕೃತಿಯು ಶ್ರೀರಾಜ್ ಆಚಾರ್ಯ ಎಸ್. ಅವರ ಕತಾಸಂಕಲನವಾಗಿದೆ. ಈ ಸಂಕಲನದಲ್ಲಿ ಒಟ್ಟು ಹದಿನೈದು ಕತೆಗಳಿವೆ. ಸಾಹಿತ್ಯದ ಎರಡು ಘನ ಉದ್ದೇಶಗಳನ್ನು ತಿಳಿಸುವ ಈ ಕೃತಿಯು ಪಾತ್ರಗಳ ಸ್ವಭಾವ ಚಿತ್ರಣ ಮತ್ತು ವಿಶ್ಲೇಷಣೆ, ಪಾತ್ರಗಳು ಬದುಕುತ್ತಿರುವ ಸಮಾಜದ ಹಲವು ಆಯಾಮಗಳ ಚಿತ್ರಣ ಮತ್ತು ವಿಶ್ಲೇಷಣೆಯನ್ನು ನೀಡುತ್ತದೆ. ಕತ್ತಲೆಯ ಬೆತ್ತಲು ಕತೆಯ ಸಾಲುಗಳು ಹೀಗಿವೆ; ನಾನೊಬ್ಬಳು ಕುರುಡಿ, ಕತ್ತಲೆಯ ಗಡಿಯಾಚೆ ದಾಟಿ ಒಮ್ಮೆ ನೋಡ್ಬೇಕು, ಬೆಳಕು ಹೇಗಿದೆ ಎಂದು..” ತನ್ನ ಕುಡುಕ ತಂದೆಯಿಂದಲೇ ಅತ್ಯಾಚಾರಕ್ಕೆ ಒಳಗಾದ ‘ಅಕ್ಷರ’ಳ ಬಗ್ಗೆ ನಿಷ್ಠುರವಾಗಿ ಬರೆಯುತ್ತಾ…‘ಗಾಳಿ ಬೀಸಿದಾಗ ತೋರುತ್ತಿದ್ದ ಆಕೆಯ ಒಣ ಹೊಟ್ಟೆಯ ಹೊಕ್ಕಳಿಗೆ ಕಣ್ಣಿಟ್ಟು ಎಂಜಲು ಸುರಿಸುತ್ತಿರುವ ಪಡ್ಡೆ ಹುಡುಗರ ಗುಂಪುಗಳನ್ನೆಲ್ಲಾ ಅವಳ ಹೆಜ್ಜೆಗಳು ದಾಟುತ್ತಿದ್ದವು” ಎಂದು ಲೇಖಕ ಇಲ್ಲಿ ಬರೆದಿರುವ ವಿಚಾರ ಕಾಮುಕ ಗಂಡಸರ ಸ್ವಭಾವದ ಬಗ್ಗೆ ರಾಜಿಯಿಲ್ಲದೆ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಆದರೆ ‘ಹೆಣ್ಣು- ಗಂಡುಗಳ ನಡುವಿನ ಪ್ರಕೃತಿ ಸಹಜ ಕಾಮ ಸಂಬಂಧದ ಬಗ್ಗೆ ಬರೆಯುವಾಗ ಇನ್ನೂ ಹೆಚ್ಚು ತಿಳುವಳಿಕೆ, ಸಹಾನುಭೂತಿಗಳು ಬೇಕಾಗುತ್ತದೆ ಎನ್ನುತ್ತಾರೆ. 

About the Author

ಶ್ರೀರಾಜ್ ಎಸ್. ಆಚಾರ್ಯ
(17 August 1997)

ಶ್ರೀರಾಜ್ ಎಸ್. ಆಚಾರ್ಯ ಅವರು ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಕ್ವಾಡಿಯವರು. 1997 ಆಗಸ್ಟ್ 17 ರಂದು ಜನನ. `ಕಾವ್ಯ ಬೈರಾಗಿ' ಎನ್ನುವ ಕಾವ್ಯ ನಾಮದಿಂದ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣವನ್ನು ವಕ್ವಾಡಿಯಲ್ಲಿ, ಪದವಿ ಪೂರ್ವ ಶಿಕ್ಷಣ ಮತ್ತು ಪದವಿ ಶಿಕ್ಷಣವನ್ನು ಭಂಡಾರ್ ಕಾರ್‍ಸ್ ಕಾಲೇಜು ಕುಂದಾಪುರ ಹಾಗೂ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಜಿಲ್ಲಾ ಮತ್ತು ರಾಜ್ಯ ಮಟ್ಟದ ಕಾರ್ಯಕ್ರಮಗಳನ್ನು ನಿರ್ವಹಿಸಿರುವ ಅವರು ಉಡುಪಿಯ ಸ್ಥಳಿಯ ದೃಶ್ಯ ಮಾಧ್ಯಮ “ಪ್ರೈಮ್ ಟಿವಿ”ಯಲ್ಲಿ ಮೂರು ವರ್ಷಗಳ ...

READ MORE

Related Books