ಜೀವರೇಶಿಮೆ- ಚೀಮನಹಳ್ಳಿ ರಮೇಶಬಾಬು ಅವರ ಕಥಾ ಸಂಕಲನ. ಪಾತ್ರಗಳಲ್ಲಿ ಪರಿಪಕ್ವತೆ, ಕತೆಯ ಸದಾಶಯವನ್ನು ಸಾಧಿಸಿರುವ ಇಲ್ಲಿಯ ಕತೆಗಳು ಲೇಖಕರ ವಾಸ್ತವ ಪ್ರಜ್ಞೆಯಲ್ಲಿ ಬೆಂದವುಗಳಾಗಿವೆ. ಕೃತಿಗೆ ಬೆನ್ನುಡಿ ಬರೆದಿರುವ ಲೇಖಕ ಕೇಶವ ಮಳಗಿ ಅವರು “ಈ ಸಂಕಲನದ ಕಥೆಗಳನ್ನು ವಿಶಾಲವಾಗಿ ಎರಡು ಭಾಗಗಳನ್ನಾಗಿ ನೋಡಬಹುದು. ಗ್ರಾಮೀಣ ಪರಿಸರದಲ್ಲಿ ಬದುಕುತ್ತ, ಹೊರ-ಒಳಗಿನ ಬದುಕಿನ ಪಲ್ಲಟಗಳಿಗೆ ತೆರೆದುಕೊಳ್ಳುತ್ತಿರುವ ಪಾತ್ರಗಳು ಒಂದು ಬಗೆಯವು. ತಮ್ಮ ಬೇರನ್ನು ಹಳ್ಳಿಯಲ್ಲಿ ಹೊಂದಿ, ನಗರವಾಸಿಗಳಾಗಿ ಬದಲಾಗಿರುವ ಪಾತ್ರಗಳು ನೆನಪುಗಳಲ್ಲಿ ಸಿಲುಕಿ, ಹೊಸ-ಹಳತರ ನಡುವಿನ ಸಂಘರ್ಷದಲ್ಲಿ ತಮ್ಮ ಬದುಕಿನ ಅರ್ಥವನ್ನು ಕಂಡುಕೊಳ್ಳುವ ಬಗೆ ಇನ್ನೊಂದು ರೀತಿಯವು. ಇವೆರಡರ ತಿಕ್ಕಾಟದಲ್ಲಿ ಅವು ತೆಗೆದುಕೊಳ್ಳುವ ನಿಲುವಿಗೆ ಕಥೆ ಸೃಷ್ಟಿಸುವ 'ಪರಿಸರ'ವೂ ಕಾರಣವಾಗುವುದು ಗಮನಾರ್ಹ ಅಂಶವಾಗಿದೆ. ಕೆಲವು ಕಥೆಗಳ ಮುಖ್ಯ ಭೂಮಿಕೆಯನ್ನು ಹೆಣ್ಣು ಪಾತ್ರಗಳು ನಿರ್ವಹಿಸುತ್ತಿರುವುದು ಮತ್ತು ಅವು ಒಂದು ನಿರ್ಣಾಯಕ ಘಟ್ಟದಲ್ಲಿ ತೋರುವ ಪಕ್ವತೆಗಳು ಕೂಡ ಓದುಗನಿಗೆ ಮಹತ್ವದ ಅಂಶಗಳೇ” ಎಂದು ಕೃತಿಯ ಮಹತ್ವವನ್ನು ತೆರೆದಿಟ್ಟಿದ್ದಾರೆ.
ಸಂಶೋಧನಾ ವಿಜ್ಞಾನಿಯಾಗಿರುವ ಚೀಮನಹಳ್ಳಿ ರಮೇಶಬಾಬು ಚಿಂತಾಮಣಿ ತಾಲ್ಲೂಕಿನ ಚೀಮನಹಳ್ಳಿಯವರು. ‘ಪ್ರಶ್ನೆ ಮತ್ತು ದೇವರು’, ‘ಎರಡು ಲೋಟಗಳು’, ‘ಮಾಯಾ ಸರೋವರ’ ಎಂಬ ಕವಿತಾ ಸಂಗ್ರಹಗಳನ್ನು ‘ನಾಗ್ದಾಳೆ’ ಎಂಬ ಖಂಡಕಾವ್ಯವನ್ನು ‘ಹಸ್ತಬಲಿ’ ಎಂಬ ಕಥಾ ಸಂಕಲನ ಹಾಗು ‘ಹದ’, ‘ಬಲಿಹಾರ’, ‘ಟೈರ್ಸಾಮಿ’ ಎಂಬ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ‘ಕಾಡು ಹುವ್ವು’ ಇವರ ಸಂಪಾದಕತ್ವದಲ್ಲಿ ಬಂದಿರುವ ಅನುವಾದಿತ ಕವಿತೆಗಳ ಸಂಗ್ರಹ. ಮಾಸ್ತಿ ಕಾದಂಬರಿ ಪ್ರಶಸ್ತಿ, ಬೇಂದ್ರೆ ಗ್ರಂಥ ಬಹುಮಾನ, ಬೆಟಗೆರಿ ಕೃಷ್ಣಶರ್ಮ ಕಾದಂಬರಿ ಪ್ರಶಸ್ತಿ, ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿ, ವೀಚಿ ಉದಯೋನ್ಮುಖ ಪ್ರಶಸ್ತಿ, ಅರಳು ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ 2021ನೇ ...
READ MORE