ಇದೊಂದು ಕಥಾ ಸಂಕಲನ. ‘ಅನ್ನ ನುಂಗಿದ ಕೈ ಕೃತಿಯಲ್ಲಿ ಆಧುನಿಕ ಕಾಲದ ಬದುಕಿನ ಚಿತ್ರಣದ ಏಳು ಕಥೆಗಳಿವೆ. ಕೌಟುಂಬಿಕ ಸಮಸ್ಯೆಗಳು, ಸಜ್ಜನಿಕೆ, ಸೌಹಾರ್ದತೆಯ ಸೋಗಿನಲ್ಲಿ ಅಮಾಯಕರನ್ನು ಶೋಷಣೆ ಮಾಡುವ ಸಮಾಜ ವಿದ್ರೋಹಕ ಶಕ್ತಿಗಳ ಪರಿಚಯವನ್ನು ಮಾಡಿಕೊಡುವುದರ ಮೂಲಕ ಸಾಮಾಜಿಕ ಜಾಗ್ರತೆಯನ್ನು ಮೂಡಿಸುವಲ್ಲಿ ಇಲ್ಲಿಯ ಕಥೆಗಳು ಪ್ರಭಾವ ಮೂಡಿಸುತ್ತವೆ. ಹಣದ ಹಪಾಹಪಿತನದಿಂದಾಗಿ, ನಡೆಯುವ ಅನ್ಯಾಯ ಅನೀತಿಯಿಂದಾಗಿ ಮಾನವೀಯ ಮೌಲ್ಯಗಳು-ಸಂಬಂಧಗಳು ಹೇಗೆ ಅಪಮೌಲ್ಯವಾಗುತ್ತಿವೆ, ಪ್ರೀತಿ-ಆತ್ಮೀಯತೆಯ ಸಹಕಾರ ಬಂಧುತ್ವ ಹೇಗೆ ದೂರಾಗುತ್ತಿದೆ, ಹೇಗಾದರೂ ಮಾಡಿ ತಮ್ಮ ಸ್ವಾರ್ಥ ಸಾಧನೆ ಮಾಡಿಕೊಳ್ಳುವ ಬಗೆಯ ಕಥೆಗಳು ಓದುಗರನ್ನು ದಂಗು ಬಡಿಸುತ್ತವೆ. ಕುಡಿತದಿಂದ ಸಮಾಜದಲ್ಲಾಗುತ್ತಿರುವ ಅನಾಹುತಗಳಿಗೆ ಕಥೆಗಳು ಸಾಕ್ಷಿಯಾಗಿವೆ.
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಆರಗೋಡು ಗ್ರಾಮದ ಅರಗೋಡು ಸುರೇಶ ಶೆಣೈ 1966 ರ ಜೂನ್10ರಂದು ಜನಿಸಿದರು. ಧಾರವಾಡಕ್ಕೆ ಆಗಮನ. 1986ರಲ್ಲಿ ಆಶಾಜನಕ ಎಂಬ ಕನ್ನಡ ಸಾಪ್ತಾಹಿಕದ ಮೂಲಕ ಪತ್ರಿಕಾ ಕ್ಷೇತ್ರ ಪ್ರವೇಶಿಸಿದರು. ಕೈಗನ್ನಡಿ ಪತ್ರಿಕೆಯಲ್ಲಿ ವ್ಯವಸ್ಥಾಪಕ ಸಂಪಾದಕರಾಗಿದ್ದರು. 1989ರಲ್ಲಿ `ಸರಸ್ವತಿ ಪ್ರಭಾ'' ಎಂಬ ಕನ್ನಡ ಲಿಪಿಯಲ್ಲಿ ಕೊಂಕಣಿ ಪತ್ರಿಕೆಯ ಆರಂಭ. ಕಳೆದ 31 ವರ್ಷಗಳಿಂದ ಒಂದೇ ಒಂದು ಸಂಚಿಕೆಯು ಸಹ ವ್ಯತ್ಯಯವಾಗದೇ ನಿರಂತರ ಪ್ರಕಟಣೆ. ಸಮಗ್ರ ಉತ್ತರ ಕರ್ನಾಟಕದಲ್ಲಿಯೇ ಇಷ್ಟೊಂದು ಸುದೀರ್ಘ ಕಾಲ ಪ್ರಕಟಗೊಂಡ ಏಕ ಮಾತ್ರ ಕೊಂಕಣಿ ಪತ್ರಿಕೆ ಎಂಬ ಹೆಗ್ಗಳಿಕೆ. ಕೊಂಕಣಿಯಲ್ಲಿ 20ಕ್ಕಿಂತ ಅಧಿಕ ಕೃತಿಗಳ ರಚನೆ ಹಾಗೂ ಪ್ರಕಟಣೆ. ...
READ MORE