ಲೋಕವನ್ನು ಆವರಿಸಿರುವ ಚಿರ ದುಃಖ ’ವಾಲ್‍ಪೇಪರ್’ ಕೃತಿಯ ಬಹುತೇಕ ಕತೆಗಳಲ್ಲಿದೆ. ಯಾತನೆಯ ಹಲವು ಮೂಲಗಳನ್ನು ಅನುಕಂಪದಿಂದ ಗ್ರಹಿಸಲೆತ್ನಿಸುವ ಅಮರೇಂದ್ರರ ಕತೆಗಳು ಈ ಕಾಲದಲ್ಲಿ ಎಲ್ಲೆಡೆ ಚೆಲ್ಲಿರುವ ಹಿಂಸೆಯ ನಾನಾ ಮುಖಗಳನ್ನು ಕಾಣಲು ಹೊರಡುತ್ತವೆ. ಈ ಕಾಲದ ಅಗೋಚರ ಒತ್ತಡಗಳು, ಆಕಾಂಕ್ಷೆಗಳು, ಆದರ್ಶಗಳು ಇಲ್ಲಿನ ಕತೆಗಳ ಘಟನಾವಳಿಗಳು ಹಾಗೂ ಪಾತ್ರಗಳ ಮನೋಲೋಕಗಳಲ್ಲಿ ಒಡಮೂಡುತ್ತವೆ. ಬಹು ಅರ್ಥಗಳನ್ನು ಸೂಚಿಸುವ ಸಂಕೇತಗಳು ಹಾಗೂ ಸಾಂಕೇತಿಕ ಅರ್ಥಗಳನ್ನು ಹೊಮ್ಮಿಸುವ ಸನ್ನಿವೇಶಗಳ ಮೂಲಕ ಇಲ್ಲಿರುವ ಕತೆಗಳು ಕಟು ಸತ್ಯಗಳ ದರ್ಶನ ಮಾಡಲು ತೊಡಗುತ್ತವೆ.
1968 ಕೋಲಾರ ಜಿಲ್ಲೆಯ ಹೊಲ್ಲಂಬಳ್ಳಿಯಲ್ಲಿ ಜನಿಸಿದ ಅಮರೇಂದ್ರ ಹೊಲ್ಲಂಬಳ್ಳಿ, 1994ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸದ್ಯ ಬೆಂಗಳೂರಿನ ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮರುಮಾತು (ವಿಮರ್ಶಾ ಲೇಖನಗಳ ಸಂಕಲನ) ಸೇರಿದಂತೆ ಹಲವು ಕೃತಿಗಳನನ್ನು ಪ್ರಕಟಿಸಿದ್ದಾರೆ. ‘ಕಾಯ’ ಇವರ ಕಾದಂಬರಿ. ...
READ MORE