ಲೇಖಕ ಸಿ. ಎಚ್. ರಾಜಶೇಖರ ಅವರ ಕೃತಿ- ಬುದ್ಧ ಮೋಹ, ಸಂಘರ್ಷವೇ ಧರ್ಮಯುದ್ಧವೆಂದ ಮತ್ತು ಇತರೆ ಬೆಳಕಿನ ಕಥೆಗಳು. ಅಮರ ಜಾತಕ ಕಥೆಗಳನ್ನು ಜಗತ್ತಿನ ಸರ್ವಶ್ರೇಷ್ಠ ಕಥೆಗಳೆಂದು ಪರಿಗಣಿಸಲಾಗಿದೆ. ಇಲ್ಲಿನ ಕಥೆಗಳ ಉದ್ದೇಶ, ಗುರಿ, ಮತ್ತು ಭರವಸೆ ಎಂದರೆ ಬದುಕಿನ ಉನ್ನತಿ, ಶ್ರೇಷ್ಠತೆ, ಯಶಸ್ಸು, ಪರಿಪೂರ್ಣತೆ ಹಾಗೂ ಸಂಕೋಲೆಗಳಿಂದ ವಿಮುಕ್ತಿಯೇ ಆಗಿದೆ. ಇದು ಬುದ್ಧನ ಜೀವನದ ಕತೆಯನ್ನು ಪ್ರತಿಬಿಂಬಿಸುವ ಬೃಹತ್ ಜ್ಞಾನಕೋಶ “ಸ್ವರ್ಣ ಖಜಾನೆ“ ಯಾಗಿದೆ. 25 ಬಿಡಿ ಸಂಪುಟಗಳ ಸಮಗ್ರ ಬುದ್ಧ ಸಾಹಿತ್ಯ ಮಾಲೆಯಡಿ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯು 24 ಶೀರ್ಷಿಕೆಗಳಾದ, ಪ್ರೀತಿ ಏಕೆ ಕಾಯ್ದಿಟ್ಟ ಖಾಸಗಿ, ಆದ್ದರಿಂದ ನಾನು ಹೇಳುವುದು ಏನೆಂದರೆ, ನಾವೇಕ ಮಿತ್ರದ್ರೋಹ ಮಾಡಬಾರದು?, ಧರ್ಮಯಜ್ಞ ಎಂದರೆ ಏನು?, ರಾಜ ಭ್ರಷ್ಟನಾದರೆ ಕಪ್ಪೆಗೂ ಕಷ್ಟವೆಂದ...!, ಅತಿ ಪ್ರೀತಿ ಕೊಟ್ಟ ಮೇಲೆ..!, ನಿನ್ನಿಂದ ನೀ ಪಾಪಿಯಾಗದೆ ಪುಣ್ಯವಂತನಾಗೆಂದ ಬುದ್ಧ, ಹೊಗಳಿದರೆ ಹೊಸತನ ಬಾರದು, ಅನುಭವದಿಂದ ಅಭಿಮಾನ ಕಳಿತವನ ಕಥೆ, ಮೈತ್ರಿಗೂ ಮಿಗಿಲು ಮಂಗಳ ಇಲ್ಲಿಂದ ಬುದ್ಧ, ಚಂಡಾಲ ಸಹೋದರರ ಬಂಡಾಯದ ಕಥೆ, ನಾವೇಕೆ ದ್ವೇಷವನ್ನು ಜಯಿಸಬೇಕು?, ಇಂದ್ರ ಮತ್ತೆ ಕಳಂಕಕ್ಕೆ ದೂಡದಿರೆಂದಳಾ ಅಪ್ಸರೆ, ವಂತ ನೀವೇಕೆ ಭಿಕ್ಷುವಾದಿರಿ ?, ನಾನು ಅಸದಿನ ಕುಮಾರ ಬಂದು ಬಿಟ್ಟಿದ್ದೇನೆ !, ವಜ್ರದ ಹೊಳಪನ್ನೇಕೆ ಕುಂದಿಸಲಾಗುವುದಿಲ್ಲ, ಸಿದ್ಧರಾಗಿ ನಮ್ಮ ರಾಣಿಯ ಬಯಕೆಯನ್ನು ತೀರಿಸೋಣ, ದೊರೆ ನೀನಿಲ್ಲದಿರಲು ಈ ಕಂಠೀಹಾರವೇಕೆ...?, ಆಕೆ ಬಂದಳು ಅವನ ಛಿದ್ರಗೊಳಿಸಿದಳು ಆದರೆ...!, ಬುದ್ಧ ಮೋಹ ನಿರ್ಮೋಹಗಳ ಸಂಘರ್ಷವೇ ಧರ್ಮಯುದ್ಧವೆಂದ, ರಾಜ ಆಲೋಚಿಸದಿರೆ ರಾಜ್ಯವೇ ನಷ್ಟ..!, ಕಾಲಚಕ್ರದೊಳ್ ಕಾಮಚಕ್ರದ ಲೀಲೆ ಕಂಡಿರೇನ್...!, ನಾರದನ ಗರ್ವಭಂಗ ಮಾಡಿದಳಾಕೆ ಪಾರಿಜಾತವ ಪಡೆದು, ಬುದ್ಧ ಧರ್ಮ ತನಗೆ ತಾನೇ ಉತ್ತರಾಧಿಕಾರಿ ಏಕೆಂದ?. ಇವೆಲ್ಲವುಗಳ್ನನು ಒಳಗೊಂಡಿರುತ್ತದೆ.
ಲೇಖಕ ಸಿ.ಎಚ್. ರಾಜಶೇಖರ್ ಅವರು ಸಮಗ್ರ ಬುದ್ಧ ಸಾಹಿತ್ಯ ಮಾಲೆ ಬಿಡಿ ಸಂಪುಟಗಳನ್ನು ರಚಿಸಿದ್ದಾರೆ. 'ಬುದ್ಧ ತನ್ನ ತಾ ಗೆದ್ದವನೇ ಸಂಗ್ರಾಮ ವಿಜೇತನೆಂದ', 'ಬುದ್ಧ ಜ್ಞಾನದ ಔಷಧಕ್ಕೆ ಸಂಭಾವನೆ ಇಲ್ಲೆಂದ', 'ಬುದ್ಧ ನಿನ್ನ ಅಂತರಂಗದ ಧ್ವನಿಯೇ ಭಾಗ್ಯವೆಂದ', 'ಬುದ್ಧ ಹೀಗೆ ಬದುಕಿ ಮೃತ್ಯುವನ್ನು ಜಯಿಸಿರೆಂದ', 'ಸಿದ್ಧಾರ್ಥ ಗೌತಮ ಬುದ್ಧನಾದ ಪರಿ', 'ಬುದ್ಧ ನಂದನ ಬೀಳ್ಕೊಟ್ಟ ಕಾಮ ತೊರೆಸಿ ಕಲ್ಯಾಣದತ್ತ', 'ಬುದ್ಧ ಮೋಹ ನಿರ್ಮೋಹಗಳ', 'ಬುದ್ಧ ನೀ ಅಲ್ಲೇ ನಿಲ್ಲೆಂದ ಅಂಗುಲೀಮಾಲಾ', 'ಬುದ್ಧನ ಸಂಧಿಸಿದ ಅಮ್ರಪಾಲಿ ಗಂಗೆಯಂತಾದಳು', 'ಬುದ್ಧ ಸಾಸಿವೆಕಾಳಲ್ಲಿ ಸಾಸಿರ ಕಥೆ ಸಾರಿದ ಕಿಸಾಗೋತಮಿಗೆ', 'ಹೆಣ್ಣು ಎಂದರೆ ...
READ MORE