ಶ್ರೀಧರ ಬನವಾಸಿ ಅವರ ಸಣ್ಣಕತೆಗಳ ಸಂಕಲನ. ಈ ಸಂಕಲನದ ಬಗ್ಗೆ ಹಿರಿಯ ಕತೆಗಾರ ವೀರಭದ್ರ ಅವರು ’ಕಥೆಗಳಲ್ಲಿ ಕೆಲವು ವಿಷಯಗಳು ಕನ್ನಡಕ್ಕೆ ಹೊಸದು ವಿಶೇಷವಾಗಿ ಹಿಜಡಾ ಹಾಗೂ ಲಾರಿ ಡ್ರೈವರ್-ಕ್ಲೀನರ್‌ಗಳ ಕಥೆಯಂತೂ ಮನ ಮುಟ್ಟುವಂತೆ ಚಿತ್ರಿಸಿದ್ದಾರೆ. ಒಬ್ಬ ಅನುಭವಿ ಕಥೆಗಾರನಲ್ಲಿರುವ ಶಕ್ತಿಯನ್ನು ಫಕೀರನ ಕಥೆಗಳಲ್ಲಿ ಕಾಣಬಹುದು’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಸಂಕಲನಕ್ಕೆಅರಳು ಸಾಹಿತ್ಯ ಮತ್ತು ಕೆ ವಾಸುದೇವಾಚಾರ್ ಪ್ರಶಸ್ತಿಗಳುಸಂದಿವೆ.
'ಫಕೀರ’ ಎಂಬ ಅಂಕಿತದಲ್ಲಿ ಬರೆಯುವ ಶ್ರೀಧರ ಬನವಾಸಿ ಅವರು ಕತೆ-ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ 1985 ಫೆಬ್ರುವರಿ 6 ರಂದು ಜನಿಸಿದರು. ಬನವಾಸಿ ಉಜಿರೆ ಹಾಗೂ ದಾವಣಗೆರೆಯಲ್ಲಿ ಶಿಕ್ಷಣಾಭ್ಯಾಸ ಪೂರ್ಣಗೊಳಿಸಿ ಮೆಕ್ಯಾನಿಕಲ್ ಎಂಜನಿಯರಿಂಗ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಅಧ್ಯಯನ ಮಾಡಿದ್ದಾರೆ. ಕಾಲೇಜು ದಿನಗಳಿಂದಲೇ ಕತೆ, ಕಾವ್ಯ, ಅಂಕಣ ಬರಹಗಳಲ್ಲಿ ಆಸಕ್ತಿ ಇರುವ ಅವರು ‘ಅಮ್ಮನ ಆಟ್ರೋಗ್ರಾಫ್’, ’ದೇವರ ಜೋಳಿಗೆ’, ’ಬ್ರಿಟಿಷ್ ಬಂಗ್ಲೆ’, ‘ಬೇರು’ ಪುಸ್ತಕಗಳ ಮೂಲಕ ಕನ್ನಡ ಕಥಾಕ್ಷೇತ್ರದಲ್ಲಿ ಮಹತ್ವದ ಕಥೆಗಾರರಾಗಿ ಶ್ರೀಧರ ಬನವಾಸಿ ಗುರುತಿಸಿಕೊಂಡಿದ್ದಾರೆ. ಶ್ರೀಧರ್ ಅವರು ಹಲವು ವರ್ಷಗಳ ಕಾಲ ಮಾಧ್ಯಮ ಮತ್ತು ...
READ MOREಕೆ. ವಾಸುದೇವಾಚಾರ್ಯ ಪ್ರಶಸ್ತಿ
ಅರಳು ಸಾಹಿತ್ಯ ದತ್ತಿ ಪ್ರಶಸ್ತಿ