ಆರ್ಯ ಅವರ ಈ ಹೊಸ ಕಥಾಸಂಕಲನವು ತನ್ನ ತಲೆಬರಹದಲ್ಲೇ ಸೂಚಿಸುವ ಹಾಗೆ ಹೊಸ ರೀತಿಯ ಕಥನಕ್ರಮವೊಂದನ್ನು ಪ್ರಯೋಗಿಸುವ ಉತ್ಸಾಹದಿಂದ ಉದ್ಯುಕ್ತವಾಗಿದೆ. ‘ಹೈಬ್ರಿಡ್’ ಎಂದು ಕರೆಯಲಾಗಿರುವ ಇಂಥ ಹೊಸ ಗ್ರಹಿಕೆಯ ಕ್ರಮವನ್ನು ಕನ್ನಡದಲ್ಲಿ ‘ಬೆರಕೆ’, ‘ಮಿಶ್ರಣ’, ‘ಕೂಡಲು’ ಇತ್ಯಾದಿ ಹೊಸದಾಗಿ ಸೃಷ್ಟಿಸಿಕೊಂಡ ಪದಗಳಿಂದ ಸೂಚಿಸಿಕೊಳ್ಳಬಹುದು. ಮೂಲತಃ ‘ಬೆರಕೆ’ ಎನ್ನುವ ಪರಿಕಲ್ಪನೆಯೇನೂ ಆಧುನಿಕ ಕನ್ನಡ ಸಾಹಿತ್ಯಕ್ಕೆ ಸಂಪೂರ್ಣ ಹೊಸತಲ್ಲ. ಪಶ್ಚಿಮ ಮತ್ತು ಪೂರ್ವದ ಮಾದರಿಗಳ ಬೆರಕೆ, ಹಳ್ಳಿ ಮತ್ತು ಪಟ್ಟಣದ ಅನುಭವಗಳ ಬೆರಕೆ, ಅಥವಾ ಭೂತ ಮತ್ತು ವರ್ತಮಾನದ ಗ್ರಹಿಕೆಗಳ ಬೆರಕೆ- ಹೀಗೆ ಹಲವಾರು ರೀತಿಗಳಲ್ಲಿ ಈ ಬೆರಕೆಯು ನಮ್ಮ ಸಾಹಿತ್ಯದ ವಿಭಿನ್ನ ಅಂಗಾಂಶಗಳಲ್ಲಿ ಈಗಾಗಲೇ ನಾನಾ ರೀತಿಗಳಿಂದ ಅಭಿನೀತವಾಗುತ್ತಲೇ ಬಂದಿದೆ. ಆದರೆ, ಪ್ರತಿ ಕಾಲಕ್ಕೂ ಹೊಸಹೊಸ ಮಾದರಿಯ ಬೆರಕೆಯ ಕಥನಗಳೇ ಬೇಕಾಗುತ್ತವೆ; ಮತ್ತು ಅಂಥ ಮಾದರಿಗಳನ್ನು ಹುಡುಕುವುದೇ ಅಂದಂದಿನ ಸಾಹಿತ್ಯದ ಕ್ರಿಯಾಶೀಲತೆಯೂ ಹೌದು. ಈ ದೃಷ್ಟಿಯಿಂದ, ಆರ್ಯ ಅವರ ಪ್ರಸ್ತುತ ಕಥನಗಳನ್ನು ಇಂಥ ಹೊಸ ಕ್ರಿಯಾಶೀಲ ಆವಿಷ್ಕಾರವೊಂದರ ಹುಡುಕಾಟ ಎನ್ನಬಹುದು.
’ಆರ್ಯ’ ಎಂಬ ಹೆಸರಿನಿಂದ ಸಾಹಿತ್ಯ ಕೃತಿ ರಚಿಸಿದ ಪಿ. ಆರ್. ಆಚಾರ್ಯ ಅವರು ಚಿತ್ರಕಲಾವಿದ, ನಾಟಕಕಾರರೂ ಆಗಿದ್ದರು. 1945ರ ಡಿಸೆಂಬರ್ 7ರಂದು ಉಡುಪಿಯಲ್ಲಿ ಜನಿಸಿದ ಆಚಾರ್ಯ ಅವರ ತಂದೆ ವಿಠಲಾಚಾರ್ಯ ಮತ್ತು ತಾಯಿ ರುಕ್ಮಿಣಿ. ಉಡುಪಿಯ ಬೋರ್ಡ್ ಹೈಸ್ಕೂಲಿನಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದ ಆರ್ಯ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕ ಮತ್ತು ಸ್ನಾತಕೋತ್ತರ (ಸಂಸ್ಕೃತ) ಪದವಿ ಪಡೆದಿದ್ದರು. 1963ರಲ್ಲಿ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ಸ್ವಾಮೀಜಿಯಾಗಿ ಸನ್ಯಾಸತ್ವ ಸ್ವೀಕರಿಸಿದ್ದರು. 1973 ರಲ್ಲಿ ಸನ್ಯಾಸತ್ವ ಬಿಡುವುದರ ಜೊತೆಗೆ ಮಠದ ವ್ಯವಸ್ಥೆಯಿಂದ ಹೊರಬಂದ ಆರ್ಯ ಅವರು ಸಿಂಡಿಕೇಟ್ ...
READ MORE